ಬ್ರೇಕಿಂಗ್ ನ್ಯೂಸ್
14-02-21 10:03 pm Prajwal Cinema Correspondent ಸಿನಿಮಾ
ಬೆಂಗಳೂರು, ಫೆ.14: ಭಾರೀ ಪೋಸ್ಟರ್ ನಿಂದಲೇ ಸದ್ದು ಮಾಡಿದ್ದ ಬಹುಭಾಷಾ ನಟ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ʻರಾಧೆ ಶ್ಯಾಮ್ʼ ತೆರೆಗೆ ಬರಲು ಸಿದ್ಧವಾಗಿದ್ದು ಇದೇ ಜುಲೈ 30ಕ್ಕೆ ರಿಲೀಸ್ ಆಗಲು ದಿನಾಂಕ ಫಿಕ್ಸ್ ಆಗಿದೆ. ಪ್ರೇಮಿಗಳ ನಡುವಿನ ವಿಭಿನ್ನ ಕತೆಯನ್ನು ಹೊಂದಿರುವ ರಾಧೆ ಶ್ಯಾಮ ಚಿತ್ರದ ಟೀಸರ್ ಅನ್ನು ವ್ಯಾಲಂಟೈನ್ಸ್ ಡೇ ದಿನವೇ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ.

ರೋಮ್ ದೇಶದ ಅತ್ಯಂತ ರಮಣೀಯ ಪ್ರದೇಶವೊಂದರ ದೃಶ್ಯಗಳೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ರೊಮೇನಿಯನ್ ರೈಲ್ವೆ ನಿಲ್ದಾಣದಲ್ಲಿ ಜನಸಮೂಹದ ನಡುವೆ ಪ್ರಭಾಸ್, ಪೂಜಾ ಹೆಗ್ಡೆಯನ್ನ ಹುಡುಕುತ್ತಾ ಇಟಾಲಿಯನ್ ಭಾಷೆಯಲ್ಲಿ 'Sei Un Angelo? Devo Morire per incontrarti? ಎಂದು ಕರೆಯುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತದೆ. ಆ ನಂತರ ಇಬ್ಬರ ನಡುವಿನ ಪ್ರೀತಿಯ ಸಂಭಾಷಣೆ ಟೀಸರ್ ಹೈಲೈಟ್.
ಸದಾ ಆಕರ್ಷಕವಾಗಿರುವ ರೋಮ್ ಪಟ್ಟಣ ಮತ್ತು ಅಲ್ಲಿನ ಅರಣ್ಯದ ಸುಂದರ ಪ್ರದೇಶಗಳಲ್ಲಿ ʻರಾಧೆ ಶ್ಯಾಮ್ʼ ಚಿತ್ರೀಕರಣಗೊಂಡಿದ್ದು, ಚಿತ್ರರಸಿಕರಿಗೆ ರಸದೌತಣ ನೀಡಲಿದೆ. ಇದರ ಝಲಕ್ ಅನ್ನು ಮೊದಲ ವಿಡಿಯೋದ ಮೂಲಕ ಪ್ರೇಕ್ಷಕರಿಗೆ ತೋರಿಸಿಕೊಟ್ಟಿದೆ. ಈ ದಶಕದ ಅತಿದೊಡ್ಡ ಪ್ರೇಮಕಥೆ ಅಂತಲೇ ಬಿಂಬಿತವಾಗಿರೋ ʻರಾಧೆ ಶ್ಯಾಮ್ʼ ಬಹುಭಾಷಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಡಾ.ಯು.ವಿ. ಕೃಷ್ಣಂ ರಾಜು ಮತ್ತು ಗೋಪಿಕೃಷ್ಣ ಚಲನಚಿತ್ರಗಳನ್ನು ಪ್ರಸ್ತುತ ಪಡಿಸಿದ ರಾಧಾಕೃಷ್ಣ ಕುಮಾರ್ ಈ ಚಿತ್ರಕ್ಕೂ ನಿರ್ದೇಶಕರು. ಯುವಿ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮುಖ್ಯ ಪಾತ್ರದಲ್ಲಿದ್ದಾರೆ.
ಚಿತ್ರವನ್ನು ವಂಶಿ, ಪ್ರಮೋದ್ ಮತ್ತು ಪ್ರಸೀಡಾ ನಿರ್ಮಿಸುತ್ತಿದ್ದಾರೆ.
This Valentines, let us celebrate love with the biggest announcement of the year! ☺️💕 #RadheShyam to release in a theatre near you on 30th July! 💥💥 #ValentinesWithRS
— Radhe Shyam (@RadheShyamFilm) February 14, 2021
Telugu : https://t.co/Dh687qoC69
Hindi : https://t.co/Xzqp4v4aCJ
Tamil : https://t.co/fl6zREDVFK pic.twitter.com/TFo4ttCEqF
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 08:58 pm
HK News Staffer
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm