ಬ್ರೇಕಿಂಗ್ ನ್ಯೂಸ್
13-02-21 02:36 pm Source: FILMIBEAT Manjunatha C ಸಿನಿಮಾ
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸುದ್ದಿಗೆ ಗ್ರಾಸವಾಗಿದ್ದ ನಟಿ ಸಂಜನಾ ಗಲ್ರಾನಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಜಾಮೀನು ದೊರೆತು ಜೈಲಿನಿಂದ ಹೊರ ಬಂದ ಬಳಿಕ ಯಾರ ಕೈಗೂ ಸಿಗದೆ, ಮಾಧ್ಯಮಗಳಿಂದಲೂ ದೂರವಿದ್ದ ನಟಿ ಸಂಜನಾ ಗಲ್ರಾನಿ, ಇದೀಗ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ತಾವು ಅನುಭವಿಸಿದ ಕಷ್ಟದ ದಿನಗಳು, ಭವಿಷ್ಯದ ಯೋಜನೆಗಳ ಜೊತೆ-ಜೊತೆಗೆ ತಮ್ಮ ಮದುವೆ ಹಾಗೂ ಇಸ್ಲಾಂ ಮತಾಂತರವಾದ ಬಗ್ಗೆಯೂ ಮಾತನಾಡಿದ್ದಾರೆ.
'ನನ್ನ ಮುಂದಿನ ಹಾದಿ ಬಹಳ ಕಠಿಣವಾಗಿರಲಿದೆ ಎಂಬ ಅರಿವಿದೆ. ನನಗೆ ಎದುರುಗೊಳ್ಳುವ ಎಲ್ಲ ಸಮಸ್ಯೆಗಳನ್ನು ನಗುವಿನೊಂದಿಗೆ, ಪ್ರೀತಿಯೊಂದಿಗೆ ಎದುರಿಸಲಿದ್ದೇನೆ. ನನಗೆ ನ್ಯಾಯಾಂಗದಲ್ಲಿ ವಿಶ್ವಾಸವಿದೆ. ನಾನು ಗೆಲುವು ಸಾಧಿಸಲಿದ್ದೇನೆ' ಎಂದಿದ್ದಾರೆ ಸಂಜನಾ.
ಹೌದು ನಾನು ಎಂಗೇಜ್ ಆಗಿದ್ದೇನೆ: ಸಂಜನಾ
ಸಂಜನಾ ಜೈಲಿನಲ್ಲಿದ್ದಾಗ ಅವರ ಮದುವೆ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಕೆಲವು ಚಿತ್ರಗಳು ಸಹ ವೈರಲ್ ಆಗಿದ್ದವು ಅದರ ಬಗ್ಗೆ ಮಾತನಾಡಿರುವ ಸಂಜನಾ, 'ಹೌದು, ನಾನು ಎಂಗೇಜ್ ಆಗಿದ್ದೇನೆ. ಲಾಕ್‌ಡೌನ್ ಸಮಯದಲ್ಲಿ ಸರಳ ಸಮಾರಂಭದಲ್ಲಿ ಎಂಗೇಜ್‌ಮೆಂಟ್ ಮುಗಿದಿದೆ. ಈ ವಿಷಯವನ್ನು ನನ್ನ ಬಂಧುಗಳಿಗೆ, ಸ್ನೇಹಿತರಿಗೆ ಸಹ ತಿಳಿಸಲಾಗದ ಹಾಗೆ ಆಗಿಬಿಟ್ಟಿತು' ಎಂದು ನೊಂದುಕೊಂಡಿದ್ದಾರೆ.
ಶೀಘ್ರದಲ್ಲಿಯೇ ಮದುವೆ ಆಗಲಿದ್ದೇನೆ: ಸಂಜನಾ
'ನಾವು ಶೀಘ್ರದಲ್ಲಿಯೇ ಮದುವೆ ಆಗಲಿದ್ದೇವೆ. ನಮ್ಮ ಮದುವೆ ಅದ್ಧೂರಿಯಾಗಿ ಆಗುವುದಿಲ್ಲ ಬದಲಿಗೆ ಯಾವುದಾದರೂ ಚಾರಿಟೇಬಲ್ ಸೊಸೈಟಿಯಲ್ಲಿ ನಡೆಯಲಿದೆ. ಅವಶ್ಯಕತೆ ಇರುವ ಜನರಿಗೆ ಸಹಾಯ ಮಾಡಿ ನಾವು ನಮ್ಮ ಮದುವೆಯನ್ನು ಸಂಭ್ರಮಿಸಲಿದ್ದೇವೆ' ಎಂದಿದ್ದಾರೆ. ಸಂಜನಾ ಅವರು ವೈದ್ಯ ಅಜೀಜ್ ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇಸ್ಲಾಂ ಗೆ ಮತಾಂತರವಾಗಿದ್ದು ನನ್ನ ವೈಯಕ್ತಿಕ ಆಯ್ಕೆ: ಸಂಜನಾ
'ನಾನು ಅಧ್ಯಾತ್ಮದ ಕಡೆ ಗಮನವಹಿಸುತ್ತಿದ್ದೇನೆ. ಕೆಲವು ತಿಂಗಳುಗಳಿಂದ ನಮಾಜು ಓದುವುದು ಅಭ್ಯಾಸ ಮಾಡಿಕೊಂಡಿದ್ದೇನೆ. ನಾನು ಕರ್ಮ ಮತ್ತು ದೇವರಲ್ಲಿ ನಂಬಿಕೆ ಇಟ್ಟವಳು, ಎಲ್ಲ ಧರ್ಮಗಳನ್ನು ನಾನು ಸಮಾನವಾಗಿ ಗೌರವಿಸುತ್ತೇನೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ನನ್ನ ವೈಯಕ್ತಿಕ ಆಯ್ಕೆ. ನನ್ನ ಈ ನಿರ್ಧಾರವನ್ನು ರಾಜಕೀಯಗೊಳಿಸುವುದು, ವಿಮರ್ಶೆಗೊಳಪಡಿಸುವುದು ನನಗೆ ಇಷ್ಟವಿಲ್ಲ' ಎಂದಿದ್ದಾರೆ ನಟಿ ಸಂಜನಾ.
ಹಲವು ಸಿನಿಮಾ ಆಫರ್‌ಗಳು ಸಂಜನಾ ಮುಂದಿವೆ
ನನ್ನ ಕೈಯಲ್ಲಿ ಕನ್ನಡದ ಹಾಗೂ ತಮಿಳಿನ ಕೆಲವು ಆಫರ್‌ಗಳು ಇವೆ. ಅವುಗಳನ್ನು ಮೊದಲು ಮುಗಿಸಬೇಕಿದೆ. ಅದಾದ ನಂತರ ಹಿಂದಿಯ ಒಂದು ವೆಬ್ ಸರಣಿಯಲ್ಲಿ ನಟಿಸಲಿದ್ದೇನೆ. ಇನ್ನೊಂದು ಹೊಸ ಸಿನಿಮಾದ ಆಫರ್ ಬಂದಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಹ ಸಕ್ರಿಯಳಾಗಬೇಕಿದೆ ಎಂದು ಭವಿಷ್ಯದ ಯೋಜನೆಗಳ ಬಗ್ಗೆ ಹೇಳಿದ್ದಾರೆ ಸಂಜನಾ.
This News Article is a Copy of FILMIBEAT
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 04:47 pm
Mangalore Correspondent
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
ದಶಮ ಸಂಭ್ರಮದಲ್ಲಿ ಮಿಥುನ್ ರೈ ಸಾರಥ್ಯದ ಪಿಲಿನಲಿಕೆ ;...
09-09-25 02:30 pm
Mangalore Accident, Kulur, Death: ಕುಳೂರಿನಲ್ಲಿ...
09-09-25 11:48 am
Gopadi Beach Drowning, Kundapura: ಕುಂದಾಪುರ ;...
08-09-25 12:08 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm