ಬ್ರೇಕಿಂಗ್ ನ್ಯೂಸ್
13-02-21 02:30 pm Source: FILMIBEAT Bharath Kumar K ಸಿನಿಮಾ
ಮದುವೆ ಆದ್ಮೇಲೆ ಚಿತ್ರರಂಗದಿಂದ ಹಿಂದೆ ಸರಿದಿದ್ದ ನಟಿ ಶಾಲಿನಿ ಅಜಿತ್ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿ ಚರ್ಚೆಯಾಗುತ್ತಿದೆ. ಸುಮಾರು 20 ವರ್ಷದ ನಂತರ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಮಣಿರತ್ನಂ ನಿರ್ದೇಶನ ಮಾಡಲಿರುವ ಮೆಗಾ ಚಿತ್ರದಲ್ಲಿ ಶಾಲಿನಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ ಶಾಲಿನಿ ನಟಿಸಲಿದ್ದಾರೆ. ಭಾರತೀಯ ಚಿತ್ರರಂಗದ ಹಲವು ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಪ್ರಾಜೆಕ್ಟ್‌ಗೆ ಈಗ ಶಾಲಿನಿ ಸರ್ಪ್ರೈಸ್ ಎಂಟ್ರಿಯಾಗಿದ್ದಾರೆ.
ಹೈದರಾಬಾದ್‌ಗೆ ತೆರಳಲಿದ್ದಾರೆ ಶಾಲಿನಿ?
ಮೊದಲ ಹಂತದಲ್ಲಿ ಚಿತ್ರೀಕರಣ ಮುಗಿಸಿರುವ ಪೊನ್ನಿಯನ್ ಸೆಲ್ವನ್ ಸಿನಿಮಾತಂಡ ಈಗ ಎರಡನೇ ಶೆಡ್ಯೂಲ್ ಆರಂಭಿಸಿದೆ. ಸದ್ಯದಲ್ಲೇ ಅಜಿತ್ ಅವರ ಪತ್ನಿ ಶಾಲಿನಿ ಹೈದರಾಬಾದ್‌ಗೆ ತೆರಳಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸದ್ಯಕ್ಕೆ ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗವಾಗಿಲ್ಲವಾದರೂ ಇದೊಂದು ಪ್ರಮುಖ ಪಾತ್ರ ಎಂದು ಹೇಳಲಾಗಿದೆ.

ಶಾಲಿನಿ ಕೊನೆಯ ಚಿತ್ರ ಯಾವುದು?
2000ನೇ ಇಸವಿಯಲ್ಲಿ ನಟ ಅಜಿತ್ ಅವರ ಕೈಹಿಡಿದ ಶಾಲಿನಿ ವೈವಾಹಿಕ ಜೀವನ ಆರಂಭಿಸಿದರು. 2001ರಲ್ಲಿ ಬಿಡುಗಡೆಯಾಗಿದ್ದ 'ಪರಿಯಾಧ ವಾರಂ ವೇಂಡುಂ' (Piriyadha Varam Vendum) ಚಿತ್ರದಲ್ಲಿ ಕೊನೆದಾಗಿ ಶಾಲಿನಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ತಮಿಳು ನಟ ಪ್ರಶಾಂತ್ ನಾಯಕರಾಗಿದ್ದರು.

ಶಾಲಿನಿ ಸಿನಿಮಾಗಳು ಕುರಿತು
ಶಾಲಿನಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ತೆಲುಗು, ತಮಿಳು, ಕನ್ನಡ ಹಾಗು ಮಲಯಾಳಂ ಭಾಷೆಯಲ್ಲಿ ಬಾಲನಟಿಯಾಗಿ ಸಿನಿ ಜರ್ನಿ ಆರಂಭಿಸಿದ್ದರು. 1986ರಲ್ಲಿ ರಿಲೀಸ್ ಆಗಿದ್ದ ವಿಷ್ಣುವರ್ಧನ್ ಅವರ ಚಿತ್ರ ''ಈ ಜೀವ ನಿನಗಾಗಿ'' ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಪುಟ್ಟ ಬಾಲಕಿ ಇದೇ ಶಾಲಿನಿ. 1997ರಲ್ಲಿ ಮಲಯಾಳಂ ಚಿತ್ರದಲ್ಲಿ ಚೊಚ್ಚಲ ಬಾರಿಗೆ ನಾಯಕಿಯಾಗಿ ನಟಿಸಿದ್ದರು.

ಪೊನ್ನಿಯನ್ ಸೆಲ್ವನ್ ಚಿತ್ರದ ಕುರಿತು
ಮಣಿರತ್ನಂ ಅವರ ಮೆಗಾಪ್ರಾಜೆಕ್ಟ್‌ನಲ್ಲಿ ನಟಿ ತ್ರಿಷಾ, ಐಶ್ವರ್ಯ ರೈ, ಜಯಂ ರವಿ, ಕಾರ್ತಿ, ಅಮಿತಾಭ್ ಬಚ್ಚನ್, ಚಿಯಾನ್ ವಿಕ್ರಂ, ಶೋಭಿತಾ, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
This News Article is a Copy of FILMIBEAT
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
10-08-26 11:00 pm
HK News Desk
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
10-08-26 08:49 pm
HK News Staffer
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm