ಬ್ರೇಕಿಂಗ್ ನ್ಯೂಸ್
03-02-21 04:42 pm Source: FILMIBEAT ಸಿನಿಮಾ
'ಮನರಂಜನೆ ಬಹಳ ಮುಖ್ಯ, ಆದರೆ ಮನರಂಜನೆಗಿಂತ ಜನರ ಆರೋಗ್ಯ, ಕ್ಷೇಮ ಮುಖ್ಯ, ಹಾಗಾಗಿ, ಚಿತ್ರಮಂದಿರಗಳಿಗೆ ಸದ್ಯಕ್ಕೆ ನೂರರಷ್ಟು ಅವಕಾಶ ಕೊಡುವುದು ಸೂಕ್ತವಲ್ಲ'' ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.
ಫೆಬ್ರವರಿ 1 ರಿಂದ ದೇಶಾದ್ಯಂತ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಆಸನ ಭರ್ತಿಯೊಂದಿಗೆ ಪ್ರದರ್ಶನ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ಕರ್ನಾಟಕದ ಸರ್ಕಾರ ಈ ಆದೇಶಕ್ಕೆ ತಡೆ ನೀಡಿದ್ದು, ಈ ತಿಂಗಳ ಅಂತ್ಯದವರೆಗೂ ಯಥಾಸ್ಥಿತಿಯಲ್ಲಿ ಚಿತ್ರಮಂದಿರಗಳು ಕಾರ್ಯನಿರ್ವಹಿಸಲಿ ಎಂದು ತಿಳಿಸಿದೆ. ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧ್ರುವ ಸರ್ಜಾ, ದುನಿಯಾ ವಿಜಯ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಶಿವಣ್ಣ ಸೇರಿದಂತೆ ಹಲವರು ''ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಮತಿ ಕೊಡಿ'' ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಕುರಿತು ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ಸಭೆಯೂ ಸರಿ ಅಂತ ನಾನು ಹೇಳಲ್ಲ
ರಾಜಕೀಯ ಸಭೆ ನಡೆಯುತ್ತೆ, ಮಾರ್ಕೆಟ್‌ನಲ್ಲಿ ಜನ ಸೇರ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್ ''ರಾಜಕಾರಣದ ಸಭೆ ಸರಿ ಅಂತ ನಾವು ಹೇಳಿಲ್ಲ. ಅದೂ ಸರಿ ಅಂತನೂ ಹೇಳಲ್ಲ. ಆದ್ರೆ ಅದು ಹೊರಗಡೆ ಮಾಡ್ತಿದ್ದಾರೆ, ಹೊರಗಡೆ ಆದರೂ ಅದು ಸರಿಯಲ್ಲ. ಸಾಧ್ಯವಾದ ಕಡೆ ಸೋಂಕು ನಿಯಂತ್ರಣ ಮಾಡೋದು ನಮ್ಮ ಸರ್ಕಾರದ ಜವಾಬ್ದಾರಿ'' ಎಂದು ಸ್ಪಷ್ಟನೆ ನೀಡಿದ್ದಾರೆ.
ಫೆಬ್ರವರಿ 28ವರೆಗು ಶೇ 50ರಷ್ಟು ಮುಂದುವರಿಯಲಿದೆ
''ಕೇಂದ್ರ ಸರ್ಕಾರ ಚಿತ್ರಮಂದಿರಗಳಲ್ಲಿ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಸೂಚಿಸಿದೆ. ಹೆಚ್ಚಿನ ಅವಕಾಶ ನೀಡಲು ಆಯಾ ರಾಜ್ಯ ಸರ್ಕಾರ ಕ್ರಮಕೈಗೊಳ್ಳಲು ಸೂಚಿಸಿದೆ. ನಮ್ಮ ತಾಂತ್ರಿಕ ಸಲಹಾ ಸಮಿತಿ ಸಲಹೆ ಪ್ರಕಾರ ಫೆಬ್ರವರಿ 28ವರೆಗು ಶೇ 50ರಷ್ಟು ಮುಂದುವರಿಯಲಿ ಎಂದು ಹೇಳಿದ್ದೇವೆ. ನೆರೆಯ ಕೇರಳದಲ್ಲಿ ಪ್ರತೀ ದಿನ 5 ಸಾವಿರ ಕೇಸ್ ದಾಖಲಾಗುತ್ತಿದೆ. ಮನರಂಜನೆ ಬಹಳ ಮುಖ್ಯ, ಮನರಂಜನೆಗಿಂತ ಮುಖ್ಯ ಜನರ ಆರೋಗ್ಯ, ಕ್ಷೇಮ'' ಎಂದು ಸುಧಾಕರ್ ಹೇಳಿದರು.
ಮತ್ತೊಮ್ಮೆ ಸಭೆ ಮಾಡ್ತೇನೆ
''ನಾನು ಮಂತ್ರಿಯಾಗಿ ಏಕಾಏಕಿ ನಿರ್ಧಾರ ಸಾಧ್ಯವಾಗಲ್ಲ. ಮತ್ತೊಮ್ಮೆ ಸಿಎಂ ಮತ್ತು ತಾಂತ್ರಿಕ ಸಲಹ ಸಮಿತಿ ಜೊತೆ ಸಭೆ ಮಾಡುತ್ತೇನೆ. ಅವರ ಸಲಹೆ ಮೇರೆಗೆ ಅಂತಿಮ ನಿರ್ಧಾರ ಮಾಡುತ್ತೇನೆ'' ಎಂದು ಕೊನೆಯಲ್ಲಿ ಭರವಸೆ ನೀಡಿದರು.
This News Article is a Copy of FILMIBEAT
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm