ಬ್ರೇಕಿಂಗ್ ನ್ಯೂಸ್
31-01-21 09:12 pm Headline Karnataka News Network ಸಿನಿಮಾ
ಚೆನ್ನೈ, ಜನವರಿ 31: ಇಲ್ಲಿನ ಎಗ್ಮೋರ್ ಮೆಟ್ರೋಪಾಲಿಟನ್ ಕೋರ್ಟ್ II ನಿಂದ ಖ್ಯಾತ ನಿರ್ದೇಶಕ ಶಂಕರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.
ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ಶಂಕರ್ ಅವರ ಮೇಲೆ ಕೃತಿಚೌರ್ಯ ಆರೋಪ ಹೊರೆಸಲಾಗಿದೆ. 2010 ರಲ್ಲಿ ಶಂಕರ್ ನಿರ್ದೇಶನದಲ್ಲಿ ತೆರೆಕಂಡ ಎಂದಿರನ್ ಅಲಿಯಾಸ್ ರೋಬೋ ಚಿತ್ರ ಸೂಪರ್ ಹಿಟ್ ಆಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ನಟನೆಯ ಈ ಚಿತ್ರಕ್ಕೆ ಸಂಬಂಧಿಸಿದಂತೆ ಕಥೆ ಕದ್ದ ಆರೋಪದ ಕೇಸ್ 11ನೇ ವರ್ಷಕ್ಕೆ ಕಾಲಿಟ್ಟಿದೆ.

ಆರೂರು ತಮಿಳ್ನಾದನ್ ಎಂಬ ವ್ಯಕ್ತಿ ನಿರ್ದೇಶಕ ಶಂಕರ್ ಮೇಲೆ ಕತೆ ಕದ್ದ ಆರೋಪ ಮಾಡಿದ್ದಾರೆ. ಜಿಗುಬಾ ಎಂಬ ಹೆಸರಿನಲ್ಲಿ ತಾವು ಬರೆದ ಕತೆಯನ್ನು ಶಂಕರ್ ಹಾಗೆ ಭಟ್ಟಿ ಇಳಿಸಿದ್ದಾರೆ. ಈ ಬಗ್ಗೆ ದೂರಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದರು. 1996 ಹಾಗೂ 2007 ರಲ್ಲಿ ಬೇರೆ ಹೆಸರಿನಲ್ಲಿ ಜಿಗುಬಾ ಕಥೆ ತಮಿಳು ಮ್ಯಾಗಜಿನ್ಗಳಲ್ಲಿ ಪ್ರಕಟವಾಗಿದೆ, 1957ರ ಕೃತಿಹಕ್ಕು ಕಾಯ್ದೆ ಅನ್ವಯ ಕ್ರಮ ಜರುಗಿಸುವಂತೆ ಎಂದು ಅರೂರು ಪರ ವಕೀಲರು ಕೋರ್ಟಿಗೆ ಸಾಕ್ಷ್ಯ ಒದಗಿಸಿದ್ದರು.
ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಶಂಕರ್ ಅವರಿಗೆ ಅನೇಕ ಬಾರಿ ಸಮನ್ಸ್ ಕಳಿಸಿದ್ದರೂ ಹಾಜರಾಗದ ಕಾರಣ, ಮೆಟ್ರೋಪಾಲಿಟನ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದು, ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಲಾಗಿದೆ. ತಮಿಳ್ನಾದನ್ ಆರೋಪನ್ನು ಅಲ್ಲಗಳೆದಿದ್ದ ಶಂಕರ್ ಅವರು ತಮ್ಮ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ತಿರಸ್ಕೃತಗೊಂಡಿತ್ತು.
The Metropolitan Magistrate Court-II, Egmore, has issued a non-bailable warrant (NBW) against film director Shankar for allegedly copying a short story of writer Arur Tamilnadan and making the blockbuster movie Endhiran, featuring Rajinikanth, Aishwarya Rai and others.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 08:53 pm
HK News Staffer
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm
Suhas Shetty, Mangalore, NIA: ಸುಹಾಸ್ ಶೆಟ್ಟಿ ಹ...
23-06-26 02:15 pm