ಬ್ರೇಕಿಂಗ್ ನ್ಯೂಸ್
30-01-21 02:08 pm Source: FILMIBEAT ಸಿನಿಮಾ
ಸುಶಾಂತ್ ಸಿಂಗ್ ಸಾವು, ಡ್ರಗ್ಸ್ ಮಾಫಿಯಾ, ಬಾಲಿವುಡ್ ನೆಪೋಟಿಸಂ, ಮುಂಬೈ ಮಹಾನಗರ ಪಾಲಿಕೆ, ಮುಂಬೈ ಸರ್ಕಾರ ಹೀಗೆ...ಕಳೆದ ಆರೇಳು ತಿಂಗಳಿಂದ ನಟಿ ಕಂಗನಾ ಸಿನಿಮಾ ಬಿಟ್ಟು ಇನ್ನಿತರ ವಿಚಾರಕ್ಕಾಗಿಯೇ ಸುದ್ದಿಯಲ್ಲಿದ್ದರು. ಕಂಗನಾ ಕೊನೆಗೂ ತಲೈವಿ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಯೋಪಿಕ್‌ನಲ್ಲಿ ಕಂಗನಾ ನಟಿಸಿದ್ದು, ಪುರಚ್ಚಿ ತಲೈವಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ, ಮತ್ತೊಂದು ರಾಜಕೀಯ ಥ್ರಿಲ್ಲರ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ.
ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ
ಇನ್ನು ಹೆಸರಿಡದ ಚಿತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಇದು ರಾಜಕೀಯ ಆಧರಿತ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಭಾರತದ ರಾಜಕೀಯ ರಂಗ ಕಂಡ ಹಲವರ ಪಾತ್ರ ಬರಲಿದೆ. ಅದರಲ್ಲಿ ಇಂದಿರಾ ಗಾಂಧಿ ಪಾತ್ರವೂ ಒಂದು. ಇಂದಿರಾ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ.

ಬಯೋಪಿಕ್ ಅಲ್ಲ ಎಂದು ಸ್ಪಷ್ಟನೆ
ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಎಂದಾಕ್ಷಣ ಇದು ಬಯೋಪಿಕ್ ಚಿತ್ರವಾಗಿರಬಹುದಾ ಎಂಬ ಚರ್ಚೆ ಹುಟ್ಟಿಕೊಂಡಿತ್ತು. ಆದರೆ ಇದು ಬಯೋಪಿಕ್ ಅಲ್ಲ ಎಂದು ಸ್ವತಃ ಕಂಗನಾ ಸ್ಪಷ್ಟಪಡಿಸಿದ್ದಾರೆ. ಇದೊಂದು ಕಾಲಘಟ್ಟದ ಚಿತ್ರ. ಆ ಸಮಯದಲ್ಲಿ ಬರುವ ರಾಜಕಾರಣಿಗಳ ಪಾತ್ರ ಪ್ರಮುಖವಾಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಬಹಳ ವರ್ಷದಿಂದಲೂ ಆಸೆ ಇತ್ತು
ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ನಟಿಸಬೇಕು ಎನ್ನುವುದು ಕಂಗನಾ ರಣಾವತ್ ಅವರಿಗೆ ಮೊದಲಿನಿಂದಲೂ ಆಸೆ ಇತ್ತು. ವೃತ್ತಿ ಜೀವನದ ಆರಂಭದಲ್ಲಿ ಇಂದಿರಾ ಗಾಂಧಿಯಂತೆ ಮೇಕಪ್ ಮಾಡಿ ಫೋಟೋಶೂಟ್ ಸಹ ಮಾಡಿಸಿದ್ದರು. ಆ ಫೋಟೋ ಈಗ ವೈರಲ್ ಆಗಿದೆ. ಒಂದಲ್ಲ ಒಂದು ದಿನ ಈ ಪಾತ್ರ ಮಾಡುತ್ತೇನೆ ಎಂದು ಮನಸ್ಸಿನಲ್ಲಿ ನಿರ್ಧರಿಸಿದ್ದರಂತೆ. ಈಗ, ಆ ಸಮಯ ಬಂದಿದೆ.

ಸಾಯಿ ಕಬೀರ್ ನಿರ್ದೇಶನ
ಸ್ಕ್ರಿಪ್ಟ್ ಕೆಲಸ ಕೊನೆಯ ಹಂತದಲ್ಲಿದೆ. ಈ ಚಿತ್ರವನ್ನು ಸಾಯಿ ಕಬೀರ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಕಂಗನಾ ನಟಿಸಿದ್ದ ರಿವಾಲ್ವರ್ ರಾಣಿ ಚಿತ್ರವನ್ನು ಕಬೀರ್ ನಿರ್ದೇಶಿಸಿದ್ದರು. ಇದೀಗ, ಹೊಸ ಪ್ರಾಜೆಕ್ಟ್‌ಗೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಸಹ ಹೇಳಲು ತಯಾರಿ ನಡೆಸಿದ್ದಾರೆ.
This News Article is a Copy of FILMIBEAT
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm