ಬ್ರೇಕಿಂಗ್ ನ್ಯೂಸ್
03-01-21 02:21 pm Priya, Headline Karnataka ಸಿನಿಮಾ
ಬೆಂಗಳೂರು, ಜ.3: 2020ನೇ ಸಾಲಿನ 'ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ಸ್ ಸೌತ್' ಪಟ್ಟಿ ಬಿಡುಗಡೆಯಾಗಿದ್ದು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ನಟ ರಕ್ಷಿತ್ ಶೆಟ್ಟಿ, ಹಿರಿಯ ನಟ ಶಿವರಾಜ್‌ಕುಮಾರ್ ಪ್ರಶಸ್ತಿ ಘೋಷಣೆ ಆಗಿದೆ.
ಪಿ. ಶೇಷಾದ್ರಿ ನಿರ್ದೇಶನದ 'ಮೂಕಜ್ಜಿಯ ಕನಸುಗಳು' ಚಿತ್ರಕ್ಕೆ 'ಅತ್ಯುತ್ತಮ ಸಿನಿಮಾ' ಪ್ರಶಸ್ತಿ ಸಿಕ್ಕಿದೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿನ ಅಭಿನಯಕ್ಕಾಗಿ ರಕ್ಷಿತ್ ಶೆಟ್ಟಿಗೆ 'ಅತ್ಯುತ್ತಮ ನಟ' ಹಾಗೂ 'ಯಜಮಾನ' ಚಿತ್ರದಲ್ಲಿನ ಅಭಿನಯಕ್ಕಾಗಿ ತಾನ್ಯಾ ಹೋಪ್ 'ಅತ್ಯುತ್ತಮ ನಟಿ' ಎನಿಸಿಕೊಂಡಿದ್ದಾರೆ. ವಿ. ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕ, ರಮೇಶ್ ಇಂದಿರಾ ಅತ್ಯುತ್ತಮ ನಿರ್ದೇಶಕ (ಪ್ರೀಮಿಯರ್ ಪದ್ಮಿನಿ), ಶಿವರಾಜ್ ಕುಮಾರ್ 'ಬಹುಮುಖ ಸಾಮರ್ಥ್ಯವುಳ್ಳ ನಟ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡ, ತಮಿಳು, ಮಲಯಾಳಂ ಮತ್ತು ತಮಿಳು ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರಿಗೆ ಈ ಪ್ರಶಸ್ತಿ ನೀಡಲಾಗಿದೆ. 'ಡಿಯರ್ ಕಾಮ್ರೇಡ್' ತೆಲುಗು ಸಿನಿಮಾದ ನಟನೆಗಾಗಿ ರಶ್ಮಿಕಾ ಮಂದಣ್ಣ ಅವರಿಗೆ 'ಅತ್ಯುತ್ತಮ ನಟಿ' ಪ್ರಶಸ್ತಿ ನೀಡಲಾಗಿದೆ. ತೆಲುಗಿನಲ್ಲಿ ನಾನಿ ನಟನೆಯ 'ಜೆರ್ಸಿ'ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ. 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ಸುಜೀತ್ (ಸಾಹೋ) ಪಾಲಾಗಿದೆ.
ತಮಿಳಿನಲ್ಲಿ ಅಜಿತ್ ಕುಮಾರ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ಮಲಯಾಳಂನಲ್ಲಿ ಮೋಹನ್ ಲಾಲ್ ಅವರಿಗೆ 'ಬಹುಮುಖ ಸಾಮರ್ಥ್ಯವುಳ್ಳ ನಟ' ಪ್ರಶಸ್ತಿ ನೀಡಲಾಗಿದೆ. ಅಂದಹಾಗೆ, ಇದು ಭಾರತ ಸರ್ಕಾರದಿಂದ ನೀಡಲಾಗುವ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಅಲ್ಲ. ಫಾಲ್ಕೆ ಸೌತ್ ಹೆಸರಲ್ಲಿ ದಕ್ಷಿಣ ಭಾರತದ ಭಾಷೆಗಳ ಚಿತ್ರಗಳ ನಟ- ನಟಿಯರನ್ನು ಮತ್ತು ಚಿತ್ರಗಳನ್ನು ಗುರುತಿಸಿ ಪ್ರತಿ ವರ್ಷ ಹೈದರಾಬಾದ್ ನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
The winners of the Dadasaheb Phalke Awards 2020 South have been announced. The award honoured the individuals from the Tamil, Malayalam, Telugu, and Kannada film industries for their outstanding contribution towards the growth and development of cinema.
23-06-26 05:58 pm
HK News Staffer
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
Cross Voting Row, Vijayendra: ಅಡ್ಡ ಮತದಾನ ; ಧರ...
21-06-26 02:18 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 02:25 pm
HK News Staffer
Suhas Shetty, Mangalore, NIA: ಸುಹಾಸ್ ಶೆಟ್ಟಿ ಹ...
23-06-26 02:15 pm
ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ ? ಲಿವ್-ಇನ್...
23-06-26 12:57 pm
ಅಕ್ರಮ ಪೊಲೀಸ್ ಕ್ಲಿಯರೆನ್ಸ್ ; ಮೂರೇ ದಿನದಲ್ಲಿ ಸಿಸಿ...
22-06-26 10:21 pm
ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ; ವೈದ್...
22-06-26 08:01 pm