ಬ್ರೇಕಿಂಗ್ ನ್ಯೂಸ್
02-01-21 10:54 am Source: FILMIBEAT ಸಿನಿಮಾ
ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಸಂಖ್ಯೆ ಕೋಟಿಗಳಲ್ಲಿದೆ. ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವ ಮೆಗಾಸ್ಟಾರ್ ಚಿರಂಜೀವಿ. ಆದರೆ ತೆಲುಗಿನದ್ದೇ ಆದ ಒಟಿಟಿಯೊಂದು ಇದೀಗ ಚಿರಂಜೀವಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಆ ನಂತರ ತನ್ನ ತಪ್ಪು ತಿದ್ದಿಕೊಂಡು ಕ್ಷಮಾಪಣೆ ಸಹ ಕೇಳಿದೆ. ತೆಲುಗಿನ 'ಆಹಾ' ಒಟಿಟಿ ಇತ್ತೀಚೆಗೆ ಸಖತ್ ಖ್ಯಾತಿ ಗಳಿಸಿದೆ. ಆಹಾ ದಲ್ಲಿ ಸಮಂತಾ ನಡೆಸಿಕೊಡುವ 'ಸ್ಯಾಮ್ ಜ್ಯಾಮ್' ಹೆಸರಿನ ಟಾಕ್ ಶೋ ಅಂತೂ ಸಖತ್ ಹಿಟ್ ಆಗಿದೆ. ಈ ಟಾಕ್ ಶೋ ಗೆ ಮೆಗಾಸ್ಟಾರ್ ಚಿರಂಜೀವಿ, ವಿಜಯ್ ದೇವರಕೊಂಡ, ತಮನ್ನಾ ಇನ್ನೂ ಹಲವು ಸ್ಟಾರ್‌ಗಳು ಬಂದಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಸಹ ಬಂದಿದ್ದರು. ಆಗಲೇ ಆಗಿದ್ದ ಯಡವಟ್ಟು.

ಟಾಕ್ ಶೋ ಗೆ ಬಂದಿದ್ದ ಅಲ್ಲು ಅರ್ಜುನ್ ಸ್ಯಾಮ್ ಜ್ಯಾಮ್ ಟಾಕ್ ಶೋ ಗೆ ಅಲ್ಲು ಅರ್ಜುನ್ ಬಂದಿದ್ದು, ಈ ಎಪಿಸೋಡ್‌ನ ಪ್ರಚಾರಕ್ಕಾಗಿ ಹಲವು ಪ್ರೋಮೋಗಳನ್ನು ಒಟಿಟಿಯು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿತ್ತು. ಆದರೆ ಒಂದು ಪ್ರೋಮೋ ದಲ್ಲಿ ಅಲ್ಲು ಅರ್ಜುನ್ ಅನ್ನು 'ಮೆಗಾಸ್ಟಾರ್' ಎಂದು ಸಂಭೋದಿಸಲಾಗಿತ್ತು. ಇದು ಚಿರು ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಯಿತು.
ಅಲ್ಲು ಅರ್ಜುನ್ ಅನ್ನು 'ಮೆಗಾಸ್ಟಾರ್' ಎಂದ ಆಹಾ
ಆಹಾ ಒಟಿಟಿಯನ್ನು, ಅಲ್ಲು ಅರ್ಜುನ್ ಅನ್ನು ಸಮಂತಾ ಅನ್ನುನ ಗುರಿಯಾಗಿಸಿ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಎತ್ತಿದರು. ಅಲ್ಲು ಅರ್ಜುನ್ ಅನ್ನು ಸಖತ್ ಟ್ರೋಲ್ ಮಾಡಲಾಯಿತು.

ಕ್ಷಮೆ ಕೋರಿದ ಆಹಾ ಒಟಿಟಿ
ಕೊನೆಗೆ ತನ್ನ ತಪ್ಪು ತಿದ್ದಿಕೊಂಡ ಆಹಾ, ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿ, 'ನಿಮ್ಮ ಪ್ರೀತಿಯಿಂದಲೇ ನಾವು ಇಷ್ಟು ದೂರ ಬಂದಿದ್ದೇವೆ. ಉದ್ದೇಶಪೂರ್ವಕವಲ್ಲದ ತಪ್ಪು ನಮ್ಮಿಂದ ಆಗಿದೆ. ನಮ್ಮ ತಪ್ಪಿನಿಂದ ಯಾರಿಗೆ ಬೇಸರವಾಗಿದೆಯೋ ಅವರಿಗೆಲ್ಲ ಕ್ಷಮೆ ಕೋರುತ್ತಿದ್ದೇವೆ' ಎಂದಿದೆ ಆಹಾ.

ಇರುವುದು ಒಬ್ಬರೇ ಮೆಗಾಸ್ಟಾರ್
ಅಷ್ಟೇ ಅಲ್ಲದೆ, 'ಇಡೀಯ ಸಿನಿಮಾ ಉದ್ಯಮದಲ್ಲಿ ಒಬ್ಬರೇ ಮೆಗಾಸ್ಟಾರ್ ಇರುವುದು ಅವರು ಯಾರೆಂದು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ' ಎಂದಿದೆ ಒಟಿಟಿ. ಆಹಾ ಕೋರಿದ ಕ್ಷಮೆಯನ್ನು ಮನ್ನಿಸಿದ್ದಾರೆ ಚಿರಂಜೀವಿ ಅಭಿಮಾನಿಗಳು.
This News Article is a Copy of FILMIBEAT
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
26-09-26 08:05 pm
HK News Staffer
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm