ಬ್ರೇಕಿಂಗ್ ನ್ಯೂಸ್
30-12-20 01:15 pm Source: FILMIBEAT Shruthi Gk ಸಿನಿಮಾ
ಬಾಲಿವುಡ್ ನ ಜೋಡಿ ಹಕ್ಕಿಗಳು ಅಂತನೆ ಕರೆಸಿಕೊಳ್ಳುತ್ತಿದ್ದ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಇಬ್ಬರು ತಮ್ಮ ಪ್ರೀತಿಯನ್ನು ಬಹಿರಂಗ ಪಡಿಸದಿದ್ದರೂ, ಗುಟ್ಟಾಗಿ ಉಳಿದಿರಲಿಲ್ಲ. ಇಬ್ಬರ ಪ್ರೀತಿಯ ವಿಚಾರ ಆಗಾಗ ಸುದ್ದಿಯಾಗುತಲೇ ಇರುತ್ತೆ. ಆದರೂ ಈ ಜೋಡಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ಸದ್ದಿಲ್ಲದೆ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಇಬ್ಬರ ನಿಶ್ಚಿತಾರ್ಥ ಸಮಾರಂಭ ಜೈಪುರ್ ದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಅಂದಹಾಗೆ ಈಗಾಗಲೇ ರಣಬೀರ್ ಮತ್ತು ಅಲಿಯಾ ಕುಟುಂಬ ಜೈಪುರ್ ಗೆ ತೆರಳಿದ್ದಾರೆ. ಜೈಪುರದಲ್ಲಿರುವ ಇಡೀ ಕುಟುಂಬ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಜೈಪುರದಲ್ಲಿ ನಡೆಯುತ್ತಿದೆ ನಿಶ್ಚಿತಾರ್ಥ ಸಮಾರಂಭ
ಬಾಲಿವುಡ್ ಮೂಲಗಳ ಪ್ರಕಾರ ಎಲ್ಲರೂ ಜೈಪುರದ ರಣಥಂಬೋರ್ ಅಮನ್ ಹೋಟೆಲ್ ನಲ್ಲಿ ತಂಗಿದ್ದು, ಅಲ್ಲೇ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎನ್ನಲಾಗುತ್ತಿದೆ. ಎಲ್ಲರೂ ಜೈಪುರಗೆ ತೆರಳಿದ್ದು, ನೋಡಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ಅಲಿಯಾ ಮತ್ತು ರಣಬೀರ್ ನಿಶ್ಚಿತಾರ್ಥಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಅಲಿಯಾಗೆ ಉಂಗುರ ತೊಡಿಸಲಿದ್ದಾರೆ ರಣಬೀರ್
ಗಪ್ಯವಾಗಿ ನಡೆಯುವ ಎಂಗೇಜ್ ಮೆಂಟ್ ಸಮಾರಂಭದಲ್ಲಿ ರಣಬೀರ್ ಬಹುಕಾಲದ ಗೆಳತಿ ಅಲಿಯಾಗೆ ರಿಂಗ್ ತೊಡಿಸುವ ಮೂಲಕ ಎಂಗೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ಅಲಿಯಾ ಮತ್ತು ರಣಬೀರ್ ನಿಶ್ಚಿತಾರ್ಥ ನೆರವೇರಲಿದೆ ಎನ್ನುವ ಮಾತುಗಳು ಹರಿದಾಡುತ್ತಿದೆ.

ದೀಪಿಕಾ ಮತ್ತು ರಣ್ವೀರ್ ಸಿಂಗ್ ಭಾಗಿ
ಅಲಿಯಾ ಮತ್ತು ರಣಬೀರ್ ಕುಟುಂಬದ ಜೈಪುರ ಏರ್ ಪೋರ್ಟ್ ನಲ್ಲಿ ಕ್ಯಾಮರಾಗೆ ಸೆರೆಯಾಗಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ವಿಶೇಷ ಎಂದರೆ ನಟಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಕೂಡ ಜೈಪುರ್ ಗೆ ತೆರಳಿದ್ದು, ರಣಬೀರ್ ಮತ್ತು ಅಲಿಯಾ ನಿಶ್ಚಿತಾರ್ಥದ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದ ರಣಬೀರ್ ಕಪೂರ್
ಈ ಬಗ್ಗೆ ಕುಟುಂಬದವರು ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಅಲಿಯಾ ಮತ್ತು ರಣಬೀರ್ ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಆದರೆ ಇಬ್ಬರು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಇತ್ತೀಚಿಗಷ್ಟೆ ರಣಬೀರ್ ಕಪೂರ್ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ್ದರು. ಅಲಿಯಾ ನನ್ನ ಗರ್ಲ್ ಫ್ರೆಂಡ್ ಎಂದು ಹೇಳುವ ಮೂಲಕ ಪ್ರೀತಿಯನ್ನು ಒಪ್ಪಿಕೊಂಡಿದ್ದರು.
This News Article is a Copy of FILMIBEAT
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
26-09-26 08:05 pm
HK News Staffer
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm