ಬ್ರೇಕಿಂಗ್ ನ್ಯೂಸ್
19-12-20 01:14 pm Source: FILMIBEAT Bharath Kumar K ಸಿನಿಮಾ
'ಬಜಾರ್' ಸಿನಿಮಾದ ನಂತರ 'ಬಂಪರ್' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದ ನಟ ಧನ್ವೀರ್ ಈಗ ಮತ್ತೊಂದು ಸರ್ಪ್ರೈಸ್ ಸುದ್ದಿ ನೀಡಿದ್ದಾರೆ. ಬಂಪರ್‌ಗೂ ಮೊದಲು ಇನ್ನೊಂದು ಹೊಸ ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹೌದು, ಹರಿ ಸಂತೋಷ್ ನಿರ್ದೇಶನದಲ್ಲಿ ಬಂಪರ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಶೂಟಿಂಗ್ ಸಹ ಆರಂಭವಾಗಬೇಕಿತ್ತು. ಈ ನಡುವೆ ಬಂಪರ್‌ಗೆ ಬ್ರೇಕ್ ಹಾಕಿರುವ ಚಿತ್ರತಂಡ ರೊಮ್ಯಾಂಟಿಕ್ ಸಿನಿಮಾ ಆರಂಭಿಸುವ ಸುಳಿವು ನೀಡಿದೆ.
'ಬೈ 2 ಲವ್'ನಲ್ಲಿ ಧನ್ವೀರ್'
ಬಂಪರ್' ಸಿನಿಮಾಗೂ ಮುಂಚೆ ರೊಮ್ಯಾಂಟಿಕ್ ಚಿತ್ರವೊಂದು ಮಾಡಲು ತಯಾರಾಗಿದ್ದು, ಆ ಚಿತ್ರಕ್ಕೆ 'ಬೈ 2 ಲವ್' ಎಂದು ಹೆಸರು ಸಹ ಅಂತಿಮವಾಗಿದೆಯಂತೆ. ಈ ಚಿತ್ರವನ್ನು ಹರಿ ಸಂತೋಷ್ ಅವರೇ ನಿರ್ದೇಶನ ಮಾಡಲಿದ್ದಾರೆ.
ಧನ್ವೀರ್‌ಗೆ ಶ್ರೀಲೀಲಾ ನಾಯಕಿ
ಧನ್ವೀರ್‌ಗೆ ಈ ಚಿತ್ರದಲ್ಲಿ 'ಕಿಸ್' ಖ್ಯಾತಿಯ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಎಪಿ ಅರ್ಜುನ್ ನಿರ್ದೇಶಿಸಿದ್ದ 'ಕಿಸ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ನಟಿ ನಂತರ ಶ್ರೀಮುರಳಿ ಜೊತೆ 'ಭರಾಟೆ' ಮಾಡಿದರು. ಈಗ ಧನ್ವೀರ್ ಜೊತೆ 'ಬೈ 2 ಲವ್' ಮಾಡಲಿದ್ದಾರೆ.
ಹರಿ ಸಂತೋಷ್ ಸಿನಿಮಾ
'ಅಲೆಮಾರಿ' ಸಂತು ಎಂದು ಖ್ಯಾತಿ ಗಳಿಸಿಕೊಂಡಿರುವ ಹರಿ ಸಂತೋಷ್ ಕಳೆದ ವರ್ಷ 'ಬಿಚ್ಚುಗತ್ತಿ' ಎಂಬ ಐತಿಹಾಸಿಕ ಚಿತ್ರವನ್ನು ನಿರ್ದೇಶಿಸಿದ್ದರು. ಅದಕ್ಕು ಮುಂಚೆ 'ಕಾಲೇಜು ಕುಮಾರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈಗ ಬಂಪರ್ ಘೋಷಿಸಿದ್ದರು. ಆ ಪ್ರಾಜೆಕ್ಟ್‌ಗೂ ಮೊದಲು 'ಬೈ 2 ಲವ್' ಕೈಗೆತ್ತಿಕೊಂಡಿದ್ದಾರೆ.
This News Article is a Copy of FILMIBEAT
08-08-25 06:23 pm
HK News Desk
Bigg Boss Rajath, Death Threats, Soujanya: ಯೂ...
08-08-25 11:20 am
ಸರ್ಕಾರಿ ಕೆಲಸ ಕೊಡಿಸೋದಾಗಿ 25 ಲಕ್ಷ ಪಡೆದು ವಂಚನೆ ;...
07-08-25 10:18 pm
ಧರ್ಮಸ್ಥಳ ಘರ್ಷಣೆ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ, ಎ...
07-08-25 05:50 pm
Dharmasthala burial case, Gag Order: ಮಾಧ್ಯಮ ನ...
06-08-25 10:51 pm
07-08-25 10:02 pm
HK News Desk
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
09-08-25 11:36 am
Udupi Correspondent
Roshan Saldanha, ED Raid, Mangalore, Fraud: ರ...
08-08-25 11:10 pm
SIT, Kalleri, Buried Schoolgirl, Dharmasthala...
08-08-25 09:25 pm
ಧರ್ಮಸ್ಥಳ ಸುದ್ದಿ ಪ್ರಸಾರ ನಿರ್ಬಂಧಕ್ಕೆ ಸುಪ್ರೀಂ ನಿ...
08-08-25 08:26 pm
Bjp, Mangalore: ಎಡಪಂಥೀಯರು ಧರ್ಮಸ್ಥಳ ಕ್ಷೇತ್ರಕ್ಕ...
08-08-25 08:05 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm