ಬ್ರೇಕಿಂಗ್ ನ್ಯೂಸ್
15-12-20 11:46 am Source: FILMIBEAT Manjunatha C ಸಿನಿಮಾ
ತಮಿಳುನಾಡು, ಡಿ.15: ರಾಜಕೀಯ ಪ್ರವೇಶ ಮಾಡುವುದಾಗಿ ನಟ ರಜನೀಕಾಂತ್ ಈಗಾಗಲೇ ಅಧಿಕೃತವಾಗಿ ಘೋಷಿಸಿಯಾಗಿದೆ. ತಮ್ಮ ಪಕ್ಷದ ಹೆಸರು, ಚಿಹ್ನೆಯನ್ನು ಡಿಸೆಂಬರ್ 31 ರಂದು ಘೋಷಿಸುವುದಾಗಿ ರಜನೀಕಾಂತ್ ಈಗಾಗಲೇ ಹೇಳಿದ್ದಾರೆ. ಆದರೆ ರಜನೀಕಾಂತ್ ಘೋಷಿಸುವ ಮುನ್ನವೇ ಪಕ್ಷದ ಹೆಸರು, ಚಿಹ್ನೆ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ. ಹಲವು ತಮಿಳು ಚಾನೆಲ್‌ಗಳು ಈ ಬಗ್ಗೆ ಸುದ್ದಿಯನ್ನು ಬಿತ್ತರಿಸುತ್ತಿದ್ದು, ರಜನೀಕಾಂತ್ ಪಕ್ಷದ ಹೆಸರನ್ನು 'ಮಕ್ಕಳ್ ಸೇವೈ ಕಚ್ಚಿ' ಎಂದು ಚುನಾವಣಾ ಆಯೋಗದ ಬಳಿ ನೊಂದಾವಣಿ ಮಾಡಿಸಿದ್ದು, ಪಕ್ಷದ ಚಿಹ್ನೆ ಆಟೊ ರಿಕ್ಷಾ ಆಗಿದೆಯಂತೆ.
'ಮಕ್ಕಳ್ ಸೇವೈ ಕಚ್ಚಿ' ಎಂದರೆ, 'ಜನರಿಗೆ ಸೇವೆ ಮಾಡುವ ಪಕ್ಷ' ಎಂದರ್ಥ. ಈ ಪಕ್ಷದ ಸಿಂಬಲ್ ಆಗಿ ಆಟೊ ರಿಕ್ಷಾ ನೀಡಲಾಗಿದೆ ಎನ್ನಲಾಗುತ್ತಿದೆ. ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಡಿಸೆಂಬರ್ 31 ರಂದು ಘೋಷಿಸಲಾಗುತ್ತದೆ.

ಮಕ್ಕಳ್ ಮಂದ್ರಮ್ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ
ರಜನೀಕಾಂತ್ ಅವರ ಸಂಘ 'ಮಕ್ಕಳ್ ಮಂದ್ರಮ್' ಸದಸ್ಯರ ಜೊತೆ ಚರ್ಚಿಸಿ ಪಕ್ಷದ ಹೆಸರು ನಿರ್ಧರಿಸಲಾಗಿದೆಯಂತೆ. ಈ ಮೊದಲು ಪಕ್ಷದ ಹೆಸರನ್ನು 'ಮಕ್ಕಳ್ ಶಕ್ತಿ ಕಳಗಂ' ಎಂದು ನೊಂದಾಯಿಸಿದ್ದರಂತೆ, ಜೊತೆಗೆ ಬಾಬಾ ಸಿಂಬಲ್ ಅನ್ನು ಗುರುತಾಗಿ ಕೇಳಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ.
ರಜನೀಕಾಂತ್ ಪ್ರವೇಶದಿಂದ ರಾಜಕೀಯ ಲೆಕ್ಕಾಚಾರ ಬದಲು?
ರಜನೀಕಾಂತ್ ರಾಜಕೀಯ ಪ್ರವೇಶದ ಸುದ್ದಿ ತಮಿಳುನಾಡು ರಾಜಕೀಯದ ಮೇಲೆ ಭಾರಿ ಪ್ರಭಾವ ಬೀರಿದೆ. ರಜನೀಕಾಂತ್ ಅವರು ಬಿಜೆಪಿಯ ಮಿತ್ರ ಪಕ್ಷ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ರಜನೀಕಾಂತ್ ರಾಜಕೀಯ ಪ್ರವೇಶದಿಂದ ಡಿಎಂಕೆಗೆ ತುಸು ಹಿನ್ನೆಡೆ ಆಗಲಿದೆ ಎನ್ನಲಾಗುತ್ತಿದೆ.
This News Article is a Copy of FILMIBEAT
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm