ಬ್ರೇಕಿಂಗ್ ನ್ಯೂಸ್
15-12-20 11:37 am Source: FILMIBEAT Mahesh Malnad ಸಿನಿಮಾ
ಚೆನ್ನೈ, ಡಿ. 15: ತಮಿಳು ಕಿರುತೆರೆಯ ಜನಪ್ರಿಯ ನಟಿ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರಾ ಅವರ ಪತ್ನಿ ಹೇಮಂತ್ ಬಂಧನವಾಗಿದೆ. ಸೋಮವಾರ ರಾತ್ರಿ ಹೇಮಂತ್ ಬಂಧಿಸಿರುವುದನ್ನು ಎಸಿಪಿ ಸುದರ್ಶನ್ ದೃಢಪಡಿಸಲಾಗಿದೆ. ಚಿತ್ರಾ ಹಾಗೂ ಹೇಮಂತ್ ಕೆಲ ತಿಂಗಳುಗಳ ಹಿಂದಷ್ಟೇ ವಿವಾಹವಾಗಿದ್ದರು. ಚಿತ್ರಾ ಸಾವಿಗೆ ಪತಿ ಹೇಮಂತ್ ಕಾರಣ ಎಂದು ಚಿತ್ರಾ ಅವರ ತಾಯಿ ಆರೋಪಿಸಿದ್ದರು.
ಈ ಕುರಿತಂತೆ ವಿಚಾರಣೆಗೆ ಹಾಜರಾಗಿದ್ದ ಹೇಮಂತ್ ರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ವಿಜೆ ಚಿತ್ರಾ ನಟನೆ ಕೆಲವು ದೃಶ್ಯಗಳ ಬಗ್ಗೆ ಹೇಮಂತ್ ಆಕ್ಷೇಪ ವ್ಯಕ್ತಪಡಿಸಿ ಜಗಳವಾಡಿದ್ದ ಎಂದು ತಿಳಿದು ಬಂದಿದೆ. ಚಿತ್ರಾ ಆತ್ಮಹತ್ಯೆಗೆ ಶರಣಾದ ದಿನ ಕೂಡಾ ಆಕೆ ಮೇಲೆ ಹಲ್ಲೆ ಮಾಡಿ, ಅಂಥಾ ಸೀನ್ ಗಳಲ್ಲಿ ಏಕೆ ನಟಿಸುತ್ತೀಯಾ ಎಂದು ಪ್ರಶ್ನೆ ಮಾಡಿದ್ದ ಎಂದು ಪೊಲೀಸರು ಹೇಳಿದರು.

ಪಾಂಡಿಯನ್ ಸ್ಟೋರ್ಸ್ ತಮಿಳು ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದ 29ವರ್ಷ ವಯಸ್ಸಿನ ವಿಜೆ ಚಿತ್ರಾ ಚೆನ್ನೈನ ನಜರಥ್ ಪೇಟ್ ನಲ್ಲಿರುವ ಹೋಟೆಲ್ ರೂಮೊಂದರಲ್ಲಿ ಡಿಸೆಂಬರ್ 9ರಂದು ಶವವಾಗಿ ಪತ್ತೆಯಾಗಿದ್ದರು.
''ಅಂದು ಮಧ್ಯಾಹ್ನ 1 ಗಂಟೆಗೆ ಹೋಟೆಲ್ ರೂಮಿಗೆ ಬಂದಿದ್ದರು. ಚಿತ್ರೀಕರಣ ಮುಗಿಸಿ ನೇರ ಇಲ್ಲಿಗೆ ಬಂದಿದ್ದಂತೆ ತೋರುತ್ತಿತ್ತು. 3.30ರ ಸುಮಾರಿಗೆ 100 ಸಂಖ್ಯೆ ಡಯಲ್ ಮಾಡಿ ವಿಷಯ ತಿಳಿಸಿದೆ'' ಎಂದು ಹೋಟೆಲ್ ಮ್ಯಾನೇಜರ್ ಹೇಳಿದ್ದಾರೆ. ಚಿತ್ರಾ ಅವರು ಆತ್ಮಹತ್ಯೆ ನಿರ್ಧಾರ ಮಾಡಿದ್ದೇಕೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಶೂಟಿಂಗ್ ಮುಗಿದ ಬಳಿಕ ಖುಷಿಯಿಂದಲೆ ತಮ್ಮ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ''ಹೇಮಂತ್ ನೀಡುತ್ತಿದ್ದ ಕಿರುಕುಳ ಮುಖ್ಯ ಕಾರಣ, ಅವನಿಗೆ ಇವಳು ನಟಿಸುವುದು ಇಷ್ಟವಿರಲಿಲ್ಲ, ಪದೇ ಪದೇ ಹಿಂಸಿಸುತ್ತಿದ್ದ. ಮಂಗಳವಾರ ನನ್ನ ಜೊತೆ ಚೆನ್ನಾಗಿ ಮಾತನಾಡಿದ್ದಳು'' ಎಂದು ಚಿತ್ರಾ ಅವರ ತಾಯಿ ವಿಜಯ ನೊಂದು ನುಡಿದಿದ್ದಾರೆ.
This News Article is a Copy of FILMIBEAT
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm