ಬ್ರೇಕಿಂಗ್ ನ್ಯೂಸ್
14-12-20 05:58 pm Source: FILMIBEAT Manjunatha C ಸಿನಿಮಾ
ಹಲವು ಜನಪ್ರಿಯ ಹಿಂದಿ ಧಾರಾವಾಹಿಗಳಲ್ಲಿ ನಟಿಸಿರುವ ಹಾಗೂ ಬಿಗ್‌ಬಾಸ್ ವಿನ್ನರ್ ಸಹ ಆಗಿರುವ ಸಿದ್ಧಾರ್ಥ್ ಶುಕ್ಲಾ ಕುಡಿದು ರಸ್ತೆಯಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎರಡು ದಿನ ಹಿಂದೆ (ಡಿಸೆಂಬರ್ 12) ರಂದು ಹುಟ್ಟುಹಬ್ಬ ಆಚರಿಸಿಕೊಂಡ ಸಿದ್ಧಾರ್ಥ್, ಅದೇ ದಿನ ತಡರಾತ್ರಿ ಮುಂಬೈನ ಏರಿಯಾವೊಂದರಲ್ಲಿ ಸಿದ್ಧಾರ್ಥ್ ಹಾಗೂ ಅವರ ಗೆಳೆಯರು ಕುಡಿದು ಬಡ ವ್ಯಕ್ತಿಯೊಬ್ಬನನ್ನು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವಂತೆ, ಕಾರಿನಲ್ಲಿ ಕೂತಿರುವ ಸಿದ್ಧಾರ್ಥ್ ಶುಕ್ಲಾ ಅವರಿಗೆ ಕೇಳುತ್ತಿದ್ದಾನೆ, 'ಕುಡಿದು, ಬಡ ವ್ಯಕ್ತಿಯೊಬ್ಬನಿಗೆ ಹೊಡೆದಿದ್ದೀರಲ್ಲವೆ, ಸರಿ ಬಿಡಿ ನಿಮಗೆ ಒಳ್ಳೆಯದಾಗಲಿ' ಎಂದಿದ್ದಾನೆ.
ಕಾರಿನಲ್ಲಿ ಕೂತಿದ್ದ ಸಿದ್ಧಾರ್ಥ್ ಶುಕ್ಲಾ, ವಿಡಿಯೋ ಮಾಡುತ್ತಿದ್ದ ವ್ಯಕ್ತಿಯಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಜೊತೆಗೆ 'ಆ ವ್ಯಕ್ತಿ ನನಗೆ ಚಾಕು ತೋರಿಸಿದ' ಎಂದು ಹೇಳುತ್ತಾರೆ. ಅಷ್ಟರಲ್ಲಿ ಮತ್ತೆ ಸಿದ್ಧಾರ್ಥ್ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ, ಅಲ್ಲಿಗೆ ವಿಡಿಯೋ ಎಂಡ್ ಆಗಿದೆ. ಆದರೆ ನಟ ಸಿದ್ಧಾರ್ಥ್ ಬೇರೆಯದೇ ರೀತಿ ಘಟನೆಯನ್ನು ಬಣ್ಣಿಸಿದ್ದು, ತಮ್ಮ ಕಾರಿಗೆ ಗುದ್ದಿದ ವ್ಯಕ್ತಿಗಳನ್ನು ಪ್ರಶ್ನೆ ಮಾಡಿದಾಗ, ಅವರು ಜಗಳಕ್ಕೆ ನಿಂತು ಚಾಕು ತೋರಿಸಿದರು, ನಾವು ಅವರನ್ನು ಬಲಪ್ರಯೋಗಿಸಿ ತಳ್ಳಿ, ಆ ಸ್ಥಳದಿಂದ ಹೊರಟು ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದೆವು ಎಂದಿದ್ದಾರೆ.
ಅಲ್ಲದೆ, ಗಾಡಿ ಓಡಿಸಬೇಕಾದರೆ, ತಾವು ಕುಡಿದಿರಲಿಲ್ಲ ಎಂದು ಸಹ ಹೇಳಿದ್ದಾರೆ. ಸಿದ್ಧಾರ್ಥ್ ನೀಡಿರುವ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಸತ್ಯಾಂಶ ಹೊರಬರಬೇಕಿದೆ.
This News Article is a Copy of FILMIBEAT
09-01-26 02:05 pm
Bangalore Correspondent
ಕನಕಪುರ ತಾಲೂಕಿನಲ್ಲಿ 63 ಅಕ್ರಮ ಲೇಔಟ್, 28 ಪಿಜಿಗಳ...
08-01-26 11:06 pm
ಪೊಲೀಸರ ಸಭೆ ನಡೆಸಲು ಡಿ.ಕೆ.ಶಿ. ಯಾರು? ರಾಜ್ಯದಲ್ಲಿ...
08-01-26 10:45 pm
ಸಿಎಂ ಕುರ್ಚಿ ಕದನಕ್ಕೆ ದಿಢೀರ್ ಬ್ರೇಕ್ ; ಡಿಕೆಶಿಗೆ...
08-01-26 09:36 pm
ಅತ್ತೆ ಕಿರುಕುಳ ಆರೋಪ ; ಸೊಸೆ ತನ್ನ ಇಬ್ಬರು ಮಕ್ಕಳೊಂ...
08-01-26 07:51 pm
08-01-26 11:21 pm
HK News Desk
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
ಮಹಾರಾಷ್ಟ್ರ ನಗರಸಭೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ;...
08-01-26 03:12 pm
ಅಧಿಕಾರಕ್ಕಾಗಿ ಶಿವಸೇನೆ ಹೊರಗಿಟ್ಟು ಬಿಜೆಪಿ - ಕಾಂಗ್...
07-01-26 09:37 pm
ದೆಹಲಿಯಲ್ಲಿ ಹಿಂಸಾಚಾರ ; ಮಸೀದಿ ಆವರಣದಲ್ಲಿ ಅಕ್ರಮ ಕ...
07-01-26 04:47 pm
09-01-26 03:21 pm
Mangalore Correspondent
ಮಾನವ –ಪ್ರಾಣಿ ಸಂಘರ್ಷ ತಡೆಗೆ ಕಮಾಂಡ್ ಸೆಂಟರ್, 1926...
09-01-26 01:15 pm
ಜ.11 ರಂದು ಕೊಡಿಯಾಲದಲ್ಲಿ ಸುಧೀಂದ್ರ ತೀರ್ಥ ಜನ್ಮಶತಮ...
08-01-26 08:48 pm
ಜ.10- 11ರಂದು ಮಂಗಳೂರು ಲಿಟ್ ಫೆಸ್ಟ್ ; ರಾಜ್ಯಸಭೆ ಸ...
08-01-26 08:09 pm
ಗಡಿನಾಡು ಕಾಸರಗೋಡಿನಲ್ಲಿ ಮಲಯಾಳ ಹೇರಿಕೆ ; ಕಡ್ಡಾಯ ಭ...
08-01-26 02:34 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm