ಬ್ರೇಕಿಂಗ್ ನ್ಯೂಸ್
09-12-20 11:04 am Headline Karnataka News Network ಸಿನಿಮಾ
ತಮಿಳುನಾಡು. ಡಿ.9: 2020 ನಿಜಕ್ಕೂಕರಾಳ ವರ್ಷವಾಗಿ ಬದಲಾಗಿದೆ. ಒಂದು ಕಡೆ ಕೊರೋನಾ ಸೋಂಕಿನ ಭೀತಿ ಮತ್ತೊಂದು ಕಡೆ ಸಾವುಗಳ ಸರಣಿ. ಅದರಲ್ಲೂ ಸಿನಿ ರಂಗದಲ್ಲಂತೂ ತುಂಬಾ ಮಂದಿ ಅಗಲುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಸಾವುಗಳ ಸರಣಿ ಮುಂದುವರೆಯುತ್ತಲೇ ಇದೆ. ಒಂದರ ಹಿಂದೆ ಒಂದರಂತೆ ಕಲಾವಿದರ ಸಾವಿನ ಸುದ್ದಿ ಸಿನಿಪ್ರಿಯರಿಗೆ ಆಘಾತ ನೀಡುತ್ತಲೇ ಇದೆ. ಸುಶಾಂತ್ ಸಿಂಗ್ ರಜಪೂತ್, ರಿಷಿ ಕಪೂರ್, ಬಾಲಸುಬ್ರಹ್ಮಣ್ಯಂ, ಬುಲೆಟ್ ಪ್ರಕಾಶ್, ಮಧು ಮೈಕೆಲ್, ಇರ್ಫಾನ್ ಖಾನ್ ಹೀಗೆ ಹಲವಾರು ಮಂದಿ ಅಗಲಿದ್ದಾರೆ. ಈಗ ಖ್ಯಾತ ಕಿರುತೆರೆ ನಟಿಯೊಬ್ಬರು ತಮಿಳುನಾಡಿನ ಹೋಟೆಲ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೌದು, ತಮಿಳಿನ ಕಿರುತೆರೆಯಲ್ಲಿ ಇತ್ತೀಚೆಗೆ ಖ್ಯಾತಿ ಪಡೆದಿದ್ದ ನಟಿ ಚಿತ್ರಾ ಈಗ ಸಾವನ್ನಪ್ಪಿದ್ದಾರೆ. ಪಾಂಡಿಯನ್ ಸ್ಟೋರ್ಸ್ ಖ್ಯಾತಿಯ ನಟಿ ಚಿತ್ರಾ ತಮಿಳುನಾಡಿನ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದೆ.
ಚಿತ್ರಾ ಅವರು ಪಾಂಡಿಯನ್ ಸ್ಟೋರ್ಸ್ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇದರಿಂದಾಗಿಯೇ ಇತ್ತೀಚೆಗೆ ಖ್ಯಾತಿ ಪಡೆದಿದ್ದರು. ಅಲ್ಲದೆ ಉದ್ಯಮಿ ಹೇಮಂತ್ ರವಿ ಎಂಬುವರೊಂದಿಗೆ ನಿಶ್ಚಿತಾರ್ಥ ಸಹ ನಿಗದಿಯಾಗಿತ್ತು. ಹಿರಿಯರ ಸಮ್ಮತಿ ಮೇರೆಗೆ ಈ ಜೋಡಿಯ ನಿಶ್ವಿತಾರ್ಥವನ್ನು ಜನವರಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತಂತೆ.
ಹೇಮಂತ್ ರವಿ ಅವರೊಂದಿಗೆ ಹೋಟೆಲ್ನಲ್ಲಿರುವಾಗಲೇ ಈ ಘಟನೆ ನಡೆದಿದೆ. ಹೇಮಂತ್ ಅವರೊಂದಿಗೆ ಹೋಟೆಲ್ನಲ್ಲಿದ್ದ ಚಿತ್ರಾ, ಬೆಳಿಗ್ಗೆ ಇವಿಪಿ ಪಾರ್ಕ್ನಲ್ಲಿ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿಕೊಂಡು ಹೋಟೆಲ್ ರೂಮಿಗೆ ಬಂದಿದ್ದರಂತೆ. ನಂತರ ಸ್ನಾನಕ್ಕೆ ಹೋಗುವುದಾಗಿ ಹೇಮಂತ್ ಅವರಿಗೆ ಹೇಳಿ ಹೋದ ಚಿತ್ರಾ, ತುಂಬಾ ಸಮಯವಾದರೂ ಬಾಗಿಲು ತೆಗೆಯಲಿಲ್ಲವಂತೆ. ಇದರಿಂದಾಗಿ ಗಾಬರಿಗೊಂಡ ಹೇಮಂತ್ ಹೋಟೆಲ್ ಸಿಬ್ಬಂದಿಯನ್ನು ಕರೆಸಿ, ಡುಪ್ಲಿಕೇಟ್ ಕೀಯಿಂದ ಬಾಗಿಲು ತೆರೆಸಿದ್ದಾರೆ ಎನ್ನಲಾಗಿದೆ.
ಹೋಟೆಲ್ ಸಿಬ್ಬಂದಿ ಬಾಗಿಲು ತೆರೆದಾಗ ಚಿತ್ರಾ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು ಎಂದು ಹೇಳಲಾಗಿದೆ. ಚಿತ್ರಾ ಸೀರೆಯಿಂದ ಫ್ಯಾನ್ಗೆ ನೇಣು ಹಾಕಿಕೊಂಡಿದ್ದು, ಅವರದ್ದು ಆತ್ಮಹತ್ಯೆ ಎಂದು ಶಂಕಿಸಲಾಗುತ್ತಿದೆ.
29 ವರ್ಷದ ನಟಿ ಚಿತ್ರಾ ನಿನ್ನೆವರೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದರು. ನಿನ್ನೆ ಸಂಜೆ ಸಹ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಯುವ ನಟಿಯ ಅಗಲಿಕೆ ಅಭಿಮಾನಿಗಳಿಗೆ ಹಾಗೂ ಸಹ ನಟರಿಗೆ ನಿಜಕ್ಕೂ ಆಘಾತ ಉಂಟು ಮಾಡಿದೆ. ಚಿತ್ರಾ ನಟನೆ ಆರಂಭಿಸುವ ಮೊದಲು ನಿರೂಪಕಿಯಾಗಿ ಕಿರುತೆರೆಗೆ ಪರಿಚಯವಾದವರು. ಇವರ ತಂದೆ ಕಾಮರಾಜ್ ನಿವೃತ್ತ ಪೊಲೀಸ್ ಅಧಿಕಾರಿ. ಇವರ ಅಣ್ಣ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm