ಬ್ರೇಕಿಂಗ್ ನ್ಯೂಸ್
13-07-23 01:50 pm Source: News18 Kannada ಸಿನಿಮಾ
ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಲಕ್ಷುರಿ ಫಾರ್ಮ್ ಹೌಸ್ನ್ನು ರೆಂಟ್ಗೆ ಕೊಡುತ್ತಿದ್ದಾರೆ. ನಟ ತಮ್ಮ ಸುಂದರವಾದ ಫಾರ್ಮ್ ಹೌಸ್ನ್ನು ಜನರಿಗೆ ಮದುವೆ, ಪಾರ್ಟಿ, ಬರ್ತ್ಡೇಗಳಿಗಾಗಿ ಕೊಡುತ್ತಿದ್ದು ಇದನ್ನು ಅವರೇ ತಿಳಿಸಿದ್ದು ಸಂಪರ್ಕ ಸಂಖ್ಯೆಯನ್ನೂ ಕೊಟ್ಟಿದ್ದಾರೆ. ಸುಂದರವಾದ ಮಾರ್ಗ ಮಾಡಲಾಗಿದ್ದು ಎರಡೂ ಬದಿಗಳಲ್ಲಿ ಹುಲ್ಲುಗಾವಲಿನಂತಹ ಹಸಿರು ಪ್ರದೇಶವಿದೆ. ಅಲ್ಲಲ್ಲಿ ಹಚ್ಚ ಹಸಿರಿನ ಮರಗಳಿದ್ದು ಇದು ಯಾವುದೇ ಫಂಕ್ಷನ್ಸ್ ನಡೆಸಲು ಸೂಕ್ತವಾಗಿರುವಂತಿದೆ.
ತುಂಬಾ ಸುಂದರವಾಗಿ ನಿರ್ಮಿಸಿರುವ ಈ ಮನೆಯ ಮುಂಭಾಗದಲ್ಲಿ ಚಂದದ ಗಾರ್ಡನ್ ಇದೆ. ಹಸಿರು ಹಾಗೂ ಕೆಂಪು ಬಣ್ಣದ ಎಲೆ ಹೂಗಳಿರುವ ಕ್ರೋಟನ್ ಗಿಡಗಳು ಬಂಗಲೆಯ ಎರಡೂ ಭಾಗಗಳಲ್ಲಿ ಬೆಳೆದಿದ್ದು, ಮನೆಯ ಎದುರಲ್ಲಿ ವಾಟರ್ ಫೌಂಟೈನ್ ಕೂಡಾ ಇದೆ. ನಮ್ಮ ಫಾರ್ಮ್ ಹೌಸ್ ಈಗ ಎಲ್ಲರಿಗೂ ಲಭ್ಯವಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ದೊಡ್ಡ ಆಲದ ಮರದ ಬಳಿ ಫಾರ್ಮ್ ಹೌಸ್ ಇದೆ. ಇದರ ಸುತ್ತ ನಾಲ್ಕು ಎಕರೆ ಭೂಮಿ ಹಸಿರಿನಿಂದ ಆವೃತವಾಗಿದೆ.



ಮದುವೆ, ಎಂಗೇಜ್ಮೆಂಟ್, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳಂತಹ ವಿಶೇಷ ಆಚರಣೆಗಳಿಗೆ ನನ್ನ ಫಾರ್ಮ್ ಹೌಸ್ ಸರಿಯಾಗಿದೆ. ಅಗತ್ಯವಿರುವವರು ಈ ಸಂಖ್ಯೆಗೆ ಕರೆ ಮಾಡಿ ಎಂದು ಉಪೇಂದ್ರ ಅವರು ನಂಬರ್ ಹಂಚಿಕೊಂಡಿದ್ದಾರೆ. ಈ ಫಾರ್ಮ್ ಹೌಸ್ ಸುಮಾರು ನಾಲ್ಕು ಎಕರೆಗಳಷ್ಟು ದೊಡ್ಡದಿದೆ. ಇದು ಹತ್ತು ಸಾವಿರ ಚದರ ಅಡಿ ದೊಡ್ಡ ಹಾಲ್, 6 ಲಕ್ಷುರಿ ಬೆಡ್ ರೂಮ್. ದೊಡ್ಡ ಟೆರೇಸ್, ಹತ್ತು ಸಾವಿರ ಚದರ ಅಡಿ ಸ್ಥಳ, ನಾಲ್ಕು ಕೊಠಡಿಗಳು ಇತ್ಯಾದಿಗಳನ್ನು ಹೊಂದಿದೆ.
ಬಾರ್ & ಲಾಂಜ್ ಏರಿಯಾ ಕೂಡಾ ಇದ್ದು ಇದು ಭರ್ಜರಿಯಾಗಿದೆ. ಟೇಬಲ್ ಹಾಗೂ ಚೇರ್ಗಳನ್ನು ಶಿಸ್ತಾಗಿ ಜೋಡಿಸಲಾಗಿದ್ದು ಅತ್ಯಂತ ಆಕರ್ಷಕ ಲೈಟ್ಬಳಸಿಕೊಳ್ಳಲಾಗಿದೆ.
Upendra Rents his Luxury Farm House for Wedding Birthday Party.
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
26-10-25 04:42 pm
Mangalore Correspondent
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ ಆಗೇ ಆಗುತ್ತೆ,...
25-10-25 08:08 pm
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm