ಬ್ರೇಕಿಂಗ್ ನ್ಯೂಸ್
03-05-23 01:30 pm Source: news18 ಸಿನಿಮಾ
ಕಪೋಕಲ್ಪಿತ ಕಥೆ ಹಾಗೂ ಕೇರಳ ರಾಜ್ಯಕ್ಕೇ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ಮಾಡಲಾಗಿದೆ ಎನ್ನುವ ಆರೋಪ ಹಲವರದ್ದು. ಒಂದು ಧರ್ಮವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಇಂತಹ ಚಿತ್ರವನ್ನು ರಿಲೀಸ್ ಮಾಡದಂತೆ ಕೇರಳದ ಅನೇಕ ಸಂಘಟನೆಗಳು ಒತ್ತಾಯಿಸಿವೆ. ಈ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಿನಿಮಾ ಮೇ 5ಕ್ಕೆ ಬಿಡುಗಡೆ ಆಗತ್ತಾ ಎನ್ನುವ ಅನುಮಾನ ಕೂಡ ಮೂಡಿದೆ.
ಕಾಂಗ್ರೆಸ್ ಜೊತೆಗೆ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (DYFI) ಕೂಡ ವಿರೋಧವನ್ನು ವ್ಯಕ್ತ ಪಡಿಸಿದ್ದು, ಸಂಘ ಪರಿವಾರದವರು ಸೇರಿಕೊಂಡು, ಒಂದು ಸಮುದಾಯದ ವಿರುದ್ಧ ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಈ ಸಿನಿಮಾವನ್ನು ತೋರಿಸಲು ಹೊರಟಿದ್ದಾರೆ. ಇದು ಕೇರಳ ರಾಜ್ಯಕ್ಕೂ ಅಪಮಾನ ಮಾಡುವಂತಹ ಚಿತ್ರ. ಹಾಗಾಗಿ ಕೂಡಲೇ ಬಿಡುಗಡೆಯನ್ನು ತಡೆಯಬೇಕು ಎಂದು ಮನವಿ ಮಾಡಿವೆ.
ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿವಾದ
ಸಿನಿಮಾ ಟ್ರೇಲರ್ ಬಿಡುಗಡೆಯಾದ ನಂತರ, ‘ದಿ ಕೇರಳ ಸ್ಟೋರಿ’ ಸಿನಿಮಾವು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿ ಮಾಡಿದೆ. ಕಾಂಗ್ರೆಸ್ ಪಕ್ಷವು ʼಈ ವಿವಾದವನ್ನು ವಿರೋಧ ಪಕ್ಷಗಳ ಕೈವಾಡ, ಪ್ರಚಾರದ ಕೆಲಸʼ ಎಂದು ಕರೆಯುವುದರ ಜೊತೆಗೆ ಈ ಸಿನಿಮಾವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸುತ್ತಿದೆ.
ಸಿನಿಮಾದ ಬಗ್ಗೆ?
ಸುದೀಪ್ತೋ ಸೇನ್ ಬರೆದು ನಿರ್ದೇಶಿಸಿದ ಈ ಸಿನಿಮಾವು 32,000 ಮಹಿಳೆಯರನ್ನು ಅದರಲ್ಲೂ ಕೇರಳದ ಅನೇಕರನ್ನು ಮೋಸದಿಂದ ಇಸ್ಲಾಂಗೆ ಮತಾಂತರಗೊಳಿಸಲಾಯಿತು ಮತ್ತು ಭಯೋತ್ಪಾದಕ ಸಂಘಟನೆ ISIS ಗೆ ಸೇರುವಂತೆ ಮಾಡಲಾಗಿದೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದ ಎರಡು ನಿಮಿಷಗಳ ನಲವತ್ತೈದು ಸೆಕೆಂಡುಗಳ ಟ್ರೇಲರ್ ಶಲನಿ ಉನ್ನಿಕೃಷ್ಣನ್ ಎಂಬ ಪಾತ್ರದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಅವಳು ಹಿಂದೂವಾಗಿ ಐಸಿಸ್ ಭಯೋತ್ಪಾದಕಳಾಗಿ ಕೊನೆಗೊಳ್ಳುವ ಸಿನಿಮಾ ಇದಾಗಿದೆ.
ಅದಾ ಶರ್ಮಾ ಸಣ್ಣ ಹಳ್ಳಿಯ ಹುಡುಗಿ ಪಾತ್ರವನ್ನು ಮಾಡಿದ್ದು ಆಕೆ ಯಾವ ರೀತಿ ಪ್ರೀತಿಯಲ್ಲಿ ಬೀಳುತ್ತಾಳೆ, ಮುಸ್ಲಿಂ ಆಗಿ ಮತಾಂತರವಾಗುತ್ತಾಳೆ ಎಂಬೆಲ್ಲ ವಿಚಾರಗಳನ್ನು ಈ ಸಿನಿಮಾದಲ್ಲಿ ತಿಳಿಸಲಾಗಿದೆ. ಟ್ರೇಲರ್‌ನಲ್ಲಿ ಮುಸ್ಲಿಂ ಮಹಿಳೆ ಅದಾ ಶರ್ಮಾ ಪಾತ್ರಧಾರಿ ಶಲಾನಿಯನ್ನು ಇತರ ಹಿಂದೂ ಹುಡುಗಿಯರೊಂದಿಗೆ ಇಸ್ಲಾಂ ಧರ್ಮವನ್ನು ಅಳವಡಿಸಿಕೊಳ್ಳುವಂತೆ ಮನವೊಲಿಸುವುದು ತೋರಿಸುತ್ತದೆ.
ಇದರ ಜೊತೆಗೆ ಅಲ್ಲಾ ಮಾತ್ರ ಜಗತ್ತನ್ನು ನಡೆಸುತ್ತಾನೆ ಎಂದು ನಂಬುವಂತೆ ಮಾಡಿ ಮಹಿಳೆಯರನ್ನು ಹೇಗೆ ನಂಬಿಸಿ ಮೋಸ ಮಾಡಲಾಗುತ್ತದೆ ಎಂಬುದನ್ನು ತೋರಿಸಲಾಗುತ್ತದೆ. ಇನ್ನೊಂದು ವಿವಾದತ್ಮಕ ಅಂಶವೆಂದರೆ ಇದರಲ್ಲಿ ಹಿಜಾಬ್‌ನ ವಿವಾದತೆಯನ್ನು ಸಹ ತೋರಿಸಲಾಗಿದೆ.
ಈ ಸಿನಿಮಾದ ನಿರ್ಮಾಪಕರೇನು ಹೇಳ್ತಿದಾರೆ?
ಈ ಸಿನಿಮಾದ ನಿರ್ಮಾಪಕರಾದ ಸೇನ್ ಅವರು ಮೇ 2022 ರಲ್ಲಿ ಸುದ್ದಿ ಮಾಧ್ಯಮವಾದ ANI ಯೊಂದಿಗೆ ಮಾತನಾಡಿ “ಇತ್ತೀಚಿನ ತನಿಖೆಯ ಪ್ರಕಾರ, 2009 ರಿಂದ, ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯದ ಕೇರಳ ಮತ್ತು ಮಂಗಳೂರಿನ ಸುಮಾರು 32,000 ಹುಡುಗಿಯರನ್ನು ಇಸ್ಲಾಂಗೆ ಪರಿವರ್ತಿಸಲಾಗಿದೆ ಮತ್ತು ಅವರಲ್ಲಿ ಹೆಚ್ಚಿನವರು ಸಿರಿಯಾ, ಅಫ್ಘಾನಿಸ್ತಾನಕ್ಕೆ ಹೋಗುತ್ತಿದ್ದಾರೆ.
ಈ ಕೆಲಸವನ್ನು ಐಸಿಸ್-ಪ್ರಭಾವಿತ ಗುಂಪುಗಳು ಮಾಡುತ್ತಿವೆ. ಇದರ ನೇತೃತ್ವದಲ್ಲಿ ಅನೇಕ ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತಿಸಿ ಅವರನ್ನು ಬೇರೆ ದೇಶಗಳಿಗೆ ಕಳಿಸುವ ಪಿತೂರಿ ಕೆಲಸವನ್ನು ಮಾಡುತ್ತಿವೆ. ಇದರ ಬಗ್ಗೆ ಸರ್ಕಾರವು ಯಾವುದೇ ರೀತಿಯ ನಿರ್ಣಾಯಕ ಯೋಜನೆಯನ್ನು ಜಾರಿ ಗೊಳಿಸುತ್ತಿಲ್ಲ. ಇದರ ಕುರಿತು ಸಹ ಸರ್ಕಾರ ಯೋಚಿಸುತ್ತಿಲ್ಲ” ಎಂದಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಮತ್ತೊಂದು ಸುದ್ದಿ ಮಾಧ್ಯಮಕ್ಕೆ ಸಂದರ್ಶನ ನೀಡಿದ ಸೇನ್ ಅವರು “2010 ರಲ್ಲಿ ಕೇರಳ ವಿಧಾನಸಭೆಯಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಊಮನ್ ಚಾಂಡಿ ಅವರು ಮಂಡಿಸಿದ ವರದಿಯ ಆಧಾರದ ಮೇಲೆ ಅವರು 32,000 ಮಹಿಳೆಯರು ಇಸ್ಲಾಂ ಧರ್ಮಕ್ಕೆ ಪರಿವರ್ತಿತರಾಗಿದ್ದಾರೆ ಎಂಬ ನಿಖರ ಅಂಕಿಅಂಶವನ್ನು ಸಿನಿಮಾದಲ್ಲಿ ತೋರಿಸಲಾಗಿದೆ” ಎಂದು ಹೇಳಿದರು.
ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ”ಊಮನ್ ಚಾಂಡಿ ಅವರು ಪ್ರತಿ ವರ್ಷ ಸರಿಸುಮಾರು 2,800 ರಿಂದ 3,200 ಹುಡುಗಿಯರು ಮತಾಂತರಗೊಳ್ಳುತ್ತಾರೆ ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಾರೆ ಎಂದು ಹೇಳಿದ್ದರು. ಇದರ ನಂತರ 10 ವರ್ಷಗಳ ಹಿನ್ನೆಲೆಯಲ್ಲಿ ಲೆಕ್ಕ ಹಾಕಿದರೆ, ಮಹಿಳೆಯರ ಸಂಖ್ಯೆ 32,000 ಆಗಿದೆ” ಎಂದು ಹೇಳಿದರು.
ಭುಗಿಲೆದ್ದ ರಾಜಕೀಯ ಕೋಲಾಹಲ
ಮೇ 5, 2023 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾವನ್ನು ನಿಷೇಧಿಸಬೇಕೆಂದು ಕಾಂಗ್ರೆಸ್ ಪಕ್ಷವು ಒತ್ತಾಯಿಸಿದೆ. ಚಲನಚಿತ್ರವು ಸುಳ್ಳು ಹೇಳಿಕೆಗಳನ್ನು ನೀಡುವುದರ ಜೊತೆಗೆ ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸುವ ಉದ್ದೇಶದಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎಂದು ಪಕ್ಷವು ಆರೋಪ ಮಾಡಿದೆ.
ಈ ಬಗ್ಗೆ ಮೌನ ಮುರಿದಿರುವ ಸಿಪಿಎಂ ನಾಯಕ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇದನ್ನು ಸಂಘ ಪರಿವಾರದ ಪ್ರಚಾರ ಎಂದು ಕರೆದಿದ್ದಾರೆ. ಕೇರಳ ರಾಜ್ಯವನ್ನು ಧಾರ್ಮಿಕ ಉಗ್ರವಾದದ ಕೇಂದ್ರ ಬಿಂದುವಾಗಿ ಬಿಂಬಿಸಲು ಸಿನಿಮಾ ತಯಾರಕರು ಮತ್ತು ಇದನ್ನು ಸಂಘ ಪ್ರಚಾರ ಎಂದು ಅವರು ಆರೋಪಿಸಿದರು.
ತಿರುವನಂತಪುರಂ ಸಂಸದ ಶಶಿ ತರೂರ್ ಅವರು ತಮ್ಮ ಟ್ವಿಟರ್‌ನ ಅಕೌಂಟ್‌ನಲ್ಲಿ “ಈ ಸಿನಿಮಾವು ನಿಮ್ಮ ಕೇರಳದ ಕಥೆಯಾಗಿರಬಹುದು. ಆದರೆ ಇದು ಖಂಡಿತ ಕೇರಳದ ಕಥೆಯಲ್ಲ. ಇದರ ನಂತರ ಅವರು ತಮ್ಮ ಟ್ವೀಟ್‌ಗೆ ಸ್ಪಷ್ಟನೆ ನೀಡುತ್ತಾ , ನಾನು ಯಾವುದೇ ರೀತಿಯಲ್ಲೂ ಈ ಸಿನಿಮಾವನ್ನು ನಿಷೇಧಿಸಲು ಕರೆ ನೀಡುತ್ತಿಲ್ಲ.
ಒಂದು ವೇಳೆ ನಿಷೇಧಕ್ಕೆ ಕರೆ ನೀಡಿದರೆ, ಅದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಹುದು. ಅದು ಮೌಲ್ಯಯುತ ಆಗಿಲ್ಲ. ಆದರೆ ಇದು ನಮ್ಮ ವಾಸ್ತವದ ತಪ್ಪು ನಿರೂಪಣೆ ಎಂದು ಸ್ಪಷ್ಟವಾಗಿ ಹೇಳಲು ಕೇರಳಿಗರಿಗೆ ಎಲ್ಲ ಹಕ್ಕಿದೆ” ಎಂದು ಹೇಳಿದ್ದಾರೆ.
"ದಿ ಕೇರಳ ಸ್ಟೋರಿ ಸಿನಿಮಾವು ಇಡೀ ಮುಸ್ಲಿಂ ಸಮುದಾಯವನ್ನು ರಾಕ್ಷಸರನ್ನಾಗಿಗಿ ಚಿತ್ರಿಸಿದೆ" ಎಂದು ಕಾಂಗ್ರೆಸ್‌ನ ಮಿತ್ರಪಕ್ಷವಾದ ಮುಸ್ಲಿಂ ಲೀಗ್ ಆರೋಪಿಸಿದೆ. ಈ ಸಿನಿಮಾದ ವಿರುದ್ಧ ಭಾರೀ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಲೀಗ್ ಈ ಹಿಂದೆಯೇ ಎಚ್ಚರಿಸಿತ್ತು.
ಈಗಾಗಲೇ ಕೇರಳದಲ್ಲಿರುವ ಹಲವು ಮುಸ್ಲಿಂ ಪ್ರಕರಣಗಳು
ಕೇರಳದ ಕೆಲವು ನಿಜ ಕಥೆಗಳು ಸಿನಿಮಾದಲ್ಲಿ ಬಿಂಬಿತವಾಗಿರುವುದಕ್ಕೆ ಈ ʼದಿ ಕೇರಳದ ಸ್ಟೋರಿʼ ಸಿನಿಮಾವು ವಿವಾದದ ಮೆಟ್ಟಿಲು ಏರಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕೇರಳದ ಅಸೆಂಬ್ಲಿಯಲ್ಲಿ 2010 ರಲ್ಲಿ ಉಮೆನ್ ಚಾಂಡಿಯವರ ಹೇಳಿಕೆಯನ್ನು ಹೊರತುಪಡಿಸಿ ಈ ಸಿನಿಮಾದ ನಿರ್ಮಾಪಕರು 32,000 ಅಂಕಿ ಅಂಶಗಳನ್ನು ನಿಖರವಾಗಿ ಯಾವ ಮೂಲಗಳಿಂದ ಪಡೆದರು ಎಂಬುದನ್ನು ಖಚಿತಪಡಿಸುವುದು ತುಂಬಾ ಕಷ್ಟ ಎಂಬುದಾಗಿದೆ. ಅದಕ್ಕೆ ಪೂರಕವಾಗಿ ಕೆಲವು ಪ್ರಕರಣಗಳ ಕುರಿತು ಮಾಹಿತಿ ಇಲ್ಲಿದೆ.
ಅಂತಹ ಪ್ರಕರಣಗಳ ಕೆಲವು ಉದಾಹರಣೆಗಳನ್ನು ನೀಡುವುದಾದರೆ, 2017 ರಲ್ಲಿ ಇಸ್ಲಾಂಗೆ ಮತಾಂತರಗೊಂಡ 23 ವರ್ಷದ ಅಥಿರಾ, ತನ್ನ ಮುಸ್ಲಿಂ ಸ್ನೇಹಿತರು ತನ್ನನ್ನು ದಾರಿ ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ. ಇದರ ನಂತರ ಅವರು ಎರ್ನಾಕುಲಂನಲ್ಲಿ ಆರ್ಷ ವಿದ್ಯಾ ಸಮಾಜದ ಪ್ರಭಾವದಿಂದ 'ಹಿಂದೂ ಧರ್ಮ'ಕ್ಕೆ ಮತ್ತೆ ಮತಾಂತರಗೊಂಡಿದ್ದಾರೆ. 2016ರಲ್ಲಿ ಕೇರಳದ 21 ಜನರ ಗುಂಪು ಐಸಿಸ್ ಸೇರಿತ್ತು.
ಆ ಗುಂಪಿನಲ್ಲಿ ಗರ್ಭಿಣಿ ಮಹಿಳೆ, ಉದ್ಯಮಿ ಮತ್ತು ವಿವಿಧ ಹಿನ್ನೆಲೆ ಹೊಂದಿರುವ ವಿದ್ಯಾವಂತ ಜನರು ಇರುವುದು ಆಘಾತಕಾರಿ ಅಂಶವಾಗಿದೆ. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 2017 ರ ಪಿಟಿಐ ವರದಿಯ ಪ್ರಕಾರ, ಕೇರಳ ರಾಜ್ಯದಿಂದ ಒಂದು ವರ್ಷದಲ್ಲಿ ಸುಮಾರು 100 ಜನರು ಇಸ್ಲಾಮಿಕ್ ಸ್ಟೇಟ್‌ಗೆ ಸೇರಿದ್ದಾರೆ ಎಂದು ಶಂಕಿಸಲಾಗಿದೆ.
ಕೆಲವು ಮೂಲಗಳನ್ನು ಉಲ್ಲೇಖಿಸಿ, ಪಿಟಿಐ ಸುದ್ದಿ ಸಂಸ್ಥೆಯು, "ಈ ಸಂಬಂಧದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕೇರಳ ಪೊಲೀಸರು ಈ ವರದಿಯು ನಿಜವೆಂದು ದೃಢಪಡಿಸಿದ್ದಾರೆ.
ಇದರಲ್ಲಿ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ 300 ಕ್ಕೂ ಹೆಚ್ಚು ಧ್ವನಿ ಕ್ಲಿಪ್‌ಗಳು ಮತ್ತು ಸಂದೇಶಗಳು ಸೇರಿವೆʼ ಎಂದು ಹೇಳಿದೆ. ಈ ʼದಿ ಕೇರಳ ಸ್ಟೋರಿʼ ಸಿನಿಮಾವನ್ನು ʼಕಾಶ್ಮೀರ ಫೈಲ್ʼ ಸಿನಿಮಾಕ್ಕೆ ಹಲವರು ಹೋಲಿಕೆ ಮಾಡುತ್ತಿರುವುದು ಮತ್ತೊಂದು ವಿವಾದತೆಯನ್ನು ಸೃಷ್ಟಿ ಮಾಡುತ್ತದೆಯೇ ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ.
the movie the kerala story has created huge opposition and controversy.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm