ಬ್ರೇಕಿಂಗ್ ನ್ಯೂಸ್
23-05-22 03:43 pm HK News Desk ದೇಶ - ವಿದೇಶ
ನವದೆಹಲಿ, ಮೇ 23: ಕೋವಿಡ್ ಸೋಂಕು ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಭಾರತ ಸೇರಿದಂತೆ 16 ರಾಷ್ಟ್ರಗಳಿಂದ ಪ್ರಯಾಣಿಕರ ಆಗಮನಕ್ಕೆ ನಿರ್ಬಂಧ ವಿಧಿಸಿದೆ.
ಭಾರತ, ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೋಮಾಲಿಯಾ, ಇತಿಯೋಪಿಯಾ, ದಿ ಡೆಮಾಕ್ರಟಿಕಿ ರಿಪಬ್ಲಿಕ್ ಆಫ್ ಕಾಂಗೋ, ಲಿಬಿಯಾ, ಇಂಡೋನೇಶ್ಯಾ, ವಿಯೆಟ್ನಾಮ್, ಅರ್ಮೇನಿಯಾ, ಬೆಲಾರಸ್ ಮತ್ತು ವೆನಿಜುವೆಲಾ ರಾಷ್ಟ್ರಗಳ ಪ್ರಯಾಣಿಕರು ಸೌದಿಗೆ ಬರದಂತೆ ಅಲ್ಲಿನ ಸರಕಾರ ತಡೆಯೊಡ್ಡಿದೆ. ಈ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಇದಲ್ಲದೆ, ಯುರೋಪ್ ರಾಷ್ಟ್ರಗಳಲ್ಲಿ ಮಂಗನ ಕಾಯಿಲೆ ಹೆಚ್ಚುತ್ತಿರುವ ಬಗ್ಗೆಯೂ ಸೌದಿ ಸರಕಾರ ಕಳವಳ ವ್ಯಕ್ತಪಡಿಸಿದೆ. ಸದ್ಯಕ್ಕೆ ಸೌದಿಯಲ್ಲಿ ಯಾವುದೇ ಮಂಗನ ಕಾಯಿಲೆ ಸೋಂಕು ಕಂಡುಬಂದಿಲ್ಲ. ಅಂತಹ ಕಾಯಿಲೆ ಬಂದಲ್ಲಿ ಪತ್ತೆ ಹಚ್ಚುವ ತಂತ್ರಜ್ಞಾನ ಮತ್ತು ಸೂಕ್ತ ಚಿಕಿತ್ಸೆ ನೀಡಬಲ್ಲ ಸೌಲಭ್ಯಗಳು ತಮ್ಮಲ್ಲಿ ಇವೆ ಎಂಬುದಾಗಿ ಆರೋಗ್ಯ ಸಚಿವಾಲಯದ ಡೆಪ್ಯುಟಿ ಮಿನಿಸ್ಟರ್ ಅಬ್ದುಲ್ಲಾ ಆಸಿರಿ ತಿಳಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ಭಾರತದ ಕರಾವಳಿ ಭಾಗದ ಜನರು ಹೆಚ್ಚಾಗಿ ಉದ್ಯೋಗ ಕಂಡುಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿಂದ ತಾಯ್ನಾಡಿಗೆ ಬರುವುದಕ್ಕೆ ಮತ್ತು ಇಲ್ಲಿಂದ ಮರಳಿ ಉದ್ಯೋಗಕ್ಕಾಗಿ ತೆರಳಲು ಕಷ್ಟ ಪಡಬೇಕಾಗಿದೆ. ಸದ್ಯಕ್ಕೆ ಎಲ್ಲಿಯವರೆಗೆ ನಿರ್ಬಂಧ ಇರುತ್ತದೆ ಎಂಬುದನ್ನು ಸೌದಿ ಸರಕಾರ ತಿಳಿಸಿಲ್ಲ.
Following the re-outbreak of Covid-19 and the rapid surge in the number of daily Covid infections over the past few weeks, Saudi Arabia has banned its citizens from traveling to sixteen countries, including India. The sixteen countries where the citizens of Saudi Arabia are banned to travel apart from India include Lebanon, Syria, Turkey, Iran, Afghanistan, Yemen, Somalia, Ethiopia, the Democratic Republic of the Congo, Libya, Indonesia, Vietnam, Armenia, Belarus, and Venezuela, reporte ..
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm