ಬ್ರೇಕಿಂಗ್ ನ್ಯೂಸ್
25-11-21 11:11 am HK news Desk ದೇಶ - ವಿದೇಶ
ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ದೋಣಿಯೊಂದು ಮುಳುಗಿದ್ದು ಹಲವಾರು ಜನರು ಸಾವನ್ನಪ್ಪಿದ್ದಾರೆ. ಫ್ರಾನ್ಸ್ ಮತ್ತು ಯುಕೆ ನಡುವಿನ ಕಡಲು ಪ್ರದೇಶದಲ್ಲಿ ಚಲಿಸುತ್ತಿದ್ದ ಈ ದೋಣಿ ಗಾಳಿಯ ಹೋಡೆತಕ್ಕೆ ಸಿಲುಕಿ ಮಗುಚಿಕೊಂಡಿದೆ ಎಂದು ಫ್ರೆಂಚ್ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.
ಈ ಘಟನೆಯು ಫ್ರೆಂಚ್ ಕರಾವಳಿ ನಗರಗಳಾದ ಕ್ಯಾಲೈಸ್ ಮತ್ತು ಡಂಕರ್ಕ್ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಸುಮಾರು 31ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಪ್ರಾಥಮಿಕ ವರದಿಗಳು ಬಂದಿವೆ.
ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಾರ, ಸ್ಥಳೀಯ ಮೀನುಗಾರರು ಮಗುಚಿದ ದೋಣಿ ಮತ್ತು ನೀರಿನ ಮೇಲೆ ತೇಲುತ್ತಿರುವ ದೇಹಗಳನ್ನು ಗುರುತಿಸಿದ ನಂತರ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.


31 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 26 ಜನರು ಜೀವಂತವಾಗಿದ್ದಾರೆ" ಎಂದು ಫ್ರೆಂಚ್ ಜಿಲ್ಲೆ ಟೆಟೆಗೆಮ್ನ ಮೇಯರ್ ಮತ್ತು ಉತ್ತರ ಫ್ರಾನ್ಸ್ ಪ್ರದೇಶದ ಸಾರಿಗೆ ಉಪಾಧ್ಯಕ್ಷ ಫ್ರಾಂಕ್ ಧೆರ್ಸಿನ್ ಹೇಳಿದ್ದಾರೆ.
ರಾಯಿಟರ್ಸ್ ಪ್ರಕಾರ ಸತ್ತವರಲ್ಲಿ ಐವರು ಮಹಿಳೆಯರು ಮತ್ತು ಒಬ್ಬ ಪುಟ್ಟ ಹುಡುಗಿ ಸೇರಿದ್ದಾರೆ ಎಂದು ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.
ಈ ವರ್ಷ 25,700 ಕ್ಕೂ ಹೆಚ್ಚು ಜನರು ಸಣ್ಣ ದೋಣಿಗಳಲ್ಲಿ ಯುಕೆಗೆ ಅಪಾಯಕಾರಿ ಪ್ರಯಾಣವನ್ನು ಮಾಡಿದ್ದಾರೆ - 2020 ಕ್ಕೆ ಹೋಲಿಸಿದರೆ ವಲಸೆ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ.
ಡೋವರ್ ಜಲಸಂಧಿ (Strait) ಪ್ರಪಂಚದಲ್ಲೇ ಅತ್ಯಂತ ಜನನಿಬಿಡ ಹಡಗು ಮಾರ್ಗವಾಗಿದೆ ಮತ್ತು ಈ ಹಿಂದೆ ಗಾಳಿ ತುಂಬಬಹುದಾದ ಸಣ್ಣ ಬೋಟುಗಳ ಮೂಲಕ ಬ್ರಿಟನ್ಗೆ ದಾಟಲು ಪ್ರಯತ್ನಿಸುತ್ತಿರುವವರ ಜೀವವನ್ನು ಬಲಿ ತೆಗೆದುಕೊಂಡಿದೆ.
ಈ ವಾರದ ಆರಂಭದಲ್ಲಿ, ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಫ್ರಾನ್ಸ್ನಿಂದ ನಿರ್ಗಮಿಸುವ ಅಕ್ರಮ ವಲಸಿಗರ ಸಂಖ್ಯೆಯನ್ನು "ಸ್ವೀಕಾರಾರ್ಹವಲ್ಲ" ಎಂದು ಪ್ರತಿಕ್ರಿಯಿಸಿದ್ದರು. ಈ ಸಮಸ್ಯೆಯನ್ನು ನಿಭಾಯಿಸಲು 2021-22ರ ಅವಧಿಯಲ್ಲಿ ಫ್ರಾನ್ಸ್ಗೆ €62.7m (£54m) ನೀಡುವುದಾಗಿ UK ಭರವಸೆ ನೀಡಿದೆ.
At least 31 migrants bound for Britain died Wednesday when their boat sank in the English Channel, in what France’s interior minister called the biggest migration tragedy on the dangerous crossing to date.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
07-10-26 11:12 am
HK News Staffer
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm