ಬ್ರೇಕಿಂಗ್ ನ್ಯೂಸ್
08-11-21 12:15 pm HK News Desk ದೇಶ - ವಿದೇಶ
ಛತ್ತೀಸ್‌ಗಢ, ನ.8: ಯೋಧನೊಬ್ಬ ಸಹ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು ನಾಲ್ವರು ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.
ದೀಪಾವಳಿ ರಜೆ ವಿಚಾರವಾಗಿ ಇಬ್ಬರು ಯೋಧರ ನಡುವೆ ನಡೆದ ಕಿತ್ತಾಟ ಹಾಗೂ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಸಾವನ್ನಪ್ಪಿರುವ ಘಟನೆ ತೆಲಂಗಾಣ - ಛತ್ತೀಸ್‌ಗಢ ಗಡಿಭಾಗದಲ್ಲಿ ಸೋಮವಾರ ನಡೆದಿದೆ. ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಲಿಂಗಂಪಲ್ಲಿ ಬೇಸ್ ಕ್ಯಾಂಪ್‌ನಲ್ಲಿ ದೀಪಾವಳಿ ರಜೆ ವಿಚಾರವಾಗಿ ಯೋಧರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರೂ ಹೊಡೆದಾಡಿದ್ದಾರೆ. ಬಳಿಕ ಜಗಳ ತಾರಕಕ್ಕೇರಿದ್ದು, ಪರಸ್ಪರ ಗನ್‌ಗಳಿಂದ ಗುಂಡು ಹಾರಿಸಿದ್ದಾರೆ. ಮತ್ತಿಬ್ಬರು ಯೋಧರು ಕೂಡ ಘಟನೆಯಲ್ಲಿ ಸಾವನ್ನಪ್ಪಿದ್ದು, ಏಳು ಜನ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಸೋದರ ಹತ್ಯೆಯ ಪ್ರಕರಣದಲ್ಲಿ ಜಿಲ್ಲೆಯ ಮರೈಗುಡ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗನಪಲ್ಲಿ ಗ್ರಾಮದ ಸಿಆರ್‌ಪಿಎಫ್ 50ನೇ ಬೆಟಾಲಿಯನ್‌ನ ಶಿಬಿರದಲ್ಲಿ ಬೆಳಗಿನ ಜಾವ 3.45ರ ಸುಮಾರಿಗೆ ರೀತೇಶ್ ರಂಜನ್ ಎಂದು ಗುರುತಿಸಲಾದ ಸೈನಿಕನೊಬ್ಬ ಸಹ ಸೈನಿಕರ ಮೇಲೆ ಗುಂಡು ಹಾರಿಸಿದ್ದಾನೆ. ತನ್ನ ಸೇವಾ ಆಯುಧವಾದ ಎಕೆ -47 ರೈಫಲ್‌ನಿಂದ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ಶ್ರೇಣಿ) ಸುಂದರರಾಜ್ ಪಿ ತಿಳಿಸಿದ್ದಾರೆ.
ಘಟನೆಯಲ್ಲಿ ಏಳು ಸಿಬ್ಬಂದಿ ಗಂಭೀರ ಗಾಯಗೊಂಡಿದ್ದು, ತಕ್ಷಣ ಚಿಕಿತ್ಸೆಗಾಗಿ ಭದ್ರಾಚಲಂ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಅವರಲ್ಲಿ ನಾಲ್ವರು ಗಾಯಗೊಂಡು ಸಾವನ್ನಪ್ಪಿದ್ದಾರೆ. ಮೃತರನ್ನು ಕಾನ್‌ಸ್ಟೇಬಲ್‌ಗಳಾದ ರಾಜಮಣಿ ಕುಮಾರ್ ಯಾದವ್, ರಾಜೀಬ್ ಮೊಂಡಲ್, ಧಂಜಿ ಮತ್ತು ಧರ್ಮೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ.
ಗುಂಡಿನ ದಾಳಿಯ ಹಿಂದಿನ ಉದ್ದೇಶ ನಿಖರವಾಗಿ ಇನ್ನೂ ಪತ್ತೆಯಾಗಿಲ್ಲ ಮತ್ತು ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ರೀತೇಶ್ ರಂಜನ್ ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಛತ್ತೀಸ್‌ಗಢದಲ್ಲಿ ಇಂಥಹ ಘಟನೆ ಇದೇ ಮೊದಲಲ್ಲ. ಕಳೆದ ಎರಡು ವರ್ಷದ ಹಿಂದೆ ಇಂಥದ್ದೇ ಘಟನೆ ನಡೆದಿತ್ತು. ನಾರಾಯಣಪುರ ಜಿಲ್ಲೆಯಲ್ಲಿ ಇಂಡೋ ಬಾರ್ಡರ್ ಟಿಬೆಟಿಯನ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ನಡುವೆ ನಡೆದು ಆರು ಮಂದಿ ಸಾವಿಗೆ ಕಾರಣವಾಗಿತ್ತು. ಇಲ್ಲಿನ ಕಡೇನರ್ ಗ್ರಾಮದಲ್ಲಿರುವ 45ನೇ ಐಟಿಬಿಪಿ ತುಕಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೇದೆ ತನ್ನ ಸೇವಾ ಬಂದೂಕಿನಿಂದ ಸಹೋದ್ಯೋಗಿಗಳ ಮೇಲೆ ಮನಸೋಯಿಚ್ಛೆ ಗುಂಡಿನ ಮಳೆಗರೆದಿದ್ದು, ನಂತರ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದರು. ಗುಂಡಿನ ದಾಳಿಗೂ ಮುನ್ನ ಸಿಬ್ಬಂದಿ ನಡುವೆ ರಜೆಗೆ ಸಂಬಂಧಿಸಿದಂತೆ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. ಗುಂಡೇಟಿನಿಂದ ಸ್ಥಳದಲ್ಲೇ ನಾಲ್ವರು ಯೋಧರು ಮೃತಪಟ್ಟರೆ, ಗಾಯಗೊಂಡ ಇತರೆ ಮೂವರಲ್ಲಿ ಒಬ್ಬ ಪೇದೆ ನಂತರ ಕೊನೆಯುಸಿರೆಳೆದಿದ್ದರು. ಇಬ್ಬರು ಗಾಯಾಳು ಯೋಧರನ್ನು ಏರ್‌ಲಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಮಸೂದುಲ್ ರೆಹ್ಮಾನ್ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದು, ಇತರ ಸಹೋದ್ಯೋಗಿಗಳು ಪ್ರತಿಯಾಗಿ ಅವರ ಮೇಲೆ ದಾಳಿ ನಡೆಸಿಲ್ಲ ಎಂದು ಐಟಿಬಿಪಿ ವಕ್ತಾರರಾಗಿದ್ದ ವಿವೇಕ್ ಕುಮಾರ್ ಪಾಂಡೆ ಸ್ಪಷ್ಟಪಡಿಸಿದ್ದಾರೆ. ಮೃತರನ್ನು ಮುಖ್ಯ ಪೇದೆಗಳಾದ ಮಹೇಂದ್ರ ಸಿಂಗ್ ಮತ್ತು ದಲ್ಜಿತ್ ಸಿಂಗ್, ಪೇದೆಗಳಾದ ಸುರ್ಜಿತ್ ಸರ್ಕಾರ, ಬಿಸ್ವರೂಪ್ ಮೆಹ್ತೊ ಮತ್ತು ಬಿಜೀಷ್ ಎಂದು ಗುರುತಿಸಲಾಗಿದೆ.
Four personnel of the Central Reserve Police Force (CRPF) were killed and three others were injured on Monday after one of their colleagues opened fire at them at a camp of the paramilitary force in Chhattisgarh’s Sukma district. The incident occurred at around 3:30 am in the camp of CRPF's 50th battalion in Lingampalli village of the district, located around 400 km away from capital Raipur, news agency PTI reported quoting Inspector General of Police (Bastar range) Sundarraj P.
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am