ಬ್ರೇಕಿಂಗ್ ನ್ಯೂಸ್
25-10-21 05:01 pm Headline Karnataka News Desk ದೇಶ - ವಿದೇಶ
ಬಾಲಿ, ಅ.25: ಆಧುನಿಕ ಇಂಡೋನೇಶ್ಯಾದ ನಿರ್ಮಾತೃ, ದೇಶದ ಮೊದಲ ಅಧ್ಯಕ್ಷರ ಪುತ್ರಿಯೀಗ ಇಸ್ಲಾಮ್ ಬಿಟ್ಟು ಹಿಂದು ಧರ್ಮಕ್ಕೆ ಸೇರಲು ತಯಾರಾಗಿದ್ದಾರೆ. ಮಾಜಿ ಅಧ್ಯಕ್ಷ ದಿವಂಗತ ಸುಕರ್ಣೋ ಅವರ ಮೂರನೇ ಪುತ್ರಿ, 70 ವರ್ಷದ ಸುಕ್ಮಾವತಿ ಸುಕರ್ಣೋಪುತ್ರಿ ಎಂಬವರು ಅ.26ರಂದು ನಡೆಯುವ ಅದ್ದೂರಿ ಸಮಾರಂಭದಲ್ಲಿ ಹಿಂದು ಧರ್ಮ ಸ್ವೀಕರಿಸಲಿದ್ದಾರೆ.
ಸುಕರ್ಣೋ ಅವರ ಪೂರ್ವಜರಿಗೆ ಸೇರಿದ ಭೂಮಿ, ಬಾಲಿ ದ್ವೀಪದ ಸಿಂಗರಾಜ ನಗರದ ಬುಲೆಲಂಗ್ ಪ್ರಾಂತದಲ್ಲಿ ಸಮಾರಂಭ ನಡೆಯಲಿದೆ. ಅಲ್ಲಿ ಸುಕ್ಮಾವತಿ ಅವರ ಅಜ್ಜಿ ಮನೆಯ ಬಳಿಯಲ್ಲೇ ಬಾಲಿ ಅಗಂಗ್ ಸಿಂಗರಾಜ ಹೆಸರಲ್ಲಿ ಸುಕರ್ಣೋ ಅವರ ಪ್ರತಿಮೆ ನಿರ್ಮಿಸಲಾಗಿದ್ದು, ಅದೇ ಜಾಗದಲ್ಲಿ ಸಮಾರಂಭ ಏರ್ಪಡಿಸಲಾಗಿದೆ. ಅದ್ದೂರಿ ಸಮಾರಂಭ ಏರ್ಪಡಿಸಿ, ಮತಾಂತರ ಆಗುವುದಕ್ಕೆ ತನ್ನ ಕುಟುಂಬಸ್ಥರ ಒಪ್ಪಿಗೆಯನ್ನೂ ಸುಕ್ಮಾವತಿ ಪಡೆದಿದ್ದಾರೆ.
ಸುಕ್ಮಾವತಿಯವರು, ಇಂಡೋನೇಶ್ಯಾದ ಮೊದಲ ಅಧ್ಯಕ್ಷ ಸುಕರ್ಣೋ ಮತ್ತು ಅವರ ಮೂರನೇ ಪತ್ನಿ ಫತ್ಮಾವತಿಯವರ ಪುತ್ರಿ. ಅಲ್ಲದೆ, ಇಂಡೋನೇಶ್ಯಾದ 5ನೇ ಅಧ್ಯಕ್ಷರಾಗಿದ್ದ ಮೇಘಾವತಿ ಸುಕರ್ಣೋಪುತ್ರಿಯವರ ಸೋದರಿ. ಸುಕ್ಮಾವತಿ ಅವರು ಕಂಜೆಂಗ್ ಗುಸ್ತಿ ಪಂಜೇರಾನ್ ಪ್ರಾಂತದ ರಾಜ ಮನೆತನದ ಆರ್ಯ ಮಂಕುಂಗೆರಾ ಅವರನ್ನು ವರಿಸಿದ್ದರು. ಆದರೆ, 1984ರಲ್ಲಿಯೇ ಅವರಿಂದ ವಿಚ್ಛೇದನ ಮಾಡಿಕೊಂಡಿದ್ದರು. ಸುಕ್ಮಾವತಿ ತಮ್ಮ ಇಳಿವಯಸ್ಸಿನಲ್ಲಿ ಹಿಂದು ಧರ್ಮದ ಬಗ್ಗೆ ಒಲವು ತೋರಲು ತನ್ನ ಅಜ್ಜಿಯೇ ಪ್ರೇರಣೆ ಎನ್ನಲಾಗುತ್ತಿದೆ. ಬಾಲಿ ದ್ವೀಪದಲ್ಲಿ ನೆಲೆಸಿದ್ದ ಅಜ್ಜಿ ಇಡಾ ಅಯು ನ್ಯೋಮನ್ ರೇ ಅವರು ಹಿಂದುವಾಗಿದ್ದರು. ಇಂಡೋನೇಶ್ಯಾದ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಸುಕ್ಮಾವತಿ, ಇಂಡೋನೇಶ್ಯಾ ನೇಶನಲ್ ಪಾರ್ಟಿ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು.
ಕಾಕತಾಳೀಯ ಅಂದ್ರೆ, ಅ.26ರಂದು ಸುಕ್ಮಾವತಿ ಅವರ 70ನೇ ಜನ್ಮದಿನ. ಅದೇ ದಿನವೇ ಹಿಂದು ಧರ್ಮಕ್ಕೆ ಸಮಾರಂಭ ಏರ್ಪಡಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಕ್ಮಾವತಿಯವರ ವಕೀಲ ವಿತರ್ಯಾನೋ ರೆಜ್ಸೋಪ್ರಜೊ, ಸುಕ್ಮಾವತಿಯವರು ಹಿಂದು ಧರ್ಮದ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರು. ಹಿಂದು ಪುರಾಣಗಳ ಬಗ್ಗೆ ನಂಬಿಕೆ ಹೊಂದಿದ್ದಾರೆ. ಇದಕ್ಕೆ ಅವರ ಅಜ್ಜಿ ಹಿಂದುವಾಗಿದ್ದುದೇ ಕಾರಣ ಇರಬಹುದು. ಅವರ ತಾಯಿ ಬಂಗ್ ಕರ್ಣೋ ಕೂಡ ಬಾಲಿ ದ್ವೀಪದ ಇಡಾ ನ್ಯೋಮನ್ ವರ್ಗಕ್ಕೆ ಸೇರಿದವರು ಎಂದಿದ್ದಾರೆ.
ಬಾಲಿಯಲ್ಲಿರುವ ಸುಕರ್ಣೋ ಸೆಂಟರ್ ಮುಖ್ಯಸ್ಥ ಆರ್ಯ ವೇದಕರ್ಣ ಕೂಡ ಸುಕ್ಮಾವತಿ ಹಿಂದು ಧರ್ಮ ಸೇರುವ ಬಗ್ಗೆ ಆಸಕ್ತರಾಗಿದ್ದಾರೆ. ಸುಕ್ಮಾವತಿ ಬಾಲಿಗೆ ಭೇಟಿ ನೀಡುತ್ತಿದ್ದ ವೇಳೆ ಹಿಂದು ಸಂಪ್ರದಾಯಗಳನ್ನು ಪಾಲಿಸುತ್ತಿದ್ದರು. ಹಿಂದು ಧರ್ಮದ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದರು. ಈಗ ಸಮಾರಂಭವನ್ನು ಒಳ್ಳೆಯ ರೀತಿಯಲ್ಲಿ ನಡೆಸಲು ಮುತುವರ್ಜಿ ವಹಿಸಿದ್ದಾರೆ ಎನ್ನುತ್ತಿದ್ದಾರೆ. ಮತಾಂತರ ಆದಬಳಿಕ ಸುಕ್ಮಾವತಿ ಬಾಲಿಯಲ್ಲೇ ನೆಲೆಸುತ್ತಾರೆಯೇ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಜಗತ್ತಿನಲ್ಲೇ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ಇಂಡೋನೇಶ್ಯಾದ ಮೊದಲ ಅಧ್ಯಕ್ಷರ ಪುತ್ರಿ ಹಿಂದುವಾಗಿ ಮತಾಂತರ ಆಗುತ್ತಿರುವುದು ಭಾರೀ ಪ್ರಚಾರ ಪಡೆದಿದೆ.
ಬಾಲೆ ದ್ವೀಪದಲ್ಲಿ ಅದ್ದೂರಿ ಸಮಾರಂಭಕ್ಕೆ ಸಿದ್ಧತೆ ನಡೆದಿದ್ದು, ಅಲಂಕಾರ ಇನ್ನಿತರ ಕಾರ್ಯಗಳು ನಡೆಯುತ್ತಿವೆ. ಹಿಂದು ವಿಧಿಗಳ ಪ್ರಕಾರ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 11.30ರಿಂದ 1ರ ಮಧ್ಯೆ ಮುಹೂರ್ತ ನಿಗದಿಯಾಗಿದೆ. ಭಾರತದ ಮದುವೆ ಕಾರ್ಯಕ್ರಮದಂತೆ ರಿಸೆಪ್ಶನ್ ನಡೆಯಲಿದ್ದು, ಸಮಾರಂಭಕ್ಕೆ ಅಲ್ಲಿನ ಸಂಪ್ರದಾಯ ಪ್ರಕಾರ ಸುಧಿ ವದಾನಿ ಎಂಬ ಹೆಸರಿಡಲಾಗಿದೆ. ಸಿಂಗರಾಜ ನಗರದ ಮೇಯರ್ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಂಡೋನೇಶ್ಯಾ ಹಿಂದು ಧರ್ಮ ಪರಿಷತ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ನಡುವೆ, ಸುಧಿ ವದಾನಿ ಕಾರ್ಯಕ್ರಮದ ಆಮಂತ್ರಣ ಪತ್ರ ಇಂಡೋನೇಶ್ಯಾದ ಮಾಧ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಕಾರ್ಯಕ್ರಮಕ್ಕೆ ಕೋವಿಡ್ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಇರಲಿದೆ.
ಇಂಡೋನೇಶ್ಯಾದಲ್ಲಿ ಹಿಂದಿನ ಕಾಲದಲ್ಲಿ ಹಿಂದುಗಳು ಮತ್ತು ಬೌದ್ಧರು ಹೆಚ್ಚಿದ್ದರು. ಪರ್ಶಿಯನ್ನರ ದಾಳಿ ಬಳಿಕ ಅಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಾ ಬಂದಿತ್ತು. ಕೆಲವು ದ್ವೀಪಗಳಲ್ಲಿ ಈಗಲೂ ಹಿಂದು ಮತ್ತು ಬೌದ್ಧರು ಮಾತ್ರ ಇದ್ದಾರೆ. ಹಿಂದು ಪುರಾಣಗಳ ಬಗ್ಗೆ ಇಂಡೋನೇಶ್ಯಾದಲ್ಲಿ ಹೆಚ್ಚಿನ ಗೌರವ ಇದೆ. ಅಲ್ಲಿ ಸರಕಾರ ಮತ್ತು ಮುಸ್ಲಿಮ್ ಜನರು ಕೂಡ ಭಾರತ ಮತ್ತು ಹಿಂದು ಪುರಾಣಗಳ ಬಗ್ಗೆ ಗೌರವ ಹೊಂದಿದ್ದಾರೆ.
Sukmawati Sukarnoputri, the daughter of the first President of Indonesia, has decided to convert to Hinduism from Islam. She will embrace Hinduism in a formal ceremony to be held on October 26th, reported CNN Indonesia. The conversion ceremony ‘Sudhi Wadani’ will be conducted at the Bali Agung Singaraja at the Buleleng Regency in Singaraja city of Bali, the ancestral land of the family. Bali Agung Singaraja is a monument to her late father Sukarno, built near the home of her grandmother in North Bali.
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am