ಬ್ರೇಕಿಂಗ್ ನ್ಯೂಸ್
14-09-21 09:02 pm Headline Karnataka News Network ದೇಶ - ವಿದೇಶ
ಮುಂಬೈ, ಸೆ.14 : ಮಹಿಳೆಯರ ಮೇಲಿನ ಕಿರುಕುಳ, ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ತುರ್ತಾಗಿ ನಿರ್ವಹಿಸಲು ಮುಂಬೈ ಮಹಾನಗರದಲ್ಲಿ ನಿರ್ಭಯಾ ಸ್ಕ್ವಾಡ್ ಹೆಸರಲ್ಲಿ ಪ್ರತ್ಯೇಕ ತಂಡವೊಂದನ್ನು ಅಸ್ತಿತ್ವಕ್ಕೆ ತರಲಾಗಿದೆ. ಕಳೆದ ವಾರ ಕಾಕಿನಾಡದಲ್ಲಿ ಯುವತಿಯನ್ನು ರೇಪ್ ಮಾಡಿ, ಕೊಂದು ಹಾಕಿದ್ದ ಘಟನೆ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಮಹಿಳಾ ಅಧಿಕಾರಿಗಳೇ ಹೆಚ್ಚಿರುವ ಹೊಸ ಪೊಲೀಸ್ ತಂಡವನ್ನು ಮಹಾರಾಷ್ಟ್ರ ಸರಕಾರ ಅಸ್ತಿತ್ವಕ್ಕೆ ತಂದಿದೆ.
ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ಶಾಲೆ, ಕಾಲೇಜು, ಉದ್ಯೋಗ ಎಂದು ಬೇರೆ ಬೇರೆ ಕಾರಣಕ್ಕೆ ಸಮಾಜದಲ್ಲಿ ಹೊರಗೆ ಬರುತ್ತಾರೆ. ಇವರಿಗೆ ಮೆಸೇಜ್, ಕರೆಗಳ ಮೂಲಕ ಕಿರುಕುಳ ಕೊಡುವುದು ಕೇಳಿಬರುತ್ತಿದೆ. ಇಂಥ ಪ್ರಕರಣಗಳನ್ನು ಹ್ಯಾಂಡಲ್ ಮಾಡುವ ನಿಟ್ಟಿನಲ್ಲಿ ಮತ್ತು ಸಮಾಜದಲ್ಲಿ ಮಹಿಳೆಯ ಗೌರವ ರಕ್ಷಿಸುವ ಸಲುವಾಗಿ ಹೊಸ ತಂಡವನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಮುಂಬೈ ಪೊಲೀಸ್ ಈ ಕುರಿತು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ನಿರ್ಭಯಾ ಸ್ಕ್ವಾಡ್ ಪ್ರತಿ ಪೊಲೀಸ್ ಠಾಣೆಯಲ್ಲಿ ಇರಬೇಕು. ಪ್ರತಿ ಠಾಣೆಯಲ್ಲಿ ಮಹಿಳೆಯರ ಮೇಲಿನ ಕಿರುಕುಳ ಮತ್ತು ದೌರ್ಜನ್ಯ ಪ್ರಕರಣಗಳ ನಿಗಾ ಇರಿಸುವುದಕ್ಕಾಗಿ ಐದು ಪೆಟ್ರೋಲಿಂಗ್ ವಾಹನಗಳನ್ನು ಇರಿಸಲಾಗುತ್ತದೆ. ಅದಕ್ಕೆ ನಿರ್ಭಯಾ ಪಥಕ್ ಎನ್ನುವ ಹೆಸರಿಡಲಾಗುವುದು. ಈ ನಿರ್ಭಯಾ ತಂಡದ ಮೇಲ್ವಿಚಾರಣೆಗಾಗಿ ಎಸಿಪಿ ಅಥವಾ ಇನ್ ಸ್ಪೆಕ್ಟರ್ ದರ್ಜೆಯ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಪ್ರತಿ ತಂಡದಲ್ಲಿ ಪಿಎಸ್ಐ ಅಥವಾ ಎಎಸ್ಐ ದರ್ಜೆಯ ಮಹಿಳಾ ಅಧಿಕಾರಿ ಇರುತ್ತಾರೆ. ಜೊತೆಗೆ ಮತ್ತೊಬ್ಬ ಮಹಿಳಾ ಪೇದೆ, ಪುರುಷ ಪೇದೆ ಮತ್ತು ಚಾಲಕ ಇರುತ್ತಾರೆ. ಇದಕ್ಕಾಗಿ ಈ ತಂಡಕ್ಕೆ ನೇಮಕ ಮಾಡೋದಕ್ಕೂ ಮುನ್ನ ಎರಡು ದಿನಗಳ ಪ್ರತ್ಯೇಕ ತರಬೇತಿ ಇರಲಿದೆ.
ಇದಲ್ಲದೆ, ಮಹಿಳೆಯರ ಮೇಲಿನ ಕಿರುಕುಳ ತಪ್ಪಿಸಲು ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನೆಗ್ರಾಳೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಸಿಸಿಟಿವಿ ಇಲ್ಲದ ಕಡೆಗಳನ್ನು ಗುರುತಿಸಿ, ಅಲ್ಲಿ ಸಿಸಿಟಿವಿ ಅಳವಡಿಸುವುದು, ರಾತ್ರಿ ಬೆಳಕಿಲ್ಲದೆ ಕತ್ತಲು ಕಾಣಿಸುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಗಸ್ತು ಹೆಚ್ಚಿಸುವುದಕ್ಕೆ ಆಯಾ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Against the backdrop of the Sakinaka rape and murder case, the top brass of the Mumbai police has decided to create a dedicated ‘Nirbahaya Squad’ in every police station to prevent crimes against women, officials said.WSWAQ
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm