ಬ್ರೇಕಿಂಗ್ ನ್ಯೂಸ್
09-09-21 05:45 pm Headline Karnataka News Network ದೇಶ - ವಿದೇಶ
ಕಾಬೂಲ್, ಸೆ.9: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರು ಕ್ರಿಕೆಟ್ ಆಡುವಂತಿಲ್ಲ. ಬಾಸ್ಕೆಟ್ ಬಾಲ್, ವಾಲಿಬಾಲ್ ಇನ್ನಿತರ ಹೊರಾಂಗಣದಲ್ಲಿ ಆಡುವ ಯಾವುದೇ ಆಟಗಳನ್ನು ಆಡುವಂತಿಲ್ಲ. ತಾಲಿಬಾನ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮತಾಂಧರ ಬಣ್ಣ ಹೊರಬರುತ್ತಿದ್ದು, ಮಹಿಳೆಯರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನಗಳು ಹೊರಬರುತ್ತಿವೆ.
ಈ ಬಗ್ಗೆ ಆಸ್ಟ್ರೇಲಿಯಾದ ಮೀಡಿಯಾ ಸಂಸ್ಥೆಗೆ ಸಂದರ್ಶನ ನೀಡಿರುವ ಅಫ್ಘಾನ್ ನೂತನ ಸರಕಾರದ ಸಚಿವ ಅಹ್ಮದುಲ್ಲಾ ವಾಸಿಕ್, ಅಫ್ಘಾನಿಸ್ತಾನದ ಮಹಿಳೆಯರು ಕ್ರಿಕೆಟ್ ಆಡಬೇಕಾದ ಅಗತ್ಯ ಇಲ್ಲ. ಹೀಗಾಗಿ ಕ್ರಿಕೆಟ್ ಸೇರಿದಂತೆ ಹೊರಾಂಗಣದಲ್ಲಿ ಆಡುವ ಆಟಗಳನ್ನು ಆಡುವಂತಿಲ್ಲ. ಅದರಿಂದ ಮಹಿಳೆಯರ ದೇಹ ಹೊರಗಿನವರಿಗೆ ಕಾಣುತ್ತದೆ ಎಂದು ಹೇಳಿದ್ದಾನೆ.


ಮಹಿಳೆಯರು ಕ್ರಿಕೆಟ್ ಆಟದಲ್ಲಿ ತೊಡಗಿದರೆ, ಅವರ ಮುಖ ಮತ್ತು ದೇಹವನ್ನು ಇತರರು ನೋಡುತ್ತಾರೆ. ಇಸ್ಲಾಂನಲ್ಲಿ ಮಹಿಳೆಯರನ್ನು ಈ ರೀತಿ ಪರ ಪುರುಷರು ನೋಡುವುದು ನಿಷಿದ್ಧ. ಈಗಿನ ಮೀಡಿಯಾ ಯುಗದಲ್ಲಿ ಮಹಿಳೆಯರ ಆಟದ ವಿಡಿಯೋ, ಫೋಟೋಗಳು ಹೊರಜಗತ್ತಿಗೆ ಬರುತ್ತವೆ, ಅದನ್ನು ಜನರು ನೋಡುತ್ತಾರೆ. ಅದಕ್ಕಾಗಿ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಮತ್ತು ಇಸ್ಲಾಂ ರಾಷ್ಟ್ರದಲ್ಲಿ ಮಹಿಳೆಯರ ದೇಹ ಕಾಣುವ ರೀತಿಯ ಕ್ರಿಕೆಟ್ ಇನ್ನಿತರ ಆಟಗಳನ್ನು ನಿಷೇಧ ವಿಧಿಸಲಾಗುವುದು ಎಂದಿದ್ದಾನೆ. ಅಫ್ಘಾನಿಸ್ತಾನದಲ್ಲಿ ಮಹಿಳಾ ಕ್ರಿಕೆಟ್ ತಂಡ, ಬಾಸ್ಕೆಟ್ ಬಾಲ್ ತಂಡಗಳಿದ್ದು, ಕಳೆದ 20 ವರ್ಷಗಳಲ್ಲಿ ಹಲವು ಬಾರಿ ಸಾಧನೆಗಳನ್ನು ಮೆರೆದಿದ್ದರು. ಆದರೆ, ತಾಲಿಬಾನ್ ಆಡಳಿತದಲ್ಲಿ ಇವೆಲ್ಲದಕ್ಕೂ ನಿಷೇಧ ಹಾಕಿದ್ದು, ಕ್ರೀಡಾ ಜಗತ್ತಿನಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯರೆಲ್ಲ ಮನೆಯಲ್ಲೇ ಉಳಿಯುವಂತಾಗಿದೆ.
ವಾರದ ಹಿಂದಷ್ಟೇ ಶಾಲೆ, ಕಾಲೇಜುಗಳಲ್ಲಿ ಯುವತಿಯರು ಮತ್ತು ಯುವಕರು ಪ್ರತ್ಯೇಕವಾಗಿ ತರಗತಿಯಲ್ಲಿ ಕುಳಿತುಕೊಳ್ಳಬೇಕು. ಅದಕ್ಕಾಗಿ ತರಗತಿಯ ನಡುವೆ ಹೆಚ್ಚುವರಿ ಪರದೆ ಹಾಕಬೇಕು ಎಂದು ತಾಲಿಬಾನಿಗಳು ಹೇಳಿದ್ದರು. ಅಲ್ಲದೆ, ಯುವತಿಯರು ಮುಖವನ್ನು ಮುಚ್ಚಿಕೊಂಡು, ಕೈಕಾಲುಗಳನ್ನೂ ಪೂರ್ತಿಯಾಗಿ ಮುಚ್ಚುವಂತೆ ಬಟ್ಟೆ ಧರಿಸಬೇಕು. ಯುವತಿಯರಿಗೆ ಮಹಿಳಾ ಶಿಕ್ಷಕಿಯರೇ ಕಲಿಸಬೇಕು ಎಂದು ಆದೇಶ ಮಾಡಿದ್ದರು.
Afghan women, including the country's national women's cricket team, will be prohibited from participating in sports under the new Taliban regime, the Taliban said on Wednesday. Ahmadullah Wasiq, the deputy chairman of the Taliban's culture commission, claimed in an interview with Australian media that women's sport was neither appropriate nor required.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm