ಬ್ರೇಕಿಂಗ್ ನ್ಯೂಸ್
24-06-21 11:25 am Headline Karnataka News Network ದೇಶ - ವಿದೇಶ
ಬಾರ್ಸಿಲೋನಾ, ಜೂನ್ 24: ಜನಪ್ರಿಯ ಆಂಟಿ ವೈರಸ್ ಸೃಷ್ಟಿಕರ್ತ ಜಾನ್ ಮೆಕಾಫಿ ಜೈಲಿನಲ್ಲಿಯೇ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಾವಿನ ಬಗ್ಗೆ ಅನುಮಾನ ಸೃಷ್ಟಿಯಾಗಿದೆ.
ಜಾನ್ ತೆರಿಗೆ ವಂಚನೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲು ಸೇರಿದ್ದರು. ಬಾರ್ಸಿಲೋನಾದ ಜೈಲಿನ ತಮ್ಮ ಸೆಲ್‌ನಲ್ಲಿ ಜಾನ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು ಆತ್ಮಹತ್ಯೆ ಬಗ್ಗೆ ಶಂಕೆ ಮೂಡಿಸಿದೆ.
75 ವರ್ಷ ವಯಸ್ಸಿನ ಅಮೆರಿಕ ಪೌರತ್ವ ಹೊಂದಿರುವ ಜಾನ್ ತೆರಿಗೆ ಪ್ರಕರಣದಲ್ಲಿ ಬಂಧಿಯಾಗಿದ್ದು ಅಮೆರಿಕ ದೇಶಕ್ಕೆ ಗಡಿಪಾರಾಗಬೇಕಿತ್ತು.




ಯಾರೀತ ಮೆಕಾಫಿ ?
ಕಂಪ್ಯೂಟರ್ ಪ್ರೋಗ್ರಾಮರ್ ಉದ್ಯಮಿಯಾಗಿದ್ದ ಮೆಕಾಫಿ 1987ರಲ್ಲಿ ತಮ್ಮ ಒಡನಾಡಿಗಳ ಜೊತೆ Anti-ವೈರಸ್ ತಂತ್ರಾಂಶ ಉತ್ಪಾದನೆಗಾಗಿ ಐಟಿ ಸಂಸ್ಥೆ ಸ್ಥಾಪಿಸಿದರು. 1994ರ ತನಕ ಸಂಸ್ಥೆಯನ್ನು ಮುನ್ನಡೆಸಿದ್ದರು. 2011ರಲ್ಲಿ ಇಂಟೆಲ್ ಸಂಸ್ಥೆ ಇದೇ ತಂತ್ರಾಂಶವನ್ನು ಖರೀದಿಸಿತ್ತು. ಇದಕ್ಕೂ ಮುನ್ನ ನಾಸಾ, ಜೆರಾಕ್ಸ್, ಲಾಕ್ ಹೀಡ್ ಮಾರ್ಟಿನ್ ಮುಂತಾದ ಪ್ರತಿಷ್ಠಿತ ಸಂಸ್ಥೆಯಲ್ಲಿ ಮೆಕಾಫಿ ಕಾರ್ಯ ನಿರ್ವಹಿಸಿದ್ದರು.
ಮೆಕಾಫಿಯವರು ಇದಕ್ಕೂ ಮುನ್ನ, ಟ್ರೈಬಲ್ ವಾಯ್ಸ್, ಕ್ಯುರಂ ಎಕ್ಸ್, ಫ್ಯೂಚರ್ ಟೆನ್ಸ್ ಸೆಂಟ್ರಲ್ ಮುಂತಾದ ಸಂಸ್ಥೆ ಸ್ಥಾಪಿಸಿದ್ದರು. ಅನೇಕ ಸಂಸ್ಥೆಗಳ ಸ್ಥಾಪನೆಗೆ ಉತ್ತೇಜನ ನೀಡಿದರು. ಕ್ರಿಪ್ಟೋಕರೆನ್ಸಿ, ಆಪ್ಸ್, ಯೋಗ, ಹರ್ಬಲ್ ಆಂಟಿಬಯೋಟಿಕ್ಸ್ ಬಗ್ಗೆ ಜಾನ್ ಆಸಕ್ತಿ ಹೊಂದಿದ್ದರು. 2016ರಲ್ಲಿ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೆಕಾಫಿಯ ಹೆಸರೂ ಕೇಳಿ ಬಂದಿತ್ತು. ಲಿಬರೇಟಿಯನ್ ಪಾರ್ಟಿಯಲ್ಲಿ ಮೆಕಾಫಿ ಕಾಣಿಸಿಕೊಂಡಿದ್ದರು.






2019ರಲ್ಲಿ ಬೆಲಿಜಿಯಲ್ಲಿ ನೆರೆ ಮನೆಯಾತನನ್ನು ಹತ್ಯೆ ಸಂಚು ರೂಪಿಸಿದ ಆರೋಪದ ಮೇಲೆ ಮೆಕಾಫಿಗೆ 25 ಮಿಲಿಯನ್ ಡಾಲರ್ ದಂಡ ವಿಧಿಸಲಾಗಿತ್ತು. 2014 ರಿಂದ 2018ರ ಅವಧಿಯಲ್ಲಿ ಮೆಕಾಫಿ 12 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದು, ತೆರಿಗೆ ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ. ತೆರಿಗೆ ವಂಚನೆ ಪ್ರಕರಣದಲ್ಲಿ 2020ರ ಅಕ್ಟೋಬರ್ 6ರಂದು ಸ್ಪೇನ್ ನಗರದಲ್ಲಿ ಜಾನ್ ಅವರನ್ನು ಬಂಧಿಸಲಾಯಿತು. ಆರೋಪ ಸಾಬೀತಾದರೆ 30 ವರ್ಷ ಶಿಕ್ಷೆ ವಿಧಿಸಬೇಕಾಗುತ್ತದೆ, ಅಮೆರಿಕಕ್ಕೆ ಗಡೀಪಾರು ಮಾಡುವಂತೆ ಯುಎಸ್ ಷೇರುಪೇಟೆ ಮನವಿ ಮಾಡಿತ್ತು. ಪ್ರಕರಣ ವಿಚಾರಣೆ ಹಂತದಲ್ಲಿದ್ದರಿಂದ ಬಾರ್ಸಿಲೋನಾದ ಜೈಲಿನಲ್ಲಿ ಜಾನ್ ಅವರನ್ನು ಇರಿಸಲಾಗಿತ್ತು. ಆರೋಪಗಳನ್ನು ತಳ್ಳಿ ಹಾಕಿದ್ದ ಜಾನ್, ಜೀವನ ಪರ್ಯಂತ ಯುಎಸ್ ಜೈಲಿನಲ್ಲಿ ಕಾಲಕಳೆಯಲು ಸಿದ್ಧ ಎಂದಿದ್ದರು. ಆದರೆ, ಈಗ ದಿಢೀರ್ ಆಗಿ ಜೈಲಿನಲ್ಲಿ ಸಾವು ಕಂಡಿದ್ದಾರೆ.
John McAfee, the creator of McAfee antivirus software, was found dead in his jail cell near Barcelona in an apparent suicide Wednesday, hours after a Spanish court approved his extradition to the United States to face tax charges punishable by decades in prison, authorities said.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am