ಬ್ರೇಕಿಂಗ್ ನ್ಯೂಸ್
22-06-21 10:54 am Headline Karnataka News Network ದೇಶ - ವಿದೇಶ
ದೆಹಲಿ, ಜೂನ್ 22: ಗಿನ್ನೆಸ್ ದಾಖಲೆಗಾಗಿ ಕೆಲವರು ಏನೆಲ್ಲ ಕಸರತ್ತು ನಡೆಸುತ್ತಾರೆ. ಇಲ್ಲೊಬ್ಬ ವ್ಯಕ್ತಿ ಮೂಗಿನಲ್ಲಿ ಕಂಪ್ಯೂಟರ್ ಪರದೆಯ ಕೀಲಿಮಣೆ ಬಳಸುವ ಮೂಲಕ 9 ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಕಂಪ್ಯೂಟರ್ ಕೀಲಿಯನ್ನು ಕೈಗಳಿಂದಲೇ ಟೈಪ್ ಮಾಡುತ್ತಾರೆ. ಆದರೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿನೋದ್ ಕುಮಾರ್ ಚೌದರಿ ಮೂಗಿನ ಸಹಾಯದಿಂದ ಟೈಪಿಂಗ್ ಮಾಡುತ್ತಾರೆ. ತಮ್ಮ ಈ ವಿನೂತನ ಶೈಲಿಯ ಟೈಪಿಂಗ್ ಮುಖಾಂತರವೇ ಅವರು ಬರೊಬ್ಬರಿ 9 ಗಿನ್ನೆಸ್ ವಿಶ್ವ ದಾಖಲೆಗಳನ್ನು ತಮ್ಮದಾಗಿಸಿದ್ದಾರೆ.
ದೆಹಲಿಯ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ 41 ವರ್ಷದ ವಿನೋದ್ ಕುಮಾರ್ ಚೌಧರಿ 2014ರಲ್ಲಿ ಮೂಗಿನಲ್ಲಿ ಅತಿ ವೇಗದಲ್ಲಿ ಕಣ್ಮುಚ್ಚಿಕೊಂಡು ಟೈಪ್ ಮಾಡಿ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದರು. ಅಲ್ಲದೆ ಬಾಯಿಯಲ್ಲಿ ಕೋಲು ಹಿಡಿದು ಟೈಪಿಂಗ್ ಮಾಡುವುದು, ಕಣ್ಮುಚ್ಚಿಕೊಂಡು ಟೈಪಿಂಗ್ ಮಾಡುವುದು ಜತೆಗೆ ವೇಗವಾಗಿ ಟೈಪಿಂಗ್ ಮಾಡುವುದರ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಇದರ ಜತೆಗೆ ತನ್ನ ವಿಶಿಷ್ಟ ಕಲೆಯನ್ನು ಬಡ ಮಕ್ಕಳಿಗೆ ಹಾಗೂ ಅಂಗವಿಕಲ ಮಕ್ಕಳಿಗೆ ಮನೆಯಲ್ಲಿಯೇ ಪಾಠ ಮಾಡುತ್ತಿದ್ದಾರೆ.
'ಬಾಲ್ಯದಲ್ಲಿರುವಾಗ ನನಗೆ ಕ್ರೀಡೆಯ ಬಗ್ಗೆ ತುಂಬಾ ಆಸಕ್ತಿ ಇತ್ತು. ಆದರೆ ನಾನು ದೊಡ್ಡವನಾಗುತ್ತಿದ್ದಂತೆ ಆರೋಗ್ಯ ಸಮಸ್ಯೆಯಿಂದಾಗಿ ಕ್ರೀಡೆಯಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಆ ಬಳಿಕ, 2014ರ ಸಮಯದಲ್ಲಿ ನನ್ನ ಮೂಗಿನ ಸಹಾಯದಿಂದ 46.30 ಸೆಕೆಂಡುಗಳಲ್ಲಿ 103 ಅಕ್ಷರಗಳನ್ನು ಟೈಪ್ ಮಾಡುವ ಮೂಲಕ ಮೊದಲ ದಾಖಲೆಯನ್ನು ಸೃಷ್ಟಿಸಿದೆ. ಇದುವರೆಗೆ, ಟೈಪಿಂಗ್ ಮಾಡಲು ತೆಗೆದುಕೊಂಡ ಕಡಿಮೆ ಸಮಯ ಇದಾಗಿತ್ತು. ಈ ಸಾಧನೆಯ ಸಾಕ್ಷಿಯಾಗಿ ಗಿನ್ನೆಸ್ ವಿಶ್ವದಾಖಲೆ ಪ್ರಮಾಣ ಪತ್ರವನ್ನು ಸ್ವೀಕರಿಸಿದೆ. ಆ ಬಳಿಕ ಇನ್ನೂ ಹೆಚ್ಚಿನ ಅಭ್ಯಾಸವನ್ನು ಮಾಡಲು ಪ್ರಾರಂಭಿಸಿದ್ದು 2016ರಲ್ಲಿ ಮತ್ತೆರಡು ದಾಖಲೆಗಳನ್ನು ಮಾಡಿದೆ. 2016ರಲ್ಲಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು 6.09 ಸೆಕೆಂಡುಗಳಲ್ಲಿ ಎಲ್ಲಾ ವರ್ಣಾಕ್ಷರಗಳನ್ನು ಅತಿ ವೇಗದಲ್ಲಿ ಟೈಪ್ ಮಾಡಿ ದಾಖಲೆ ಬರೆದೆ ಎಂದು ಚೌಧರಿ ಖುಷಿಯನ್ನು ಹಂಚಿಕೊಂಡಿದ್ದಾರೆ.
ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚೌಧರಿ, 2017ರಲ್ಲಿ ಬಾಯಿಯಲ್ಲಿ ಕೋಲು ಹಿಡಿದು ಎಲ್ಲಾ ಅಕ್ಷರಗಳನ್ನು 18.65 ಸೆಕೆಂಡುಗಳಲ್ಲಿ ಟೈಪ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಇದೇ ಸಾಧನೆಯನ್ನು 17.69 ಸೆಕೆಂಡುಗಳಲ್ಲಿ ಮತ್ತು ನಂತರ 2019 ರಲ್ಲಿ 17.01 ಸೆಕೆಂಡುಗಳಲ್ಲಿ ಸಾಧಿಸುವ ಮೂಲಕ ಅವರು 2018 ರಲ್ಲಿ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 2019 ರಲ್ಲಿ, ಚೌಧರಿ ಒಂದು ಬೆರಳಿನಿಂದ ವೇಗವಾಗಿ ಟೈಪ್ ಮಾಡಿ ಅಂದರೆ ಎಲ್ಲಾ ವರ್ಣಮಾಲೆಗಳನ್ನು ಕೇವಲ 29.53 ಸೆಕೆಂಡುಗಳಲ್ಲಿ ಟೈಪ್ ಮಾಡಿ ಗಿನ್ನೆಸ್ ಪುಸ್ತಕದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದರು.
ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಂತೆ ಗಿನ್ನಿಸ್ ಪುಸ್ತಕದಲ್ಲಿ 19 ದಾಖಲೆಗಳನ್ನು ಸೃಷ್ಟಿಸುವ ಆಸೆ ಹೊಂದಿದ್ದೇನೆ. ಇದಕ್ಕಾಗಿ ನಾನು ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇನೆ ಎಂದಿರುವ ಚೌಧರಿ, ಟೆನ್ನಿಸ್ ಚೆಂಡಿನಲ್ಲೂ ದಾಖಲೆ ಮೆರೆದಿದ್ದಾರೆ. ಒಂದು ನಿಮಿಷದೊಳಗೆ ಟೆನಿಸ್ ಚೆಂಡನ್ನು 205 ಬಾರಿ ಪಿಚ್ ಮಾಡಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದಾರೆ. ಗಿನ್ನೆಸ್ ಪುಸ್ತಕದಲ್ಲಿ ಇದು ಹೊಸ ದಾಖಲೆ ಎಂದು ಚೌದರಿ ಹೇಳಿದ್ದಾರೆ.
Vinod Kumar Chaudhary spends his days punching numbers at Jawaharlal Nehru University (JNU) but not many know that this unassuming, albeit talented, man has nine Guinness World Records to his credit.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am