ಬ್ರೇಕಿಂಗ್ ನ್ಯೂಸ್
05-06-21 04:45 pm Headline Karnataka News Network ದೇಶ - ವಿದೇಶ
ವಿಶ್ವದಲ್ಲಿ ಈವರೆಗೆ ಸುಮಾರು 200 ಕೋಟಿ ಕೋವಿಡ್ ಲಸಿಕೆಯ ಡೋಸ್‌ಗಳು ವಿತರಣೆಯಾಗಿದ್ದು, ಅವುಗಳಲ್ಲಿ ಅಮೆರಿಕ, ಭಾರತ ಮತ್ತು ಚೀನಾ ಸಿಂಹಪಾಲು ಪಡೆದಿವೆ. ಈ ಮೂರು ರಾಷ್ಟ್ರಗಳು ಒಟ್ಟಾರೆ ಲಸಿಕೆಯ ಶೇ 60ರಷ್ಟು ಪಾಲನ್ನು ಪಡೆದಿವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಹಿರಿಯ ಸಲಹೆಗಾರರೊಬ್ಬರು ತಿಳಿಸಿದರು.
ಶುಕ್ರವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಬ್ಲ್ಯೂಎಚ್‌ಒ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರ ಹಿರಿಯ ಸಲಹೆಗಾರ ಬ್ರೂಸ್ ಐಲ್ವರ್ಡ್ ಅವರು, ‘ಕೋವಿಡ್ ಲಸಿಕೆಗಳು ಜಗತ್ತಿನ 212 ರಾಷ್ಟ್ರಗಳಿಗೆ ವಿತರಣೆಯಾಗುತ್ತಿದೆ’ ಎಂದರು.

‘ಜಾಗತಿಕವಾಗಿ ವಿತರಣೆ ಮಾಡಲಾಗಿರುವ ಕೋವಿಡ್ ಲಸಿಕೆ ಡೋಸ್‌ಗಳ ಪೈಕಿ 10 ರಾಷ್ಟ್ರಗಳು ಶೇ 75 ರಷ್ಟು ಭಾಗವನ್ನು ಪಡೆದಿವೆ. ಅದರಲ್ಲೂ ಅಮೆರಿಕ, ಭಾರತ ಮತ್ತು ಚೀನಾವು ಶೇಕಡ 60ರಷ್ಟು ಪಾಲನ್ನು ಹಂಚಿಕೊಂಡಿವೆ. ಕೋವ್ಯಾಕ್ಸ್ ಲಸಿಕೆಯು ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, 127 ರಾಷ್ಟ್ರಗಳಿಗೆ ವಿತರಣೆ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.
‘ವಿಶ್ವದ ಜನಸಂಖ್ಯೆಯ ಶೇ 10 ರಷ್ಟಿರುವ ಕಡಿಮೆ ಆದಾಯದ ದೇಶಗಳಲ್ಲಿ ಕೇವಲ ಶೇ 0.5 ರಷ್ಟು ಕೋವಿಡ್ ಲಸಿಕೆಯು ಲಭ್ಯವಾಗಿದೆ. ಜಾಗತಿಕವಾಗಿ ಕೋವ್ಯಾಕ್ಸ್ ಮೂಲಕ 8 ಕೋಟಿ ಡೋಸ್‌ಗಳನ್ನು ವಿತರಣೆ ಮಾಡಲಾಗಿದೆ. ಆದರೆ ಭಾರತದಲ್ಲಿ ಏಕಾಏಕಿ ಕೋವಿಡ್ ಏರಿಕೆಯಾದ್ದರಿಂದ ಲಸಿಕೆ ವಿತರಣೆಯಲ್ಲಿ ತೊಂದರೆ ಉಂಟಾಗಿದೆ. ನಾವು ಲಸಿಕೆ ವಿತರಣೆಯಲ್ಲಿ 20 ಕೋಟಿ ಡೋಸ್‌ಗಳಷ್ಟು ಹಿಂದೆ ಉಳಿದಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.
ಕೋವ್ಯಾಕ್ಸ್ ಮೂಲಕ 15 ಕೋಟಿ ಡೋಸ್‌ಗಳನ್ನು ಹಂಚಿಕೆ ಮಾಡಬೇಕೆಂಬ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ ಇದಕ್ಕೆ ಎರಡು ಸಮಸ್ಯೆಗಳು ಎದುರಾಗಿವೆ. ಮೊದಲನೇಯದಾಗಿ, ಜೂನ್–ಜುಲೈ ಅವಧಿಯಲ್ಲಿ ಬಹಳ ಕಡಿಮೆ ಲಸಿಕೆ ಪೂರೈಕೆಯಾಗಲಿದೆ. ಈ ವರ್ಷ ಜಾಗತಿಕವಾಗಿ ವಿತರಣೆ ಮಾಡಲಾದ ಲಸಿಕೆಯ ಶೇ 30 ರಿಂದ 40 ಭಾಗದಷ್ಟು ಲಸಿಕೆ ಲಭ್ಯವಾದ್ದಲ್ಲಿ, ಸೆಪ್ಟೆಂಬರ್ ಅಂತ್ಯದಲ್ಲಿ 25 ಕೋಟಿ ಜನರಿಗೆ ಲಸಿಕೆಯನ್ನು ಒದಗಿಸಬಹುದು’ ಎಂದು ಅವರು ತಿಳಿಸಿದರು.

‘ಎರಡನೇಯದಾಗಿ, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನಾಲ್ಕನೇ ತ್ರೈಮಾಸಿಕದಲ್ಲಾದರೂ ಲಸಿಕೆ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಬೇಕು. ಸಂಸ್ಥೆ ಆದಷ್ಟು ಬೇಗ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ಪೂರೈಸಬೇಕು. ಇಲ್ಲವಾದ್ದಲ್ಲಿ ಹಲವು ರಾಷ್ಟ್ರಗಳು ತೊಂದರೆ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.
ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆಯಾಗಿದೆ. ಭಾರತದಲ್ಲಿ ಎದುರಾಗಿರುವ ಕೋವಿಡ್ ಎರಡನೇ ಅಲೆಯಿಂದಾಗಿ ಇತರೆ ರಾಷ್ಟ್ರಗಳ ಲಸಿಕೆ ಹಂಚಿಕೆಯಲ್ಲಿ ಅಡಚಣೆ ಉಂಟಾಗಿದೆ.
Two billion COVID-19 vaccine doses distributed globally till now, about 60 percent have gone to just three countries - the US, India, and China, a senior adviser at the World Health Organisation said.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am