ಬ್ರೇಕಿಂಗ್ ನ್ಯೂಸ್
13-05-26 06:42 pm HK News Staffer ದೇಶ - ವಿದೇಶ
ಚೆನ್ನೈ, ಮೇ 13: ಭಾರೀ ಟೀಕೆ ಮತ್ತು ರಾಜಕೀಯ ವಿರೋಧದ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ (OSD) ಆಗಿ ನೇಮಕ ಮಾಡಿದ್ದ ಆದೇಶವನ್ನು ಹಿಂಪಡೆದುಕೊಂಡಿದ್ದಾರೆ. ನಿನ್ನೆ ಪ್ರಕಟವಾಗಿದ್ದ ಈ ನೇಮಕಾತಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಜ್ಯೋತಿಷಿಯನ್ನು ಸರ್ಕಾರದ ಅಧಿಕೃತ ಹುದ್ದೆಗೆ ನೇಮಕ ಮಾಡಿರುವ ನಿರ್ಧಾರ ಮಿತ್ರಪಕ್ಷಗಳಲ್ಲೇ ಅಸಮಾಧಾನ ಹುಟ್ಟಿಸಿತ್ತು. ವಿಶ್ವಾಸಮತ ಯಾಚನೆಗೂ ಮುನ್ನವೇ ವಿಸಿಕೆ ಪಕ್ಷದ ಶಾಸಕ ವನ್ನಿ ಅರಸು, “ಸರ್ಕಾರ ಜ್ಯೋತಿಷ್ಯಕ್ಕಿಂತ ವೈಜ್ಞಾನಿಕ ಚಿಂತನೆಗೆ ಆದ್ಯತೆ ನೀಡಬೇಕು” ಎಂದು ಬಹಿರಂಗವಾಗಿ ಹೇಳಿದ್ದರು.
ಸರ್ಕಾರಿ ವ್ಯವಸ್ಥೆಯಲ್ಲಿ ಜ್ಯೋತಿಷಿಗೆ ಅಧಿಕೃತ ಸಲಹಾ ಹುದ್ದೆ ನೀಡಿರುವುದನ್ನು ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ಟಿವಿಕೆ ಬೆಂಬಲಿತ ಹಲವು ನಾಯಕರು ಅಸಮಾಧಾನದಿಂದಲೇ ನೋಡಿದ್ದರು. ಇದರಿಂದ ಒತ್ತಡಕ್ಕೆ ಸಿಲುಕಿದ ಸಿಎಂ ವಿಜಯ್, ವಿಶ್ವಾಸಮತ ಯಾಚನೆ ಬಳಿಕ ನೇಮಕಾತಿಯನ್ನು ಮರುಪರಿಶೀಲಿಸುವುದಾಗಿ ಹೇಳಿದ್ದು, ಇದೀಗ ಆದೇಶವನ್ನೇ ರದ್ದು ಮಾಡಿದ್ದಾರೆ.
ಡಿಎಂಡಿಕೆ, ಬಿಜೆಪಿ ಕಿಡಿ:
ಈ ವಿಚಾರದಲ್ಲಿ ಪ್ರತಿಪಕ್ಷಗಳು ಕೂಡ ವಿಜಯ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದವು. ಡಿಎಂಡಿಕೆ ಶಾಸಕಿ ಪ್ರೇಮಲತಾ ವಿಜಯಕಾಂತ್ ಮಾತನಾಡಿ, “ಜ್ಯೋತಿಷಿಯನ್ನು ಸರ್ಕಾರದ ಅಧಿಕಾರಿಯಾಗಿ ನೇಮಕ ಮಾಡುವುದು ಯುವಕರಿಗೆ ತಪ್ಪು ಸಂದೇಶ ನೀಡುತ್ತದೆ. ವೈಯಕ್ತಿಕ ಗುರುವಾಗಿದ್ದರೆ ಖಾಸಗಿಯಾಗಿ ಇಟ್ಟುಕೊಳ್ಳಿ, ಆದರೆ ಸರ್ಕಾರಿ ಹುದ್ದೆ ನೀಡುವುದು ಸರಿಯಲ್ಲ” ಎಂದು ಕಿಡಿಕಾರಿದ್ದರು.
ಬಿಜೆಪಿ ಶಾಸಕ ಬೋಜರಾಜನ್ ಎಂ ಕೂಡ ಇದೇ ವಿಚಾರವಾಗಿ ಪ್ರತಿಕ್ರಿಯಿಸಿ, “ಜನರಿಗೆ ಮಾದರಿಯಾಗಬೇಕಾದ ಸರ್ಕಾರ ಇಂತಹ ನೇಮಕಗಳಿಂದ ತಪ್ಪು ಉದಾಹರಣೆ ಸೃಷ್ಟಿಸುತ್ತಿದೆ” ಎಂದು ಟೀಕಿಸಿದ್ದರು.
ಡಿಎಂಕೆಯ ವ್ಯಂಗ್ಯ :
ಡಿಎಂಕೆ ನಾಯಕರು ಈ ವಿವಾದವನ್ನು ತೀವ್ರವಾಗಿ ಟೀಕಿಸಿದ್ದು, ಪಕ್ಷದ ವಕ್ತಾರ ಟಿಕೆಎಸ್ ಇಳಂಗೋವನ್ ವ್ಯಂಗ್ಯವಾಗಿ, “ಇನ್ನು ಮುಂದೆ ಸಚಿವ ಸಂಪುಟ ಸಭೆಗಳ ಸಮಯವನ್ನೂ ಜ್ಯೋತಿಷಿಗಳೇ ನಿಗದಿಪಡಿಸುವ ಪರಿಸ್ಥಿತಿ ಬರುತ್ತದೆ” ಎಂದು ಹೇಳಿದ್ದಾರೆ. ಸರ್ಕಾರಕ್ಕೆ ಆಡಳಿತ ಹಾಗೂ ಕಾನೂನು ಸಲಹೆ ನೀಡುವ ಅಧಿಕಾರಿಗಳು ಬೇಕೇ ಹೊರತು ಭವಿಷ್ಯ ಹೇಳುವ ಜ್ಯೋತಿಷಿಗಳು ಅಲ್ಲ ಎಂದು ಕಿಡಿಕಾರಿದ್ದಾರೆ.
ವಿಜಯ್ ಜೊತೆಗಿನ ಆಪ್ತ ಸಂಪರ್ಕ:
ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರು ತಮಿಳುನಾಡು ಚುನಾವಣೆಗೆ ಮುನ್ನವೇ ವಿಜಯ್ ಮತ್ತು ಟಿವಿಕೆ ಪಕ್ಷದ ಭರ್ಜರಿ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದರು. ಅವರ ಸಲಹೆಯ ಮೇರೆಗೆ ವಿಜಯ್ ಪ್ರಮಾಣವಚನ ಸ್ವೀಕಾರದ ಸಮಯವನ್ನೂ ಮಧ್ಯಾಹ್ನದಿಂದ ಬೆಳಿಗ್ಗೆಗೆ ಬದಲಾಯಿಸಿದ್ದರು ಎನ್ನಲಾಗಿದೆ.
ರಾಜಕೀಯ ವಲಯದಲ್ಲಿ ಹಲವು ದಶಕಗಳಿಂದ ಪ್ರಭಾವ ಹೊಂದಿರುವ ವೆಟ್ರಿವೇಲ್ ಅವರ ಬಳಿ ಜಯಲಲಿತಾ ಸೇರಿದಂತೆ ಅನೇಕ ರಾಜಕೀಯ ನಾಯಕರು ಸಲಹೆ ಪಡೆದಿದ್ದರು ಎಂಬ ಮಾತುಗಳೂ ಕೇಳಿಬಂದಿವೆ. ಆದರೆ ಈಗ ಅವರ ನೇಮಕವೇ ವಿವಾದಕ್ಕೆ ಕಾರಣವಾಗಿ, ವಿಜಯ್ ಸರ್ಕಾರ ಮೊದಲ ದೊಡ್ಡ ಹಿನ್ನಡೆಯನ್ನು ಅನುಭವಿಸಿದಂತಾಗಿದೆ.
ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ತೆಗೆದುಕೊಂಡ ಈ ಯೂ-ಟರ್ನ್, ಮಿತ್ರಪಕ್ಷಗಳ ಒತ್ತಡವನ್ನು ವಿಜಯ್ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂಬ ಸಂದೇಶ ನೀಡಿದೆ. ಜೊತೆಗೆ ಆಡಳಿತದಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಸಾರ್ವಜನಿಕ ಅಭಿಪ್ರಾಯ ಎಷ್ಟು ಮಹತ್ವದ್ದಾಗಿದೆ ಎಂಬುದನ್ನೂ ಈ ಬೆಳವಣಿಗೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am