ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇರಾನ್ ಜೊತೆಗೆ ವಹಿವಾಟು ನಡೆಸುವ ದೇಶಗಳಿಗೆ 25 ಶೇ. ಸುಂಕ ಬರೆ, ಭಾರತಕ್ಕೆ ಮತ್ತಷ್ಟು ಹೊಡೆತ, ರಿಯಾಲ್ ಮೌಲ್ಯ ಶೂನ್ಯಕ್ಕೆ ! 

13-01-26 04:21 pm       HK News Desk   ದೇಶ - ವಿದೇಶ

ಇರಾನ್ ಜೊತೆ ವ್ಯಾಪಾರ, ವಹಿವಾಟು ನಡೆಸುವ ದೇಶಗಳ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಕ್ಯಾತೆ ತೆಗೆದಿದ್ದಾರೆ. ಆಮೂಲಕ, ರಷ್ಯಾ ಬಳಿಕ ಇರಾನ್ ಮುಂದಿಟ್ಟು ವಿಶ್ವ ರಾಷ್ಟ್ರಗಳನ್ನು ಬೆದರಿಸಲು ಟ್ರಂಪ್ ಮುಂದಾಗಿದ್ದಾರೆ. 

ನವದೆಹಲಿ, ಜ.13 : ಇರಾನ್ ಜೊತೆ ವ್ಯಾಪಾರ, ವಹಿವಾಟು ನಡೆಸುವ ದೇಶಗಳ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಕ್ಯಾತೆ ತೆಗೆದಿದ್ದಾರೆ. ಆಮೂಲಕ, ರಷ್ಯಾ ಬಳಿಕ ಇರಾನ್ ಮುಂದಿಟ್ಟು ವಿಶ್ವ ರಾಷ್ಟ್ರಗಳನ್ನು ಬೆದರಿಸಲು ಟ್ರಂಪ್ ಮುಂದಾಗಿದ್ದಾರೆ. 

ಸುಂಕ ವಿಧಿಸುವ ಕುರಿತು ಶ್ವೇತಭವನವು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲವಾದರೂ, ಇರಾನ್‌ನಲ್ಲಿ ದಂಗೆ ಭುಗಿಲೆದ್ದಿರುವಾಗಲೇ ಟ್ರಂಪ್ ಹೊಸ ತಗಾದೆ ಎತ್ತಿದ್ದಾರೆ. ಇದೇ ವೇಳೆ, ಇರಾನ್‌ ಕರೆನ್ಸಿ ರಿಯಾಲ್‌ ಮೌಲ್ಯವು ಭಾರೀ ಕುಸಿತವಾಗಿದ್ದು ಭಾರತೀಯ ಕರೆನ್ಸಿ ಎದುರು 1 ರಿಯಾಲ್‌ ಮೌಲ್ಯ ಕೇವಲ ₹0.000079 ರಷ್ಟು ಇಳಿಕೆಯಾಗಿದೆ.‌ ಅಮೆರಿಕ ಈಗಾಗಲೇ ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದು ಇದರೊಂದಿಗೆ ಇರಾನ್‌ ಜೊತೆಗೆ ತೈಲ ವ್ಯಾಪಾರ ಮಾಡುವ ಪ್ರಮುಖ ದೇಶಗಳಿಗೂ ಹೆಚ್ಚುವರಿ ಸುಂಕ ವಿಧಿಸಲಾಗಿದೆ. ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಭಾರತವು ಇರಾನ್ ಪಾಲಿಗೆ ದೊಡ್ಡ ಮಟ್ಟದ ಗ್ರಾಹಕ ರಾಷ್ಟ್ರಗಳಾಗಿವೆ. ಇದೀಗ ಈ ದೇಶಗಳಿಗೆ ಮತ್ತೆ 25 ಶೇಕಡಾ ಹೆಚ್ಚುವರಿ ಸುಂಕವನ್ನು ಅಮೆರಿಕ ವಿಧಿಸಿದೆ. 

ಭಾರತದ ಮೇಲೆ ಈಗಾಗಲೇ ಅಮೆರಿಕವು ಶೇ.50 ರಷ್ಟು ಸುಂಕ ವಿಧಿಸಿದೆ. ಇದರಲ್ಲಿ ಶೇ.25 ರಷ್ಟು ಪರಸ್ಪರ ವಹಿವಾಟು ಮೇಲಿನ ಸುಂಕ ಮತ್ತು ರಷ್ಯಾದಿಂದ ತೈಲ ಆಮದುಗಳ ಮೇಲೆ ಶೇ.25 ರಷ್ಟು ಸುಂಕ ಹೇರಲಾಗಿದೆ. ಈಗ ಇರಾನ್ ಜೊತೆಗಿನ ವ್ಯಾಪಾರಕ್ಕಾಗಿ ಭಾರತದ ಮೇಲೆ ಮತ್ತೆ ಸುಂಕ ವಿಧಿಸಿದರೆ, ಒಟ್ಟು ಶೇ.75 ರಷ್ಟು ಹೊರೆಯಾಗಲಿದೆ. ಭಾರತದಿಂದ ರಫ್ತಾಗುವ ವಸ್ತುಗಳ ಮೇಲೆ ಈ ಹೊರೆ ಬೀಳಲಿದ್ದು ಭಾರತವು ಅಮೆರಿಕದಲ್ಲಿ ತನ್ನ ಸರಕುಗಳನ್ನು ಮಾರಾಟ ಮಾಡಲಾಗದ ಸ್ಥಿತಿಗೆ ತಲುಪಲಿದೆ. ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆಯುತ್ತಿರುವಾಗಲೇ ಡೊನಾಲ್ಡ್ ಟ್ರಂಪ್ ಸುಂಕ ಹೆಚ್ಚಳದ ಬಾಂಬ್ ಹಾಕಿದ್ದಾರೆ.‌

2022ರ ವರೆಗಿನ ವಿಶ್ವಬ್ಯಾಂಕ್ ದತ್ತಾಂಶ ಪ್ರಕಾರ, ಇರಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶಗಳಲ್ಲಿ ಚೀನಾ, ಯುಎಇ ಮತ್ತು ಭಾರತ ಇದೆ. ಇರಾನ್ ಪ್ರಮುಖವಾಗಿ ಈ ದೇಶಗಳಿಗೆ ತೈಲ, ಪೆಟ್ರೋಕೆಮಿಕಲ್‌ಗಳು ಮತ್ತು ಕೈಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಅಮೆರಿಕದ ನಿರ್ಬಂಧಗಳ ಹೊರತಾಗಿಯೂ, ಇರಾನ್ ಏಷ್ಯನ್ ಮತ್ತು ಗಲ್ಫ್ ದೇಶಗಳ ಮೂಲಕ ವ್ಯಾಪಾರವನ್ನು ಮುಂದುವರೆಸಿದೆ. 2022 ರಲ್ಲಿ ಇರಾನ್‌ ಒಟ್ಟು ವ್ಯಾಪಾರ ಸುಮಾರು $140 ಬಿಲಿಯನ್ ಆಗಿತ್ತು. ಇದರಲ್ಲಿ ರಫ್ತು $80.9 ಬಿಲಿಯನ್ ಮತ್ತು ಆಮದು ಸುಮಾರು $58.7 ಬಿಲಿಯನ್ ಮೌಲ್ಯದಷ್ಟಿದೆ. ಇರಾನ್ ಪ್ರಮುಖವಾಗಿ ವಿವಿಧ ಮಾದರಿಯ ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಕೈಗಾರಿಕಾ ಕಚ್ಚಾ ವಸ್ತುಗಳು ಮತ್ತು ಔಷಧಿಗಳನ್ನು ಆಮದು ಮಾಡಿಕೊಳ್ಳುತ್ತದೆ. 

ಇದೇ ವೇಳೆ, ಇರಾನ್ ಸರ್ಕಾರ ಮತ್ತು ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ವಿರುದ್ಧದ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದ್ದು ಹಿಂಸೆಗೆ ತಿರುಗಿದೆ. ಪ್ರತಿಭಟನೆಗಳನ್ನು ನಿಗ್ರಹಿಸಲು ಭದ್ರತಾ ಪಡೆಗಳ ಕ್ರಮದಿಂದಾಗಿ ಕನಿಷ್ಠ 648 ಜನರು ಸಾವನ್ನಪ್ಪಿದ್ದಾರೆ. ಅಮೆರಿಕವು ಕೂಡಲೇ ತನ್ನ ಪ್ರಜೆಗಳನ್ನು ಇರಾನ್ ತೊರೆಯುವಂತೆ ಹೇಳಿದ್ದು ಯಾವುದೇ ಕ್ಷಣದಲ್ಲಿ ಏನೂ ಆಗಬಹುದೆಂಬ ಎಚ್ಚರಿಕೆಯನ್ನು ನೀಡಿದೆ.

US President Donald Trump has warned of imposing an additional 25% tariff on countries that continue trade with Iran, escalating pressure on global economies after earlier action against Russia. Though no official White House statement has been issued, the move comes amid unrest in Iran and a sharp collapse of its currency, with the Iranian rial plunging to near-zero value against the Indian rupee.