ಬ್ರೇಕಿಂಗ್ ನ್ಯೂಸ್
08-09-25 10:59 pm HK News Desk ದೇಶ - ವಿದೇಶ
ನವದೆಹಲಿ, ಸೆ.8 : ನೇಪಾಳ ಸರ್ಕಾರವು ಜಾಲತಾಣಗಳಾದ ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಂತಹ 26 ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸಿದ ಬೆನ್ನಲ್ಲೇ ದೇಶಾದ್ಯಂತ ಯುವಜನರ ಆಕ್ರೋಶ ಭುಗಿಲೆದ್ದಿದೆ. ಜನರು ಬೀದಿಗಿಳಿದು ಹಿಂಸೆಗೆ ಇಳಿದಿದ್ದು ಪೊಲೀಸರ ಜೊತೆಗಿನ ಸಂಘರ್ಷದಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಯುವಕರು ರೀಲ್ಸ್ ಮಾಡುವುದಕ್ಕೆ ನೇಪಾಳ ಸರ್ಕಾರ ಕಡಿವಾಣ ಹಾಕಿದ್ದು ಇದನ್ನು ವಿರೋಧಿಸಿ ಯುವಜನತೆ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದೆ. ಜನರು ಸರ್ಕಾರದ ಬಗ್ಗೆ ಪ್ರಶ್ನೆ ಮಾಡುತ್ತಲೇ ಇತ್ತ ಉದ್ರಿಕ್ತರ ನಿಯಂತ್ರಣಕ್ಕೆ ಸೇನೆಯನ್ನು ನಿಯೋಜಿದ್ದು ಕರ್ಫ್ಯೂ ವಿಧಿಸಲಾಗಿದೆ.






ರಾಜಧಾನಿ ಕಾಠ್ಮಂಡುವಿನಲ್ಲಿ ಸಂಸತ್ತಿನ ಮೇಲೆ ಉದ್ರಿಕ್ತ ಯುವಕರು ದಾಳಿ ನಡೆಸಿದ್ದು ಅವರನ್ನು ಚದುರಿಸಲು ಲಾಟಿ ಚಾರ್ಜ್, ಅಶ್ರುವಾಯು ಪ್ರಯೋಗಿಸಿದ್ದಾರೆ. ಅಲ್ಲದೆ, ನಗರದಾದ್ಯಂತ ಕರ್ಫ್ಯೂ ಹೇರಲಾಗಿದ್ದು ಜನರನ್ನು ಹೊರಕ್ಕೆ ಬರದಂತೆ ನಿಯಂತ್ರಣ ವಿಧಿಸಲಾಗಿದೆ.
ಸೋಶಿಯಲ್ ಮೀಡಿಯಾ ಮೂಲಕ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ, ಅದರಿಂದ ಕ್ರೈಮ್ ಹೆಚ್ಚುತ್ತಿದೆ ಎಂಬ ನೆಪದಲ್ಲಿ ನೇಪಾಳ ಸರ್ಕಾರ ಸಾಮಾಜಿಕ ವೇದಿಕೆಗಳನ್ನು ನಿಷೇಧಿಸಿದೆ. ಇದರ ಬೆನ್ನಲ್ಲೇ ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿದು ಭ್ರಷ್ಟಾಚಾರ ನಿಲ್ಲಿಸಿ, ಸೋಶಿಯಲ್ ಮೀಡಿಯಾವನ್ನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಜನಾಕ್ರೋಶ ವ್ಯಕ್ತವಾಗಿದ್ದು ಭಾರತದ ಗಡಿಭಾಗದಲ್ಲಿ ಕಟ್ಟೆಚ್ಚರ ವಿಧಿಸಲಾಗಿದೆ. ಹಿಂಸೆ ಹೆಚ್ಚಿದ ಹಿನ್ನೆಲೆಯಲ್ಲಿ ನೇಪಾಳದ ಕೆಪಿ ಓಲಿ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚಿದೆ. ಇದರಿಂದಾಗಿ ಗೃಹ ಸಚಿವ ರಮೇಶ್ ಲೇಖಕ್ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ.
Widespread chaos has gripped Nepal after the government imposed a ban on 26 major social media platforms, including Facebook, YouTube, Instagram, and X (formerly Twitter). The move triggered massive outrage, particularly among the youth, leading to violent protests, clashes with security forces, and the death of at least 19 people. Over 500 others have been reported injured.
10-07-26 10:12 pm
HK News Staffer
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
10-07-26 10:46 pm
HK News Desk
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
10-07-26 05:25 pm
HK News Staffer
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
10-07-26 10:14 pm
HK News Staffer
ಷೇರು ಮಾರ್ಕೆಟ್ ಹೆಸ್ರಲ್ಲಿ 10 ಲಕ್ಷ ರೂ. ವಂಚನೆ ; ಮ...
10-07-26 08:22 pm
ರಿವರ್ಸ್ ಮಾಡುವಾಗ ನಿಯಂತ್ರಣ ತಪ್ಪಿ ತೋಡಿಗೆ ಉರುಳಿ ಬ...
10-07-26 05:29 pm
ರೆಡ್ ಅಲರ್ಟ್; ರಜೆ ಆದೇಶ ಪಾಲಿಸದ ಹತ್ತಕ್ಕೂ ಹೆಚ್ಚು...
10-07-26 03:25 pm
ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಎಂಟು ಮಂದಿ ಬಾ...
10-07-26 02:22 pm