ಬ್ರೇಕಿಂಗ್ ನ್ಯೂಸ್
13-12-24 02:35 pm HK News Desk ದೇಶ - ವಿದೇಶ
ಚೆನ್ನೈ, ಡಿ.13: ಚೆನ್ನೈ ಮೂಲದ 18ರ ಹರೆಯದ ತರುಣ ಗುಕೇಶ್ ದೊಮ್ಮರಾಜು ಅವರು ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಜಗತ್ತಿನ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಗುಕೇಶ್ ಅವರು ಪ್ರತಿಸ್ಪರ್ಧಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ವಿಶ್ವನಾಥನ್ ಆನಂದ್ ಅವರ ನಂತರ ವಿಶ್ವ ಚೆಸ್ ಚಾಂಪಿಯನ್ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಭಾರತದ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ವಿಶ್ವ ಚೆಸ್ ಚಾಂಪಿಯನ್ ಶಿಪ್ ಅನ್ನು 5 ಬಾರಿ ಗೆದ್ದುಕೊಂಡಿದ್ದರು.





ರಷ್ಯಾದ ಗ್ಯಾರಿ ಕಾಸ್ಪರೋವ್ ಅವರು 1985 ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದು ಈ ಹಿಂದಿನ ಅತಿ ಕಿರಿಯ ಎಂಬ ದಾಖಲೆಯಾಗಿತ್ತು. ಇದೀಗ ಗುಕೇಶ್ 18ನೇ ವಯಸ್ಸಿನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು 7.5-6.5 ರಿಂದ ಸೋಲಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಗುಕೇಶ್ 17ನೇ ವಯಸ್ಸಿನಲ್ಲಿ FIDE ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್‌ಶಿಪ್ ಗೆದ್ದು ದಾಖಲೆ ಬರೆದಿದ್ದರು.
ವಿಶ್ವನಾಥನ್ ಆನಂದ್ ಅವರು 2000ದಲ್ಲಿ ತಮ್ಮ 31ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಶ್ವ ಚೆಸ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಆ ಬಳಿಕ 2007, 2008, 2010 ಮತ್ತು 2012ರಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಭಾರತಕ್ಕೆ ಇದೀಗ ಸರಿಯಾಗಿ 12 ವರ್ಷಗಳ ನಂತರ ಚೆಸ್ ನಲ್ಲಿ ವಿಶ್ವ ಪ್ರಶಸ್ತಿ ಲಭಿಸಿದೆ.
ಗುಕೇಶ್ ಗೆ ಸಿಕ್ಕ ಪ್ರಶಸ್ತಿ ಮೊತ್ತ ಎಷ್ಟು ?
2024ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಒಟ್ಟು $2.5 ಮಿಲಿಯನ್ ಪ್ರಶಸ್ತಿ ಮೊತ್ತ ಹೊಂದಿದೆ. FIDE ನಿಯಮದ ಪ್ರಕಾರ, ಪ್ರತಿ ಗೆಲುವಿಗೆ ಒಬ್ಬ ಆಟಗಾರನಿಗೆ $200,000 (ಸುಮಾರು ₹1.68 ಕೋಟಿ) ಸಿಗುತ್ತೆ, ಉಳಿದ ಪ್ರಶಸ್ತಿ ಹಣವನ್ನ ಸಮಾನವಾಗಿ ಹಂಚಿಕೊಳ್ಳಲಾಗುತ್ತದೆ. ಗುಕೇಶ್ ಮೂರು ಪಂದ್ಯಗಳನ್ನ (3, 11 ಮತ್ತು 14) ಗೆದ್ದಿದ್ದು, 3 ಗೆಲುವುಗಳಿಂದ $600,000 (ಸುಮಾರು ₹5.04 ಕೋಟಿ) ಗಳಿಸಿದ್ದರು. ಆದ್ರೆ 1 ಮತ್ತು 12ನೇ ಪಂದ್ಯಗಳನ್ನ ಗೆದ್ದ ಡಿಂಗ್ $400,000 (₹3.36 ಕೋಟಿ) ಗಳಿಸಿದ್ರು. ಉಳಿದ $1.5 ಮಿಲಿಯನ್ ಅನ್ನು ಇಬ್ಬರು ಆಟಗಾರರಿಗೂ ಸಮಾನವಾಗಿ ಹಂಚಲಾಗುತ್ತೆ. ಒಟ್ಟಾರೆಯಾಗಿ, ಗುಕೇಶ್ 1.35 ಮಿಲಿಯನ್ ಡಾಲರ್ (ಸುಮಾರು ₹11.34 ಕೋಟಿ) ಗೆದ್ದರೆ, ಡಿಂಗ್ $1.15 ಮಿಲಿಯನ್ (ಸುಮಾರು ₹9.66 ಕೋಟಿ) ಗೆದ್ದಿದ್ದಾರೆ.
ಕ್ರಿಕೆಟ್‌ಗೆ ಹೋಲಿಸಿದ್ರೆ ಚೆಸ್‌ನಲ್ಲಿ ಸಿಗೋ ಪ್ರಶಸ್ತಿ ಹಣ ತುಂಬಾ ಕಡಿಮೆ. ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ಗೆದ್ದ ಭಾರತ ತಂಡಕ್ಕೆ ₹125 ಕೋಟಿ ಪ್ರಶಸ್ತಿ ಹಣ ಸಿಕ್ಕಿತ್ತು
Eighteen-year-old Indian grandmaster Gukesh Dommaraju defeated China’s Ding Liren to become the youngest world chess champion in the game’s history. Gukesh surpassed Russian great Garry Kasparov, who won the crown in 1985 at 22.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm