ಬ್ರೇಕಿಂಗ್ ನ್ಯೂಸ್
10-12-24 10:57 pm HK News Desk ದೇಶ - ವಿದೇಶ
ಮುಂಬೈ, ಡಿ.10: ಬೃಹನ್ಮುಂಬಯಿ ಇಲೆಕ್ಟ್ರಿಸಿಟಿ ಸಪ್ಲೈ ಅಂಡ್ ಟ್ರಾನ್ಸ್ ಪೋರ್ಟ್ (BEST) ಅಧೀನದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ 22ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿಯಾಗಿದ್ದಲ್ಲದೆ, ಬೀದಿಯುದ್ದಕ್ಕೂ ಜನ, ವಾಹನಗಳಿಗೆ ಡಿಕ್ಕಿ ಹೊಡೆದು ಏಳು ಜನರು ಜೀವ ಕಳಕೊಂಡಿದ್ದಾರೆ. 12ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಮುಂಬೈ ನಗರದ ಕುರ್ಲಾದ ಭಜ್ಜಿ ಮಾರ್ಕೆಟ್ ನಲ್ಲಿ ಘಟನೆ ನಡೆದಿದೆ. 200 ಮೀಟರ್ ದೂರಕ್ಕೆ ಬಸ್ಸು ಎರ್ರಾಬಿರ್ರಿಯಾಗಿ ಚಲಿಸಿದ್ದು, ಅಲ್ಲಿದ್ದ ಜನರು, ವಾಹನಗಳ ಪ್ರಯಾಣಿಕರು ಬೊಬ್ಬೆ ಹಾಕಿದ್ದಾರೆ. ಆದರೆ ಚಾಲಕನಿಗೆ ಬಸ್ಸನ್ನು ನಿಲ್ಲಿಸಲಾಗದೆ ಮುಂದಕ್ಕೆ ಹೋಗಿದ್ದು, ಕೊನೆಗೆ ಗೋಡೆಗೆ ಬಡಿದು ನಿಂತುಬಿಟ್ಟಿದೆ.





#Mumbai : Out of control BEST bus mows down several pedestrians and vehicles in Kurla West, Mumbai, late Monday evening.
— Saba Khan (@ItsKhan_Saba) December 9, 2024
Four dead and several others injured.
Police said all the injured have been rushed to Bhabha Hospital. pic.twitter.com/oOlWtSxX1p

ದಾರಿಯುದ್ದಕ್ಕೂ ಬೈಕ್, ಪಾದಚಾರಿಗಳು ಇನ್ನಿತರ ವಾಹನಗಳಿಗೆ ಬಸ್ ಡಿಕ್ಕಿಯಾಗುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅವು ಈಗ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಲಕ ಸಂಜಯ್ ಮೋರೆ ಎಂಬಾತನಾಗಿದ್ದು, ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ಚಾಲಕ ಬಸ್ ನಿಯಂತ್ರಣ ತಪ್ಪುತ್ತಿದ್ದಂತೆ ಗಾಬರಿಯಾಗಿದ್ದು, ಬ್ರೇಕ್ ಎಂದು ಏಕ್ಸಿಲೇಟರ್ ಒತ್ತಿದ್ದಾನೆ. ಇದರಿಂದಾಗಿ ಬಸ್ ಅತಿ ವೇಗದಲ್ಲಿ ಮುನ್ನುಗ್ಗುತ್ತ ಮಾರುಕಟ್ಟೆ ಆವರಣದಲ್ಲಿ ಎಲ್ಲೆಂದರಲ್ಲಿ ಸಾಗಿದೆ.

Shocking CCTV footage of BEST BUS accident in kurla.49 injured reported out of which 6 dead. #mumbai #bestbusaccident #busaccident #maharashtra #Syrie #ViralVideo pic.twitter.com/oMIpspswwb
— Sanjeev 🇮🇳 (@sun4shiva) December 10, 2024



ಆಟೋ ರಿಕ್ಷಾ, ಬೈಕ್, ಪಾದಚಾರಿಗಳು, ತಳ್ಳುಗಾಡಿಯವರು ಬಸ್ಸಿನಡಿಗೆ ಬೀಳುವ ದೃಶ್ಯ ಸೆರೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ, 22ಕ್ಕೂ ಹೆಚ್ಚು ವಾಹನಗಳು
ಬಸ್ ಡಿಕ್ಕಿಯಾಗಿ ಜಖಂ ಆಗಿವೆ. ಕುರ್ಲಾದಿಂದ ಅಂಧೇರಿಗೆ ಬಸ್ ತೆರಳುತ್ತಿತ್ತು. ಈ ರಸ್ತೆಯೂ ಅತಿ ಬಿಝಿಯಾಗಿದ್ದು, ದಿನವೂ ಟ್ರಾಫಿಕ್ ಜಾಮ್ ಇರುವ ರಸ್ತೆಯಾಗಿದೆ. ಬಸ್ಸಿನ ಚಾಲಕ ಸಂಜಯ್ ಮೋರೆ, ಇಲೆಕ್ಟ್ರಿಕ್ ಆಟೋ ಬಸ್ಸನ್ನು ಮೊದಲ ಬಾರಿಗೆ ಚಲಾಯಿಸುತ್ತಿದ್ದು, ಚಾಲನೆ ಸಂದರ್ಭದಲ್ಲಿ ಎಡವಟ್ಟು ಆಗಿದೆ, ನಿಯಂತ್ರಣ ತಪ್ಪಿದೆ ಎಂದು ತಿಳಿಸಿದ್ದಾನೆ. ಕುರ್ಲಾದ ಅಂಬೇಡ್ಕರ್ ನಗರ್ ಎಂಟ್ರಿಯಲ್ಲಿ ಡಿಕ್ಕಿಯಾಗ ತೊಡಗಿದ್ದ ಬಸ್ಸು ಕೊನೆಗೆ ಬುದ್ಧ ಕಾಲನಿಯಲ್ಲಿ ಗೋಡೆಗೆ ಬಡಿದು ನಿಂತಿತ್ತು. ಬುದ್ಧ ಕಾಲನಿ ಜನವಸತಿ ಹೆಚ್ಚಿರುವ ಪ್ರದೇಶವಾಗಿದೆ.
The Brihanmumbai Electric Supply and Transport (BEST) bus driver involved in the accident at Kurla that killed seven and injured 42 persons in Mumbai on Monday “had limited experience in driving heavy vehicles”, Mumbai Police’s preliminary probe has found.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm