ಬ್ರೇಕಿಂಗ್ ನ್ಯೂಸ್
25-08-24 04:00 pm HK News Desk ದೇಶ - ವಿದೇಶ
ಕೊಚ್ಚಿ, ಆಗಸ್ಟ್.25: ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತಗಳು ಮಾನವನ ಅಸಡ್ಡೆ ಮತ್ತು ದುರಾಸೆಗೆ ಪ್ರಕೃತಿ ಪ್ರತಿಕ್ರಿಯಿಸಿರುವ ಇನ್ನೊಂದು ನಿದರ್ಶನವಾಗಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಬಹಳ ಹಿಂದೆಯೇ ಎಚ್ಚರಿಕೆಯ ಸಂಕೇತಗಳು ಕಾಣಿಸಿಕೊಂಡಿದ್ದವು, ಆದರೆ ರಾಜ್ಯವನ್ನು ಆರ್ಥಿಕ ಸಮೃದ್ಧಿಯ ಪಥದಲ್ಲಿ ಇರಿಸಲಿದೆ ಎಂದು ಭಾವಿಸಿದ್ದ ಅಭಿವೃದ್ಧಿಯ ಅಜೆಂಡಾದ ಅನ್ವೇಷಣೆಯ ಹಿಂದೆ ಬಿದ್ದಿದ್ದ ನಾವು ಅವುಗಳನ್ನು ನಿರ್ಲಕ್ಷಿಸಿದ್ದೆವು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
2018 ಮತ್ತು 2019ರ ಪ್ರಕೃತಿ ವಿಕೋಪಗಳು ಹಾಗೂ ಸುಮಾರು ಎರಡು ವರ್ಷಗಳ ವರೆಗೆ ಕಾಡಿದ್ದ ಕೋವಿಡ್ ಸಾಂಕ್ರಾಮಿಕ ಮತ್ತು ಇತ್ತೀಚಿನ ಭೂಕುಸಿತಗಳು ನಾವು ತಪ್ಪು ಮಾರ್ಗದಲ್ಲಿ ಸಾಗುತ್ತಿದ್ದೇವೆ ಎನ್ನುವುದನ್ನು ತೋರಿಸಿವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಜು.30ರ ವಯನಾಡ್ ಭೂಕುಸಿತ ಕೋರ್ಟ್ ಬಳಿಕ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಶ್ಯಾಮಕುಮಾರ ವಿ.ಎಂ. ಅವರಿದ್ದ ಪೀಠವು, ‘ನಾವು ಈಗಲೂ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಮತ್ತು ದೃಢವಾದ ಪರಿಹಾರ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಮತ್ತಷ್ಟು ಅನಾಹುತಕ್ಕೆ ಕಾರಣವಾಗಬಹುದು ಎಂದು ಬೊಟ್ಟು ಮಾಡಿದ್ದಾರೆ.
ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತಗಳು ಮೂರು ಗ್ರಾಮಗಳನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸಿವೆ. 300ಕ್ಕೂ ಅಧಿಕ ಜೀವಗಳು ಬಲಿಯಾಗಿದ್ದು, 119 ಜನರು ಈಗಲೂ ನಾಪತ್ತೆಯಾಗಿದ್ದಾರೆ.
ರಾಜ್ಯದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಕಲ್ಪನೆಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮತ್ತು ಇದಕ್ಕೆ ಸಂಬಂಧಿಸಿದಂತೆ ನೀತಿಯನ್ನು ಪುನರ್‌ಪರಿಶೀಲನೆ ಮಾಡುವಂತೆ ರಾಜ್ಯ ಸರಕಾರದ ಮನವೊಲಿಸಲು ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಆರಂಭಿಸಿರುವುದಾಗಿ ಉಚ್ಚ ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.
Kerala High Court remarked on Saturday that the recent landslides in Wayanad are yet another example of nature responding to human "apathy and greed." The court observed that "warning signs" had been evident for a long time, but "we chose to ignore them in pursuit of a development agenda that would supposedly put our state on the high road to economic prosperity."
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 01:49 pm
Mangalore Correspondent
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
ನಿಯಂತ್ರಣ ತಪ್ಪಿದ ಸ್ಕೂಟರ್ ಆವರಣ ಗೋಡೆಗೆ ಡಿಕ್ಕಿ ;...
13-08-25 10:17 am
ಧರ್ಮಸ್ಥಳ ಕೇಸ್ ; ಜಿಪಿಆರ್ ಬಳಸಿದರೂ ಸಿಗಲಿಲ್ಲ ಎಲುಬ...
12-08-25 11:06 pm
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm