ಬ್ರೇಕಿಂಗ್ ನ್ಯೂಸ್
10-06-24 08:53 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 10: ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡಿರುವ ನರೇಂದ್ರ ಮೋದಿ ಸೋಮವಾರ ಸಂಜೆ ನೂತನ ಸಚಿವರ ಜೊತೆಗೆ ಮೊದಲ ಸಂಪುಟ ಸಭೆ ನಡೆಸಿದರು. ಅಲ್ಲದೆ, ಸಂಪುಟ ಖಾತೆಗಳ ಹಂಚಿಕೆಯನ್ನು ಮಾಡಿ ಶುಭ ಹಾರೈಸಿದರು. ಕರ್ನಾಟಕದ ಎಚ್.ಡಿ ಕುಮಾರಸ್ವಾಮಿ ಅವರು ಬೃಹತ್ ಕೈಗಾರಿಕೆ, ಉಕ್ಕು ಸಚಿವಾಲಯದ ದೊಡ್ಡ ಖಾತೆಯನ್ನು ಪಡೆದಿದ್ದಾರೆ. ಪ್ರಹ್ಲಾದ ಜೋಷಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹೊಣೆ ಪಡೆದಿದ್ದಾರೆ. ಉಳಿದಂತೆ, ಕಳೆದ ಬಾರಿ ಇದ್ದ ಪ್ರಮುಖ ಖಾತೆಗಳ ಸಚಿವರು ಬಹುತೇಕ ಅದೇ ಖಾತೆಯನ್ನು ಪಡೆದಿದ್ದಾರೆ. ಯಾರ್ಯಾರಿಗೆ ಯಾವ ಖಾತೆ ಎನ್ನುವ ಪಟ್ಟಿ ಇಲ್ಲಿದೆ.
ರಾಜನಾಥ್ ಸಿಂಗ್ - ರಕ್ಷಣಾ ಸಚಿವಾಲಯ
ಜೆಡಿ ನಡ್ಡಾ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ ರಸಗೊಬ್ಬರ
ಅಮಿತ್ ಶಾ - ಗೃಹ ಸಚಿವಾಲಯ / ಸಹಕಾರ ಸಚಿವಾಲಯ
ನಿತಿನ್ ಗಡ್ಕರಿ - ರಸ್ತೆ ಸಾರಿಗೆ ಮತ್ತು ಹೆದ್ದಾರಿ
ಎಸ್.ಎಸ್. ಚೌಹಾಣ್ - ಕೃಷಿ ಮತ್ತು ರೈತರ ಕಲ್ಯಾಣ/ ಗ್ರಾಮೀಣಾಭಿವೃದ್ಧಿ
ನಿರ್ಮಲಾ ಸೀತಾರಾಮನ್ - ಹಣಕಾಸು ಸಚಿವಾಲಯ
ಎಸ್.ಜೈಶಂಕರ್ - ವಿದೇಶಾಂಗ ಸಚಿವಾಲಯ
ಎಚ್ಡಿ.ಕುಮಾರಸ್ವಾಮಿ - ಬೃಹತ್ ಕೈಗಾರಿಕೆ/ ಉಕ್ಕು
ಗಜೇಂದ್ರ ಸಿಂಗ್ ಶೇಖಾವತ್ - ಪ್ರವಾಸೋದ್ಯಮ/ ಸಂಸ್ಕೃತಿ
ಅಶ್ವಿನಿ ವೈಷ್ಣವ್ - ಮಾಹಿತಿ ಮತ್ತು ಪ್ರಸಾರ/ ರೈಲ್ವೇ ಇಲಾಖೆ
ರಾಮಮೋಹನ ನಾಯ್ಡು - ನಾಗರಿಕ ವಿಮಾನ ಯಾನ
ಧರ್ಮೇಂದ್ರ ಪ್ರಧಾನ್ - ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ
ಅನ್ನಪೂರ್ಣಾ ದೇವಿ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಭೂಪೇಂದ್ರ ಯಾದವ್ - ಪರಿಸರ ಅರಣ್ಯ, ಹವಾಮಾನ ಬದಲಾವಣೆ
ಸಿಆರ್ ಪಾಟೀಲ್ - ಜಲಶಕ್ತಿ
ಕಿರಣ್ ರಿಜಿಜು - ಸಂಸದೀಯ ವ್ಯವಹಾರ
ರವನೀತ್ ಸಿಂಗ್ ಬಿಟ್ಟು - ಅಲ್ಪಸಂಖ್ಯಾತ ವ್ಯವಹಾರ
ಜ್ಯೋತಿರಾಧಿತ್ಯ ಸಿಂಧ್ಯಾ - ಟೆಲಿಕಾಂ
ಗಿರಿರಾಜ್ ಸಿಂಗ್ - ಜವಳಿ
ಪ್ರಹ್ಲಾದ್ ಜೋಶಿ - ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರೀಕ ಸರಬರಾಜು
ಹರ್ದೀಪ್ ಸಿಂಗ್ ಪುರಿ - ಪೆಟ್ರೋಲಿಯಂ
ಪಿಯುಷ್ ಗೋಯಲ್ - ವಾಣಿಜ್ಯ ಮತ್ತು ಕೈಗಾರಿಕೆ
ಜಿತನ್ರಾಮ್ ಮಾಂಝಿ - ಸಣ್ಣ ಮತ್ತು ಮಧ್ಯಮ ಕೈಗಾರಿಕೆ
ರಾಜೀವ್ ರಂಜನ್ ಸಿಂಗ್ - ಪಂಚಾಯತ್ ರಾಜ್, ಮೀನುಗಾರಿಕೆ, ಪಶುಸಂಗೋಪನೆ.
ಸರ್ಬಾನಂದ ಸೋನಾವಾಲ್ - ಬಂದರು, ಜಲಸಾರಿಗೆ
ಡಾ.ವೀರೇಂದ್ರ ಕುಮಾರ್ - ಸಾಮಾಜಿಕ ನ್ಯಾಯ ಸಬಲೀಕರಣ
ಜೋಯಲ್ ಓರಾಂ - ಬುಡಕಟ್ಟು ಅಭಿವೃದ್ಧಿ
ಡಾ.ಮನ್ಸುಕ್ ಮಾಂಡವೀಯ - ಕಾರ್ಮಿಕ ಕಲ್ಯಾಣ/ ಯುವಜನ ಮತ್ತು ಕ್ರೀಡೆ
ಜಿ.ಕಿಶನ್ ರೆಡ್ಡಿ - ಕಲ್ಲಿದ್ದಲು/ ಗಣಿ
ಚಿರಾಗ್ ಪಾಸ್ವಾನ್ - ಆಹಾರ ಸಂಸ್ಕರಣಾ ಕೈಗಾರಿಕೆ
ವಿ. ಸೋಮಣ್ಣ- ರೈಲ್ವೇ ರಾಜ್ಯ ಖಾತೆ, ಶೋಭಾಗೆ ಸಣ್ಣ ಕೈಗಾರಿಕೆ
ಉಳಿದಂತೆ, ತುಮಕೂರು ಸಂಸದ ವಿ. ಸೋಮಣ್ಣ ಅವರು ಜಲಶಕ್ತಿ ಸಚಿವಾಲಯದ ರಾಜ್ಯ ಖಾತೆ ಮತ್ತು ರೈಲೇ ಇಲಾಖೆ ರಾಜ್ಯ ಸಚಿವ ಸ್ಥಾನ ಪಡೆದಿದ್ದಾರೆ. ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ಅವರು ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕಾರ್ಮಿಕ- ಉದ್ಯೋಗ ಸಚಿವಾಲಯದ ರಾಜ್ಯ ಖಾತೆ ಪಡೆದಿದ್ದಾರೆ. ಕೇರಳದ ಸಂಸದ ಸುರೇಶ್ ಗೋಪಿ ಅವರು ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಹಾಗೂ ಪ್ರವಾಸೋದ್ಯಮ ಇಲಾಖೆ ರಾಜ್ಯ ಸಚಿವ ಸ್ಥಾನ ಪಡೆದಿದ್ದಾರೆ. ಕೇರಳ ಮೂಲದ ಜಾರ್ಜ್ ಕುರಿಯನ್ ಅವರು ಅಲ್ಪಸಂಖ್ಯಾತ ರಾಜ್ಯ ಸಚಿವಾಲಯ, ಮೀನುಗಾರಿಕೆ, ಹೈನುಗಾರಿಕೆ, ಪಶು ಸಂಗೋಪನೆ ಇಲಾಖೆ ಸಚಿವರಾಗಿದ್ದಾರೆ. ತೆಲಂಗಾಣದ ಫೈರ್ ಬ್ರಾಂಡ್ ಬಂಡಿ ಸಂಜಯ್ ಅವರು ಗೃಹ ಇಲಾಖೆಯ ರಾಜ್ಯ ಖಾತೆ ಪಡೆದಿದ್ದಾರೆ.
HD Kumaraswamy now Minister of Heavy Industries, Minister of Steel of India in Modi cabinet, Jitan Ram Manjhi Minister of Micro, Small and Medium Enterprises, Chirag Paswan, Minister of Food Processing Industries. Prime Minister Narendra Modi on Monday allocated portfolios for the Modi 3.0 government with several key ministers retaining their portfolios. Amit Shah continues to serve as the Minister of home affairs, while Rajnath Singh remains the Minister of defence. Nitin Gadkari retains his position as the Minister of Road Transport and Highways.
06-10-25 10:47 pm
Bangalore Correspondent
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 10:42 pm
Mangalore Correspondent
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
07-10-25 10:31 am
HK News Desk
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm