ಬ್ರೇಕಿಂಗ್ ನ್ಯೂಸ್
28-04-24 10:51 am HK News Desk ದೇಶ - ವಿದೇಶ
ನವದೆಹಲಿ, ಏ.28: ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ 2024ರ ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆಯೊಬ್ಬರು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ವೃತ್ತಿಯಲ್ಲಿ ಪತ್ರಕರ್ತೆ, ವಕೀಲರಾದ 'ಅಲೆಜಾಂಡ್ರಾ ಮಾರಿಸಾ ರೊಡ್ರಿಗಸ್' ತನ್ನ 60ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯನ್ನು ಗೆದ್ದ ಮೊದಲ ಮಹಿಳೆ ಎಂಬ ದಾಖಲೆಯನ್ನೂ ಬರೆದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೊಗಳ ಪ್ರಕಾರ, ಈ ಗೆಲುವಿನೊಂದಿಗೆ, ರೊಡ್ರಿಗಸ್ 2024ರ ಮೇ ತಿಂಗಳಲ್ಲಿ ಮಿಸ್ ಯೂನಿವರ್ಸ್ ಅರ್ಜೆಂಟೀನಾ ರಾಷ್ಟ್ರೀಯ ಆಯ್ಕೆಯಲ್ಲಿ ಬ್ಯೂನಸ್ ಐರಿಸ್ ಅನ್ನು ಪ್ರತಿನಿಧಿಸಲಿದ್ದಾರೆ. ಅಲ್ಲಿ ಗೆದ್ದರೆ ಮಿಸ್ ಯೂನಿವರ್ಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗುತ್ತಾರೆ. ಈ ಸ್ಪರ್ಧೆ 2024ರ ಸೆಪ್ಟೆಂಬರ್ 28ರಂದು ಮೆಕ್ಸಿಕೋದಲ್ಲಿ ನಡೆಯಲಿದೆ.
ಸೌಂದರ್ಯ ಸ್ಪರ್ಧೆಯ ಈ ಹೊಸ ಮಾದರಿಯಲ್ಲಿ ಭಾಗವಹಿಸಿ ನಾನು ರೋಮಾಂಚಿತಗೊಂಡಿದ್ದೇನೆ. ಏಕೆಂದರೆ ಮಹಿಳೆಯರ ಕೇವಲ ದೈಹಿಕ ಸೌಂದರ್ಯ ಮಾತ್ರವಲ್ಲ, ಮತ್ತೊಂದು ಮೌಲ್ಯಗಳನ್ನು ಗೌರವಿಸುವ ಹೊಸ ಮಾದರಿಯನ್ನು ಆರಂಭಿಸುತ್ತಿದ್ದೇವೆ' ಎಂದು ಗೆಲುವಿನ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.
ಮಿಸ್ ಯೂನಿವರ್ಸ್ ಸಂಸ್ಥೆ ಕಳೆದ ವರ್ಷ ಸ್ಪರ್ಧಿಗಳ ವಯಸ್ಸಿನ ಮಿತಿಯನ್ನು ತೆಗೆದುಹಾಕಿದೆ. 18 ವರ್ಷ ಮೇಲ್ಪಟ್ಟ ಯಾವುದೇ ಮಹಿಳೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ. ಇದಕ್ಕೂ ಮೊದಲು 18-28 ವರ್ಷ ವಯಸ್ಸಿನ ಮಹಿಳೆಯರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದಿತ್ತು.
In a first, a 60-year-old lawyer scripted history after she won the Miss Universe Buenos Aires beauty pageant. Alejandra Rodríguez contested with 34 others, ranging in age from 18 to 73, to win the title.
07-10-25 05:23 pm
Bangalore Correspondent
ಮುಗಿಯದ ಜಾತಿ ಗಣತಿ ; ಅ.8ರಿಂದ ಶಾಲಾ ಅವಧಿ ಕಡಿತ, ಮಧ...
06-10-25 10:47 pm
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
07-10-25 01:53 pm
HK News Desk
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
07-10-25 05:17 pm
Mangalore Correspondent
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
Madhu Bangarappa: ರಾಜ್ಯದಲ್ಲಿ 18,500ಕ್ಕೂ ಅಧಿಕ...
06-10-25 10:42 pm
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
07-10-25 10:31 am
HK News Desk
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm