ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್ಮರಣ, ನಜ್ಜು ಗುಜ್ಜಾದ ಆಟೋ

16-04-24 05:09 pm       HK News Desk   ದೇಶ - ವಿದೇಶ

ರಿಕ್ಷಾವೊಂದು ಕ್ರೇನ್ ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಪಾಟ್ನಾ, ಏ.15: ರಿಕ್ಷಾವೊಂದು ಕ್ರೇನ್ ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಕಂಕರ್‌ಬಾಗ್ ಪ್ರದೇಶದಲ್ಲಿ ಪಾಟ್ನಾ ಮೆಟ್ರೋ ರೈಲು ಯೋಜನೆಯ ಸ್ಥಳದಲ್ಲಿ ಕಾಮಗಾರಿ ನಡೆಯುತಿದ್ದ ವೇಳೆ ವೇಗವಾಗಿ ಬಂದ ರಿಕ್ಷಾ ಕ್ರೇನ್ ಗೆ ಡಿಕ್ಕಿ ಹೊಡೆದಿದೆ. ನಗರದ ಮುಖ್ಯ ರಸ್ತೆಯಲ್ಲಿ ಕ್ರೇನ್ ಮೂಲಕ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ವೇಗವಾಗಿ ಬಂದ ರಿಕ್ಷಾ ನೇರವಾಗಿ ಕ್ರೇನ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. 

ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಅಲ್ಲದೆ ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ.

Seven people were killed and one sustained injuries after an auto collided with a crane in Bihar's Patna on Monday, police said. The accident occurred in Patna's Ramlakhan Path area when an out-of-control auto hit a crane involved in the Patna Metro project.