ಬ್ರೇಕಿಂಗ್ ನ್ಯೂಸ್
17-10-23 11:29 am HK News Desk ದೇಶ - ವಿದೇಶ
ಮಾಸ್ಕೊ, ಅ.17: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಣ ಸಂಘರ್ಷವನ್ನು ಕೊನೆಗೊಳಿಸಲು ನೆರವಾಗಲು ಸಿದ್ಧವಿರುವುದಾಗಿ ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್ ಹೇಳಿದೆ.
'ಪರಿಸ್ಥಿತಿಯನ್ನು ತಿಳಿಗೊಳಿಸಲು, ಹಿಂಸಾಚಾರ ಮತ್ತಷ್ಟು ಉಲ್ಬಣಗೊಳ್ಳದಂತೆ ಹಾಗೂ ಗಾಜಾ ಪಟ್ಟಿಯಲ್ಲಿ ಮಾನವೀಯ ದುರಂತವನ್ನು ತಡೆಯಲು ರಷ್ಯಾ ಕ್ರಮ ಕೈಗೊಳ್ಳುತ್ತಿರುವುದಾಗಿ ನೆತನ್ಯಾಹು ಅವರಿಗೆ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ' ಎಂದು ಕ್ರೆಮ್ಲಿನ್ ಮಾಹಿತಿ ನೀಡಿದೆ.
ಪುಟಿನ್ ಅವರು ಇರಾನ್, ಈಜಿಪ್ಟ್, ಸಿರಿಯಾ ಮತ್ತು ಪ್ಯಾಲೆಸ್ಟೇನ್ ನಾಯಕರರೊಂದಿಗೆ ಸೋಮವಾರ ಮಾತುಕತೆ ನಡೆಸಿದ್ದಾರೆ. ನಾಗರಿಕರ ವಿರುದ್ಧದ ಯಾವುದೇ ಹಿಂಸಾಚಾರವನ್ನು ಒಪ್ಪಲಾಗದು ಎಂದೂ ಅದು ಪ್ರತಿಪಾದಿಸಿದೆ.
ಹಮಾಸ್ ಬಂಡುಕೋರ ಸಂಘಟನೆ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ಆರಂಭಿಸಿದ ಒಂದು ವಾರದಲ್ಲಿ ಗಾಜಾ ಪಟ್ಟಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ನೆಲೆ ಕಳೆದುಕೊಂಡಿದ್ದಾರೆ. ವಿದ್ಯುತ್, ಇಂಧನ, ಆಹಾರ, ನೀರಿನ ಸರಬರಾಜು ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ದಾಳಿ ಇದೀಗ ಸಿರಿಯಾಗೂ ವಿಸ್ತರಿಸಿದೆ. ಇದರ ನಡುವೆ, ಅರಬ್ ದೇಶಗಳು ಇಸ್ರೇಲ್ ವಿರುದ್ಧ ಒಂದಾಗಬೇಕು ಎಂದು ಇರಾನ್ ಕರೆ ನೀಡಿರುವುದು ಹೊಸದೊಂದು ಪ್ರಾದೇಶಿಕ ಬಿಕ್ಕಟ್ಟಿಗೆ ನಾಂದಿ ಹಾಡಿದೆ.
In a recent development in the Israel-Hamas conflict, the Israeli military has raised their estimate, stating that the Hamas militant group in Gaza is currently holding approximately 199 hostages. Initially, their estimate had been around 120 hostages. Here are the top ten updates.
08-10-25 11:04 pm
Bangalore Correspondent
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
08-10-25 08:57 pm
HK News Desk
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
08-10-25 10:09 pm
Mangalore Correspondent
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am