ಬ್ರೇಕಿಂಗ್ ನ್ಯೂಸ್
23-09-23 07:59 pm HK News Desk ದೇಶ - ವಿದೇಶ
ಹೊಸದಿಲ್ಲಿ, ಸೆ.23: ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ಮುಖ್ಯಸ್ಥ ಹಾಗೂ ಖಲಿಸ್ತಾನಿ ಉಗ್ರ ಗುರ್ಪಾತ್ವಂತ್ ಸಿಂಗ್ ಪನ್ನುಂ ವಿರುದ್ಧ ಕಾರ್ಯಾಚರಣೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಪಂಜಾಬ್ನ ಚಂಡಿಗಡದಲ್ಲಿರುವ ಆತನ ಮನೆ, ಅಮೃತಸರದಲ್ಲಿರುವ ಆತನ ಮಾಲೀಕತ್ವದ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಮೂರು ದೇಶದ್ರೋಹ ಪ್ರಕರಣಗಳು ಸೇರಿದಂತೆ ಪನ್ನುಮ್ ವಿರುದ್ಧ ಪಂಜಾಬ್ನಲ್ಲಿ 22 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಜಪ್ತಿ ಮಾಡಲಾದ ಆಸ್ತಿಗಳಲ್ಲಿ, ಅಮೃತಸರದ ಹೊರವಲಯದಲ್ಲಿರುವ ಖಾಂಕೋಟ್ ಗ್ರಾಮದಲ್ಲಿರುವ ಸುಮಾರು ಆರು ಎಕರೆ ಕೃಷಿ ಭೂಮಿ ಸೇರಿದೆ. ಈ ಗ್ರಾಮದಲ್ಲಿ ಪನ್ನುಮ್ನ ಪೂರ್ವಜರು ನೆಲೆಸಿದ್ದರು. ಚಂಡಿಗಡದ ಸೆಕ್ಟರ್ 15- ಸಿಯಲ್ಲಿರುವ ಮನೆ ಸಂಖ್ಯೆ 2033 ಅನ್ನು ಕೂಡ ಮುಟ್ಟುಗೋಲು ಹಾಕಲಾಗಿದೆ. ಪನ್ನು ಈಗ ತನ್ನ ಮಾಲೀಕತ್ವದ ಆಸ್ತಿಗಳ ಮೇಲಿನ ಹಕ್ಕುಗಳನ್ನು ಕಳೆದುಕೊಂಡಿದ್ದು, ಅವು ಈಗ ಸರ್ಕಾರಕ್ಕೆ ಸೇರಿವೆ. 2020ರಲ್ಲಿ ಆತನ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಆತ ಯಾರಿಗೂ ಆಸ್ತಿ ಮಾರಾಟ ಮಾಡಲಾಗದಂತೆ ನಿರ್ಬಂಧ ವಿಧಿಸಲಾಗಿತ್ತು.
"ಮೊಹಾಲಿಯ ಎಸ್ಎಎಸ್ ನಗರದಲ್ಲಿನ ಎನ್ಐಎ ವಿಶೇಷ ನ್ಯಾಯಾಲಯ ಹೊರಡಿಸಿದ ಜಪ್ತಿ ಆದೇಶಕ್ಕೆ ಅನುಗುಣವಾಗಿ, ಕೆನಡಾ ಸೇರಿದಂತೆ ವಿವಿಧ ದೇಶಗಳಿಂದ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದನಾ ಹಾಗೂ ಪ್ರತ್ಯೇಕತಾವಾದಿ ಜಾಲವನ್ನು ಹತ್ತಿಕ್ಕುವ ಕ್ರಮವು ದೇಶಕ್ಕೆ ದೊಡ್ಡ ಶಕ್ತಿ ನೀಡಿದೆ" ಎಂದು ಎನ್ಐಎ ಹೇಳಿಕೆ ನೀಡಿದೆ.
ಕೆನಡಾದಲ್ಲಿರುವ ಭಾರತೀಯ ಹಿಂದೂಗಳು ದೇಶ ತೊರೆದು ಭಾರತಕ್ಕೆ ಮರಳಿ ಹೋಗಬೇಕು ಎಂದು ಆತ ಇತ್ತೀಚೆಗೆ ಬೆದರಿಕೆ ಹಾಕಿದ್ದ.
ಖಲಿಸ್ತಾನ್ ಪರ ಸಿಖ್ಖರು ಯಾವಾಗಲೂ ಕೆನಡಾಕ್ಕೆ ನಿಷ್ಠರಾಗಿರುತ್ತಾರೆ. ಅವರು ಯಾವಾಗಲೂ ಕೆನಡಾ ಪರ ನಿಲ್ಲುತ್ತಾರೆ. ಹಾಗೆಯೇ ಅವರು ಎಂದಿಗೂ ಕೆನಡಾ ಕಾನೂನು ಮತ್ತು ಸಂವಿಧಾನವನ್ನು ಎತ್ತಿ ಹಿಡಿಯುತ್ತಾರೆ" ಎಂದು ಆತ ಹೇಳಿದ್ದ.
ಹರ್ದೀಪ್ ಸಿಂಗ್ ನಿಜ್ಜರ್ನ ಹತ್ಯೆಗೆ ಭಾರತದ ಹೈ ಕಮಿಷನರ್ ಸಂಜಯ್ ಕುಮಾರ್ ವರ್ಮಾ ಹೊಣೆಗಾರರೇ ಎಂಬ ಬಗ್ಗೆ ಜನ ಮತ ಅಭಿಪ್ರಾಯ ಸಂಗ್ರಹಿಸಲು ಅಕ್ಟೋಬರ್ 29ರಂದು ವ್ಯಾಂಕೌವರ್ನಲ್ಲಿ ಎಲ್ಲಾ ಕೆನಡಿಯನ್ ಸಿಖ್ಖರು ಸೇರುವಂತೆ ಪನ್ನುಮ್ ಮನವಿ ಮಾಡಿದ್ದಾನೆ.
The National Investigation Agency on Saturday seized a property owned by banned Sikhs for Justice (SFJ) founder and designated terrorist Gurpatwant Singh Pannu, in Chandigarh. “On the orders of the NIA court, a property confiscation notice has been pasted outside a house owned Gurpatwant Singh Pannu, in Chandigarh.”
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm