ಬ್ರೇಕಿಂಗ್ ನ್ಯೂಸ್
17-09-23 01:14 pm HK News Desk ದೇಶ - ವಿದೇಶ
ಬ್ರೆಜಿಲ್, ಸೆ.17: ವಿಮಾನ ಪತನವಾಗಿ ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು 14 ಮಂದಿ ಸಾವನ್ನಪ್ಪಿರುವ ಘಟನೆ ಬ್ರೆಜಿಲ್‌ನ ಉತ್ತರ ಅಮೆಜಾನ್ ರಾಜ್ಯದಲ್ಲಿ ಶನಿವಾರ ನಡೆದಿದೆ.
ಉತ್ತರ ಅಮೆಜಾನ್ ರಾಜ್ಯದ ರಾಜಧಾನಿ ಮನೌಸ್‌ನಿಂದ ಸುಮಾರು 400 ಕಿಮೀ (248 ಮೈಲುಗಳು) ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ಈ ವಿಮಾನ ಪತನ ಸಂಭವಿಸಿದೆ.
ರನ್ ವೇಯಿಂದ ಹೊರಟ ವಿಮಾನ ಮಳೆಯಾದ ಕಾರಣದಿಂದ ಮಾರ್ಗ ಕೂಡ ಸರಿಯಾಗಿ ಗೋಚರಿಸದೆ ಲ್ಯಾಂಡ್ ಆಗಲು ಯತ್ನಿಸಿದೆ. ಆದರೆ ಈ ವೇಳೆ ನಿಯಂತ್ರಣ ಕಳೆದುಕೊಂಡು ಬಾರ್ಸಿಲೋಸ್ ನ ಕಾಡಿನ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ.
ವರದಿಯ ಪ್ರಕಾರ ವಿಮಾನದಲ್ಲಿದ್ದವರು ಮೀನುಗಾರಿಕೆಯ ಪ್ರವಾಸಿ ತಾಣವೊಂದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಬಾರ್ಸೆಲೋಸ್ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಇಲ್ಲಿ ಹಲವಾರು ರಾಷ್ಟ್ರೀಯ ಉದ್ಯಾನವನಗಳಿವೆ. ಈ ಕಾರಣದಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಅಲ್ಲಿಗೆ ತೆರಳುತ್ತಿದ್ದರು ಎಂದು ವರದಿ ತಿಳಿಸಿದೆ.
ಶನಿವಾರ ಬಾರ್ಸೆಲೋಸ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ 12 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಗಳ ಸಾವಿಗೆ ನಾನು ತೀವ್ರವಾಗಿ ದುಃಖ ವ್ಯಕ್ತಪಡಿಸುತ್ತೇನೆ” ಎಂದು ಉತ್ತರ ಅಮೆಜಾನ್ ರಾಜ್ಯದ ಗವರ್ನರ್ ವಿಲ್ಸನ್ ಲಿಮಾ ಟ್ವೀಟ್ ಮಾಡಿ ಹೇಳಿದ್ದಾರೆ.
ಸದ್ಯ ಮನೌಸ್ ಏರೋಟ್ಯಾಕ್ಸಿ ವಿಮಾನಯಾನ ಸಂಸ್ಥೆಯು ಅಪಘಾತ ಸಂಭವಿಸಿದೆ ಮತ್ತು ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ಆದರೆ ಸಾವು ನೋವಿನ ಬಗ್ಗೆ ಹಾಗೂ ಗಾಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.
A plane crash in Brazil's northern Amazon state on Saturday has left 14 dead, the state's governor said. The accident took place in the Barcelos province, some 400 km (248 miles) from the state capital, Manaus.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm