ಬ್ರೇಕಿಂಗ್ ನ್ಯೂಸ್
16-08-23 07:01 pm HK News Desk ದೇಶ - ವಿದೇಶ
ಇಸ್ಲಾಮಬಾದ್, ಆಗಸ್ಟ್ 16: ಮುಸ್ಲಿಂ ಮೂಲಭೂತವಾದಿಗಳ ಗುಂಪೊಂದು ಧರ್ಮನಿಂದೆಯ ಆರೋಪದ ಮೇಲೆ ಚರ್ಚ್ಗೆ ಬೆಂಕಿ ಹಚ್ಚಿದ್ದು ಕ್ರಿಶ್ಚಿಯನ್ನರು ಭಯಭೀತರಾದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರ ಜೀವನವೂ ನರಕವಾಗಿದೆ. ಈ ಬಾರಿ ಮುಸ್ಲಿಂ ಮೂಲಭೂತವಾದಿಗಳ ಗುಂಪೊಂದು ಫೈಸಲಾಬಾದ್ ಜಿಲ್ಲೆಯಲ್ಲಿ ಚರ್ಚ್ಗೆ ಬೆಂಕಿ ಹಚ್ಚಿದೆ.
ಧರ್ಮನಿಂದೆಯ ಆರೋಪದ ಮೇಲೆ ಚರ್ಚ್ ಅನ್ನು ಸುಟ್ಟು ನಾಶಪಡಿಸಲಾಗಿದೆ. ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಮತ್ತೊಂದು ದಾಳಿಯಲ್ಲಿ ಫೈಸಲಾಬಾದ್ ಜಿಲ್ಲೆಯ ಚರ್ಚ್ ಗೆ ಬೆಂಕಿ ಹಚ್ಚಲಾಗಿದೆ. ಧರ್ಮನಿಂದೆಯ ಆರೋಪದ ಮೇಲೆ ಗುಂಪೊಂದು ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಜಿಲ್ಲೆಯಲ್ಲಿ ಚರ್ಚ್ ಅನ್ನು ಧ್ವಂಸ ಮಾಡಿದೆ.
ಪಾಕಿಸ್ತಾನದಲ್ಲಿ ಚರ್ಚ್ಗೆ ಬೆಂಕಿ!
ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಬಿಷಪ್ ಮಾರ್ಷಲ್, "ನಾನು ಇದನ್ನು ಬರೆಯುವಾಗ ನಾನು ಪದಗಳೇ ಬರುತ್ತಿಲ್ಲ. ಪಾಕಿಸ್ತಾನದ ಫೈಸಲಾಬಾದ್ ಜಿಲ್ಲೆಯ ಜರನ್ವಾಲಾ ಘಟನೆಯ ಬಗ್ಗೆ ನಾವು, ಬಿಷಪ್ಗಳು, ಪಾದ್ರಿಗಳು ಮತ್ತು ಸಾಮಾನ್ಯ ಜನರು ತೀವ್ರ ದುಃಖಿತರಾಗಿದ್ದೇವೆ''
''ಇಲ್ಲಿ ಚರ್ಚ್ಗೆ ಬೆಂಕಿ ಹಚ್ಚಲಾಗಿದೆ ಮತ್ತು ಬೈಬಲ್ ಅನ್ನು ಅವಮಾನಿಸಲಾಗಿದೆ. ಮಾತ್ರವಲ್ಲದೆ ಕ್ರಿಶ್ಚಿಯನ್ನರನ್ನು ಪವಿತ್ರ ಕುರಾನ್ ಉಲ್ಲಂಘಿಸಿದ್ದಾರೆಂದು ಸುಳ್ಳು ಆರೋಪ ಹೊರಿಸಲಾಗಿದೆ" ಎಂದು ಅವರು ಕಿರುಕುಳದ ಆರೋಪ ಮಾಡಿದ್ದಾರೆ.
ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ನ್ಯಾಯ ಮತ್ತು ಕ್ರಮಕ್ಕಾಗಿ ನಾನು ಕರೆ ನೀಡುತ್ತಿದ್ದೇನೆ ಎಂದು ಬಿಷಪ್ ಮಾರ್ಷಲ್ ಹೇಳಿದ್ದಾರೆ. ಜೊತೆಗೆ ಅವರು ನಾಗರಿಕರ ಸುರಕ್ಷತೆಗೆ ಒತ್ತಾಯಿಸಿದ್ದಾರೆ. ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ಇಲ್ಲಿ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯವಿಲ್ಲ ಎಂದು ಹೇಳಿದ್ದಾರೆ.
ಸಹಿಷ್ಣು ಮತ್ತು ಸಮಾನತೆಯ ದೇಶವನ್ನು ರಚಿಸುವ ಉದ್ದೇಶದಿಂದ 1947 ರಲ್ಲಿ ಪಾಕಿಸ್ತಾನವನ್ನು ಸ್ಥಾಪಿಸಲಾಯಿತು. ಆದರೆ ಅದು ಕೇವಲ ಹೇಳುವುದಕ್ಕಾಗಿ ಮಾತ್ರ. ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲಾಗಿದೆ ಮತ್ತು ಕಳೆದ 76 ವರ್ಷಗಳಲ್ಲಿ ಅಲ್ಪಸಂಖ್ಯಾತರು ಬಹುತೇಕ ನಾಶವಾಗಿದ್ದಾರೆ.
A church was vandalized and set on fire in the Faisalabad district of Pakistan, in yet another assault on religious minorities, according to Lahore-based Bishop Azad Marshall. A church in the Faisalabad area of Punjab province was vandalized and damaged as a result of the blasphemy accusations.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm