ಬ್ರೇಕಿಂಗ್ ನ್ಯೂಸ್
24-07-23 10:49 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 24: ಕಾಶಿ ವಿಶ್ವನಾಥನ ಸನ್ನಿಧಿಯ ಆವರಣದಲ್ಲೇ ಇರುವ ವಿವಾದಿತ ಜ್ಞಾನವಾಪಿ ಮಸೀದಿಯ ಕುರಿತು ಪ್ರಾಚ್ಯವಸ್ತು ಇಲಾಖೆಯಿಂದ ಸಮೀಕ್ಷೆ ಕೈಗೆತ್ತಿಕೊಂಡ ಬೆನ್ನಲ್ಲೇ ಸುಪ್ರೀಂ ಕೋರ್ಟ್ ತಡೆ ಹಾಕಿದೆ.
ಮಸೀದಿ ಕಮಿಟಿಯ ಆಕ್ಷೇಪವನ್ನು ಮನ್ನಿಸಿದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಎರಡು ದಿನಗಳ ಕಾಲಾವಕಾಶ ನೀಡಿದ್ದು, ಜುಲೈ 26ರ ಸಂಜೆ 5 ಗಂಟೆ ವರೆಗೆ ಎಎಸ್ಐ ಸರ್ವೇ ನಡೆಸದಂತೆ ನಿರ್ದೇಶನ ನೀಡಿದೆ. ಅಲ್ಲದೆ, ಅಷ್ಟರೊಳಗೆ ಅಲಹಾಬಾದ್ ಹೈಕೋರ್ಟಿನಲ್ಲಿ ಆಕ್ಷೇಪ ಸಲ್ಲಿಸುವಂತೆ ಸೂಚನೆ ನೀಡಿದೆ.
ಎರಡು ವರ್ಷಗಳ ಜಟಾಪಟಿ ಬಳಿಕ ವಾರಣಾಸಿ ಜಿಲ್ಲಾ ಕೋರ್ಟ್, ಜ್ಞಾನವಾಪಿ ಮಸೀದಿಯಲ್ಲಿ ವೈಜ್ಞಾನಿಕ ಸರ್ವೇ ನಡೆಸುವಂತೆ ಪ್ರಾಚ್ಯವಸ್ತು ಇಲಾಖೆಗೆ ನಿರ್ದೇಶನ ನೀಡಿತ್ತು. ಅಲ್ಲದೆ, ಪೂರ್ತಿ ಸರ್ವೇ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡುವಂತೆ ಸೂಚಿಸಿತ್ತು. ಅದರಂತೆ, ಜುಲೈ 24ರ ಸೋಮವಾರದಿಂದ ಸರ್ವೇ ಆರಂಭಿಸಿ, ಆಗಸ್ಟ್ 4ರೊಳಗೆ ವರದಿ ನೀಡುವಂತೆ ಕೋರ್ಟ್ ಸೂಚಿಸಿತ್ತು. ಆದೇಶ ಅನುಸಾರ, ಸೋಮವಾರ ಬೆಳಗ್ಗೆ ಏಳು ಗಂಟೆಗೆ ಬಿಗಿ ಬಂದೋಬಸ್ತಿನಲ್ಲಿ ಸರ್ವೆ ಆರಂಭಗೊಂಡಿತ್ತು. 30 ಮಂದಿ ಅಧಿಕಾರಿಗಳಿದ್ದ ತಂಡವು ಸರ್ವೇ ಕೆಲಸವನ್ನು ಆರಂಭಿಸಿತ್ತು.
ಆದರೆ, ವಾರಣಾಸಿ ಜಿಲ್ಲಾ ಕೋರ್ಟಿನ ಆದೇಶವನ್ನು ಪ್ರಶ್ನಿಸಿ ಮತ್ತು ಸರ್ವೇ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿ ಮಸೀದಿ ಕಮಿಟಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ತುರ್ತಾಗಿ ಪರಿಗಣಿಸುವಂತೆ ಕೋರಿದ್ದ ಅಹವಾಲಿಗೆ ಸ್ಪಂದಿಸಿದ ಮೂವರು ಸದಸ್ಯರಿದ್ದ ಪೀಠವು, ಅರ್ಜಿದಾರರಿಗೆ ಉಸಿರಾಟಕ್ಕೆ ಅವಕಾಶ ನೀಡಬೇಕೆಂದು ಹೇಳಿ ಸರ್ವೇ ಪ್ರಕ್ರಿಯೆಗೆ ತಡೆ ನೀಡಿದ್ದಲ್ಲದೆ, ಎರಡು ದಿನಗಳ ಮಟ್ಟಿಗೆ ತಡೆಯಾಜ್ಞೆ ನೀಡಿದೆ. ಅಲ್ಲದೆ, ರಾಡಾರ್ ಪರೀಕ್ಷೆ ಮೂಲಕ ನಡೆಸುವ ವೈಜ್ಞಾನಿಕ ಸರ್ವೇ ಸಂದರ್ಭದಲ್ಲಿ ಮಸೀದಿಯ ಒಂದು ಇಟ್ಟಿಗೆ ಕಲ್ಲು ಕೂಡ ಹಾಳಾಗದಂತೆ ನೋಡಿಕೊಳ್ಳಬೇಕು. ಯಾವುದೇ ಸಿಮೆಂಟ್ ತುಂಡನ್ನೂ ಎಬ್ಬಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಲ್ಲದೆ, ಎರಡು ದಿನದೊಳಗೆ ಹೈಕೋರ್ಟಿನಲ್ಲಿ ಈ ಬಗ್ಗೆ ಅಹವಾಲು ಸಲ್ಲಿಸುವಂತೆ ಸೂಚನೆ ನೀಡಿದೆ. ಜಿಲ್ಲಾ ಕೋರ್ಟಿನ ಆದೇಶವನ್ನು ಪ್ರಶ್ನಿಸಿ, ಹೈಕೋರ್ಟಿಗೆ ಹೋಗುವ ಅವಕಾಶ ಇರುವಾಗ ಸುಪ್ರೀಂ ಕೋರ್ಟಿಗೆ ಯಾಕೆ ಬಂದಿದ್ದೀರಿ ಎಂದು ಮುಖ್ಯ ನ್ಯಾಯಾಧೀಶರು ಕೇಳಿದ್ದು ಎರಡು ದಿನಗಳ ಕಾಲಾವಕಾಶ ನೀಡುವುದಾಗಿ ಹೇಳಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ವಾರಣಾಸಿ ಕೋರ್ಟ್ ನೀಡಿದ್ದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿದ್ದರಿಂದ ಮಸೀದಿ ಕಮಿಟಿಯವರು ನೇರವಾಗಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
The Supreme Court on Monday stayed the Varanasi district court order until 5 pm on July 26 allowing scientific excavation of the Gyanvapi mosque complex survey by the Archaeological Survey of India (ASI) to ascertain whether the masjid was built over a pre-existing Hindu temple.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm