ಬ್ರೇಕಿಂಗ್ ನ್ಯೂಸ್
03-05-23 08:33 pm HK News Desk ದೇಶ - ವಿದೇಶ
ನವದೆಹಲಿ, ಮೇ 3: ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ ಜಲ ಮತ್ತು ವಿದ್ಯುತ್ ಕನ್ಸಲ್ಟನ್ಸಿ ಸರ್ವಿಸಸ್ ಲಿಮಿಟೆಡ್ (ವಾಪ್ಕೋಸ್) ಕಂಪನಿಯ ನಿವೃತ್ತ ಮುಖ್ಯ ವ್ಯವಸ್ಥಾಪಕ ರಾಜೀಂದರ್ ಕುಮಾರ್ ಎಂಬಾತನ ಮನೆ ಮತ್ತು 19 ಕಡೆ ಇರುವ ಆಸ್ತಿಗಳಿಗೆ ಏಕಕಾಲದಲ್ಲಿ ಸಿಬಿಐ ದಾಳಿ ನಡೆಸಿದ್ದು, 20 ಕೋಟಿ ರೂಪಾಯಿ ನಗದನ್ನು ವಶಕ್ಕ ಪಡೆಯಲಾಗಿದೆ.
ದೆಹಲಿ, ಗುರುಗ್ರಾಮ್, ಪಂಚ್ ಕುಲಾ, ನೋಯ್ಡಾ, ಲೂಧಿಯಾನ, ಸೋನಿಪತ್, ಚಂಡೀಗಢ, ಉತ್ತರ ಪ್ರದೇಶದ ಗಾಜಿಯಾಬಾದ್ ಸೇರಿದಂತೆ 19 ವಿವಿಧ ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಂಡೀಗಢದಲ್ಲಿ ರಾಜೀಂದರ್ ಕುಮಾರ್ ಪುತ್ರನ ಮನೆ ಒಂದರಲ್ಲೇ ದಾಳಿ ವೇಳೆ 10 ಕೋಟಿ ನಗದು ಪತ್ತೆಯಾಗಿದೆ. ರಾಶಿ ರಾಶಿ ನಗದು ಸಿಕ್ಕಿದ್ದು ಇದರ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.


2011ರಿಂದ 2019ರ ವರೆಗೆ ಸಿಎಂಡಿ ಆಗಿದ್ದ ರಾಜೀಂದರ ಕುಮಾರ್ ಗುಪ್ತಾ ಅಕ್ರಮವಾಗಿ ಆಸ್ತಿ ಗಳಿಸಿದ್ದಾನೆಂದು ದೂರು ಲಭಿಸಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. 2019ರಲ್ಲಿ ನಿವೃತ್ತಿಯಾದ ಬಳಿಕ ರಾಜೀಂದರ್ ಕುಮಾರ್ ತನ್ನದೇ ಆದ ಕನ್ಸಲ್ಟೆನ್ಸಿ ಕಂಪನಿಯೊಂದನ್ನು ಆರಂಭಿಸಿದ್ದ. ಇದಲ್ಲದೆ, ದೆಹಲಿ, ಪಂಜಾಬ್ ರಾಜ್ಯದ ಗುರುಗ್ರಾಮ್, ಚಂಡೀಗಢ, ಪಂಚಕುಲಾದಲ್ಲಿ ಅಪಾರ ಆಸ್ತಿ ಮಾಡಿಟ್ಟಿದ್ದ. ಫ್ಲಾಟ್, ರೆಸಾರ್ಟ್, ಹಲವಾರು ಕಮರ್ಶಿಯಲ್ ಕಟ್ಟಡಗಳನ್ನು ಹೊಂದಿದ್ದಾನೆ. ತನಿಖೆ ಮುಂದುವರಿಸಿದ್ದು, ರಾಜೀಂದರ್ ಕುಮಾರ್ ಮತ್ತು ಆತನ ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
More than Rs 20 crore was seized by the Central Bureau of Investigation (CBI) when raids were conducted at premises of Rajinder Kumar Gupta, former Chairman and Managing Director (CMD) of public sector undertaking WAPCOS Limited on Tuesday. Gupta was booked recently for amassing assets disproportionate to his known sources of income.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 04:45 pm
HK News Staffer
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm