ಬ್ರೇಕಿಂಗ್ ನ್ಯೂಸ್
18-03-23 11:17 pm HK News Desk ದೇಶ - ವಿದೇಶ
ಮಧ್ಯಪ್ರದೇಶ, ಮಾ.18 : ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ಚಾರ್ಟರ್ ವಿಮಾನವೊಂದು ಪತನಗೊಂಡಿದ್ದು ವಿಮಾನದ ಪೈಲಟ್ ಮತ್ತು ಟ್ರೈನಿ ಪೈಲಟ್ ಇಬ್ಬರೂ ಮೃತಪಟ್ಟಿದ್ದಾರೆ. ಬಂಡೆಗಳ ನಡುವೆ ಒಬ್ಬರು ದೇಹ ಪತ್ತೆಯಾಗಿವೆ.
ಬಾಲಾಘಾಟ್ ಜಿಲ್ಲೆಯ ಲಾಂಜಿ ಮತ್ತು ಕಿರ್ನಾಪುರ ನಡುವಿನ ಭಕ್ಕುಟೋಲಾ-ಕೋಸ್ಮಾರಾ ಬೆಟ್ಟದಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಟ್ರೈನಿ ಪೈಲಟ್ ರುಕಾಶಂಕ ವರ್ಸುಕ ಮತ್ತು ಪೈಲಟ್ ಮೋಹಿತ್ ಸಾವನ್ನಪ್ಪಿದ್ದಾರೆ ಎಂದು ಎಟಿಸಿ ಗೊಂಡಿಯಾ ಎಜಿಎಂ ಕಮಲೇಶ್ ಮೆಶ್ರಮ್ ಹೇಳಿದ್ದಾರೆ.

ಈ ವಿಮಾನವು ತರಬೇತಿ ವಿಮಾನವಾಗಿದ್ದು, ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ಏರ್‌ಸ್ಟ್ರಿಪ್‌ನಿಂದ ಹಾರಿದೆ. ಈ ಸ್ಥಳವು ಬಾಲಘಾಟ್ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಟೆಕ್ ಆಫ್ ಆದ 15 ನಿಮಿಷಗಳ ಬಳಿಕ ಮಧ್ಯಾಹ್ನ 3.20ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಬಾಲಾಘಾಟ್ ಜಿಲ್ಲೆಯಲ್ಲಿ ವಿಮಾನ ಬಿದ್ದ ಸ್ಥಳದಲ್ಲಿ ಎರಡು ಕಡೆ ಪರ್ವತಗಳಿವೆ. ಪರ್ವತಗಳ ಮಧ್ಯದಲ್ಲಿರುವ 100 ಅಡಿ ಆಳದ ಕಮರಿಯಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ದಟ್ಟ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶವಾದ್ದರಿಂದ ರಕ್ಷಣಾ ತಂಡ ಹಾಗೂ ಅಧಿಕಾರಿಗಳು ಸ್ಥಳಕ್ಕೆ ತಲುಪಲು ಸಮಸ್ಯೆ ಎದುರಿಸುತ್ತಿದ್ದಾರೆ. ಅಪಘಾತದ ಸ್ಥಳವನ್ನು ತಲುಪಲು ಸುಮಾರು 7 ಕಿ.ಮೀ ಅರಣ್ಯ ಮತ್ತು ಪರ್ವತ ಮಾರ್ಗವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಗಿದೆ.
ಪೈಲಟ್‌ಗಳಿಗೆ ಮಹಾರಾಷ್ಟ್ರದ ಗೊಂಡಿಯಾದಲ್ಲಿರುವ ಬಿರ್ಸಿ ಏರ್‌ಸ್ಟ್ರಿಪ್‌ನಲ್ಲಿ ತರಬೇತಿ ನೀಡಲಾಗುತ್ತದೆ. ಅನೇಕ ಬಾರಿ ಇಲ್ಲಿಂದ ಮಧ್ಯಪ್ರದೇಶದ ಗಡಿಯತ್ತ ವಿಮಾನಗಳು ಹಾರುತ್ತವೆ. 2017ರ ಏಪ್ರಿಲ್‌ನಲ್ಲಿ ಬಾಲಘಾಟ್ ಜಿಲ್ಲೆಯ ಖೈರ್ಲಾಂಜಿ ತಹಸಿಲ್‌ನ ಲಾವಣಿ ಪುರ ಗ್ರಾಮದಲ್ಲಿ ತರಬೇತಿ ವಿಮಾನ ಪತನಗೊಂಡಿತ್ತು. ಆಗ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ಜೊತೆಗಿನ ವಿಮಾನದ ಸಂಪರ್ಕ ಕಳೆದುಕೊಂಡಿತ್ತು. ಇದರ ನಂತರ, ವಿಮಾನವು ರೋಪ್‌ವೇಯ ಮರ ಮತ್ತು ಟವರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿತು.
The charter plane crashed on the Bhakkutola-Kosmara hill between Lanji and Kirnapur in Balaghat district. A charter plane crashed in Balaghat, Madhya Pradesh on Saturday afternoon. A pilot and a trainee pilot were on board the aircraft. Both died. One’s body was seen burning between two rocks. On information, the police has rushed to the spot.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 04:45 pm
HK News Staffer
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm