ಬ್ರೇಕಿಂಗ್ ನ್ಯೂಸ್
21-02-23 07:39 pm HK News Desk ದೇಶ - ವಿದೇಶ
ಹೈದರಾಬಾದ್, ಫೆ.21 : ನಾಲ್ಕು ವರ್ಷದ ಬಾಲಕನನ್ನು ಬೀದಿ ನಾಯಿಗಳು ಕಚ್ಚಿ ಎಳೆದಾಡಿ ಕೊಂದು ಹಾಕಿದ ಹೃದಯ ವಿದ್ರಾವಕ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು ಇದರ ಸಿಸಿಟಿವಿ ವೈರಲ್ ಆಗಿದೆ.
ಹೈದರಾಬಾದ್ ನಗರದ ಅಪಾರ್ಟ್ಮೆಂಟ್ ಒಂದರ ಆವರಣದಲ್ಲಿ ಫೆ.19ರಂದು ಘಟನೆ ನಡೆದಿದೆ. ಬಾಲಕನ ತಂದೆ ಅಪಾರ್ಟ್ಮೆಂಟ್ ವಾಚ್ ಮನ್ ಆಗಿದ್ದು ಬಾಲಕ ಒಬ್ಬಂಟಿಯಾಗಿ ಹೊರಕ್ಕೆ ಬಂದಿದ್ದಾಗ ನಾಯಿಗಳು ಮುತ್ತಿಕೊಂಡಿವೆ. ಬಳಿಕ ಮೂರ್ನಾಲ್ಕು ನಾಯಿಗಳು ಒಟ್ಟಾಗಿದ್ದು ಮಗುವನ್ನು ಎಳೆದಾಡಿದ್ದು ಕಚ್ಚಿ ಕಚ್ಚಿ ಸಾಯಿಸಿದೆ.
ಮಗುವಿನ ಚೀರಾಟ ಕೇಳಿದ ತಂದೆ ಗಂಗಾಧರ್ ಓಡಿ ಬಂದಿದ್ದು ಗಂಭೀರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಒಯ್ದಿದ್ದಾರೆ. ಅಷ್ಟರಲ್ಲಿ ಮಗು ಸಾವು ಕಂಡಿತ್ತು. ಗಂಗಾಧರ್ ನಿಜಾಮ್ ನಗರದ ನಿವಾಸಿಯಾಗಿದ್ದು ಇತ್ತೀಚೆಗೆ ಹೈದರಾಬಾದ್ ನಗರಕ್ಕೆ ಬಂದು ನೆಲೆಸಿದ್ದ. ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಮಗು ಸಾವನ್ನಪ್ಪಿದ ಘಟನೆಯ ದೃಶ್ಯ ಅಪಾರ್ಟ್ಮೆಂಟ್ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪುಟಾಣಿ ಮಗು ನಡೆದು ಬರುತ್ತಲೇ ನಾಯಿಗಳು ಮುತ್ತಿಕೊಂಡು ಮಾಂಸದ ಮುದ್ದೆಯ ರೀತಿ ಎಳೆದಾಡಿದ ಭೀಕರ ದೃಶ್ಯ ಸೆರೆಯಾಗಿದ್ದು ಮನಸ್ಸು ಕಲಕುವಂತಿದೆ. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶವೂ ವ್ಯಕ್ತವಾಗಿದೆ.

ಬೀದಿ ನಾಯಿಗಳಿಂದ ಮಕ್ಕಳ ಸಾವಾಗುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕನೊಬ್ಬ ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟಿದ್ದ. ಬಿಲಾಸ್ಪುರದಲ್ಲಿರುವ ತನ್ನ ಮನೆಯ ಹಿಂಭಾಗದಲ್ಲಿ ಆಟವಾಡುತ್ತಿದ್ದಾಗಲೇ ಘಟನೆ ನಡೆದಿತ್ತು.
#hyderabad dog bite pic.twitter.com/mJkKOnaof3
— Sai vineeth(Journalist🇮🇳) (@SmRtysai) February 21, 2023
A horrific incident in which a pack of dogs attacked a four-year-old boy and killed him, came to light two days later on February 21. The boy, Pradeep, was attacked by four dogs on February 19,when he was walking on the road, closer to his father’s workplace in an automobile workshop, in Amberpet.
29-06-26 10:33 pm
HK News Desk
ಬಿಜೆಪಿಯಲ್ಲಿ ಆಡಿಯೋ ಬಿರುಗಾಳಿ ; ವಿಜಯೇಂದ್ರರನ್ನು ಈ...
29-06-26 10:22 pm
ಅಮಲು ಪದಾರ್ಥ ಬೆರೆಸಿದರೆ ರಾಜ್ಯದಲ್ಲಿ ಎಲ್ಲಾ ಪಾನ್ ಮ...
28-06-26 06:30 pm
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
29-06-26 03:35 pm
HK News Staffer
3-6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ; ಇದು ಅಲುಗಾಡುವ...
29-06-26 12:41 pm
ಜಾತಿ ಹುಟ್ಟಿನಿಂದಲೇ ಬರಬೇಕು, ಇಸ್ಲಾಂಗೆ ಮತಾಂತರಗೊಂಡ...
28-06-26 04:03 pm
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
29-06-26 07:25 pm
HK News Staffer
ನಡುರಾತ್ರಿ ಬೆಡ್ ರೂಮ್ ಕಿಟಕಿಗೆ ಕೈಹಾಕಿ ಮಹಿಳೆಯ ಸರ...
29-06-26 06:45 pm
ತಾಯಿಯ ಹೆಸರಿನಲ್ಲಿದ್ದ ಆಸ್ತಿ ಕಿತ್ತುಕೊಂಡ ಮಗ, ತಂದೆ...
29-06-26 04:45 pm
ವಿಟ್ಲ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್...
29-06-26 02:00 pm
Panambur Robbery, Mangalore: ಮುಂಬೈನಿಂದ ಬರುತ್ತ...
29-06-26 09:32 am