ಬ್ರೇಕಿಂಗ್ ನ್ಯೂಸ್
18-02-23 09:32 pm HK News Desk ದೇಶ - ವಿದೇಶ
ಮುಂಬೈ, ಫೆ.18 : ಪಕ್ಷವನ್ನೇ ಒಡೆದು ಮಹಾರಾಷ್ಟ್ರ ಸಿಎಂ ಆಗಿರುವ ಏಕನಾಥ್ ಶಿಂಧೆ ಬಣಕ್ಕೆ ಶಿವಸೇನಾ ಪಕ್ಷದ ಅಧಿಕೃತ 'ಬಿಲ್ಲು ಮತ್ತು ಬಾಣ'ದ ಚಿಹ್ನೆಯನ್ನು ನೀಡಿರುವ ಚುನಾವಣಾ ಆಯೋಗದ ವಿರುದ್ಧ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರವೂ ವಾಗ್ದಾಳಿ ಮುಂದುವರಿಸಿದ್ದಾರೆ.
ಉದ್ಧವ್ ಠಾಕ್ರೆ ತಮ್ಮ ನಿವಾಸ ಮಾತೋಶ್ರೀ ಹೊರಗೆ ಸೇರಿದ್ದ ಬೃಹತ್ ಬೆಂಬಲಿಗರ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರ ಗುಲಾಮ. ಈ ರೀತಿ ಹಿಂದೆ ಎಂದೂ ನಡೆದಿರಲಿಲ್ಲ ಎಂದವರು ಆರೋಪಿಸಿದರು. ಇದೇ ವೇಳೆ, ಅವರು ಸಹನೆಯಿಂದ ಇರುವಂತೆ ಮತ್ತು ಮುಂದೆ ನಡೆಯಲಿರುವ ಮುಂಬೈ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಸಿದ್ಧತೆ ನಡೆಸುವಂತೆ ಬೆಂಬಲಿಗರಿಗೆ ಮನವಿ ಮಾಡಿದರು.
ತಮ್ಮ ಕಾರಿನ ಸನ್ ರೂಫ್ನಿಂದ ಹೊರಗೆ ನಿಂತು ಮಾತನಾಡುವ ಮೂಲಕ ಉದ್ಧವ್ ಠಾಕ್ರೆ ಅವರು, ತಮ್ಮ ತಂದೆ ಬಾಳಸಾಹೇಬ್ ಠಾಕ್ರೆ ಅವರನ್ನು ಅನುಕರಿಸಿದರು. ಬಾಳ ಸಾಹೇಬ್ ಅವರೂ ತಮ್ಮ ಕಾರ್ನ ರೂಫ್ನಿಂದ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಮ್ಮ ಪಕ್ಷದ ಚಿಹ್ನೆಯನ್ನು ಕಳ್ಳತನ ಮಾಡಲಾಗಿದೆ. ಅದನ್ನು ಕದ್ದ 'ಕಳ್ಳ'ನಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ತಮ್ಮ ವಿರುದ್ಧ ಬಂಡಾಯವೆದ್ದು, ಶಾಸಕರ ಗುಂಪಿನೊಂದಿಗೆ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ ಏಕನಾಥ್ ಶಿಂಧೆ ಬಗ್ಗೆ ಠಾಕ್ರೆ ಗುಡುಗಿದರು.
ಕಳೆದ 75 ವರ್ಷಗಳಲ್ಲಿ ಇಂತಹ ಹೊಡೆತ ಉಂಟಾಗಿರಲಿಲ್ಲ. ತಮ್ಮ ಗುಲಾಮಿ ಸರ್ಕಾರಿ ಯಂತ್ರವನ್ನು ನಮ್ಮ ಕಡೆಗೆ ಛೂ ಬಿಡುವ ಮೂಲಕ ನಮ್ಮನ್ನು ಅಂತ್ಯಗೊಳಿಸಬಹುದು ಎಂದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾವಿಸಿರಬಹುದು. ಆದರೆ ಶಿವಸೇನಾವನ್ನು ಮುಗಿಸುವುದು ಅಸಾಧ್ಯ ಎಂದು ಉದ್ಧವ್ ಕಿಡಿಕಾರಿದರು.
"ಶಿವಸೇನಾವನ್ನು ಮುಗಿಸಬಹುದು ಎಂದು ಪ್ರಧಾನಿ ಅಂದುಕೊಂಡಿದ್ದಾರೆ. ಆದರೆ ಶಿವಸೇನಾವನ್ನು ಎಂದಿಗೂ ಮುಗಿಸಲಾಗದು. ಸರ್ಕಾರದಲ್ಲಿನ ಅವರ ಸೇವಕರಿಗೆ ನಾನು ಹೇಳಲು ಬಯಸುತ್ತೇನೆ, ಸೇನಾ ಯಾರಿಗೆ ಸೇರಿದ್ದು ಎಂಬುದನ್ನು ಜನರು ನಿರ್ಧರಿಸುತ್ತಾರೆ ಎಂದು ಹೇಳಿದರು.
ನಿನ್ನೆ ಚುನಾವಣಾ ಆಯೋಗ ಗುಲಾಮಗಿರಿ ಪ್ರದರ್ಶಿಸಿದೆ. ನಿವೃತ್ತಿ ಬಳಿಕ ಚುನಾವಣಾ ಆಯುಕ್ತರೊಬ್ಬರು ರಾಜ್ಯವೊಂದರ ರಾಜ್ಯಪಾಲರಾಗಬಹುದು. ಏಕೆಂದರೆ ನ್ಯಾಯಾಧೀಶರೊಬ್ಬರು ಇತ್ತೀಚೆಗಷ್ಟೇ ರಾಜ್ಯಪಾಲರಾಗಿದ್ದಾರೆ. ಮೋದಿ ತಮ್ಮ ಸುತ್ತಲೂ ಅಂತಹ ಗುಲಾಮರನ್ನು ಇರಿಸಿಕೊಂಡಿದ್ದಾರೆ ಎಂದು ಆಂಧ್ರಪ್ರದೇಶ ರಾಜ್ಯಪಾಲರಾಗಿ ಆಯ್ಕೆಯಾದ ಕನ್ನಡಿಗ, ಸುಪ್ರೀಂಕೋರ್ಟ್ನ ಮಾಜಿ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಟೀಕಿಸಿದರು.
ಇದೇ ವೇಳೆ ಶಿಂಧೆ ಅವರಿಗೆ ಸವಾಲು ಹಾಕಿದ ಠಾಕ್ರೆ, "ಕಳ್ಳರಿಗೆ ಪವಿತ್ರ 'ಬಿಲ್ಲು ಮತ್ತು ಬಾಣ' ನೀಡಲಾಗಿದೆ. ಅದೇ ರೀತಿ 'ದೀವಟಿಗೆ'ಯನ್ನು (ಉದ್ಧವ್ ಬಣದ ಚಿಹ್ನೆ) ಕಸಿದುಕೊಳ್ಳಬಹುದು. ಅವರು ಗಂಡಸೇ ಆಗಿದ್ದರೆ, ಕದ್ದ 'ಬಿಲ್ಲು ಮತ್ತು ಬಾಣ'ದ ಜತೆ ನಮ್ಮ ಎದುರು ಬರಲಿ. ನಾವು 'ದೀವಟಿಗೆ'ಯೊಂದಿಗೆ ಚುನಾವಣೆ ಎದುರಿಸುತ್ತೇವೆ. ಇದು ನಮ್ಮ ಪರೀಕ್ಷೆ. ಯುದ್ಧ ಶುರುವಾಗಿದೆ ಎಂದು ಸವಾಲೆಸೆದರು.
By Mustafa Shaikh, Paras Harendra Dama: A day after the Election Commission allotted the name ‘Shiv Sena’ and its poll symbol ‘bow and arrow’ to the group led by Maharashtra Chief Minister Eknath Shinde, Shiv Sena (UBT) president Uddhav Thackeray addressed his supporters on Saturday. Uddhav Thackeray launched a scathing attack against Prime Minister Narendra Modi and the Election Commission.
10-10-25 07:06 pm
HK News Desk
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
10-10-25 10:37 pm
HK News Desk
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
10-10-25 06:52 pm
Mangalore Correspondent
ನಿಷೇಧಿತ ಪಿಎಫ್ಐ ಸಂಘಟನೆ ಪರವಾಗಿ ಪೋಸ್ಟ್ ; ಮುಸ್ಲಿಂ...
10-10-25 04:18 pm
Bharath Kumdel Arrest, Abdul Rahiman Murder:...
10-10-25 02:02 pm
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾದ ದಕ್ಷಿಣ ಕನ್ನಡ...
09-10-25 08:22 pm
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm