ಬ್ರೇಕಿಂಗ್ ನ್ಯೂಸ್
30-01-23 10:08 pm HK News Desk ದೇಶ - ವಿದೇಶ
ಲಕ್ನೋ, ಜ.30: ಉತ್ತರ ಪ್ರದೇಶದ ಗೋರಖನಾಥ ಮಂದಿರದ ಭದ್ರತಾ ಸಿಬಂದಿ ಮೇಲೆ ದಾಳಿ ಮಾಡಿದ್ದ ಅಹ್ಮದ್ ಮುರ್ತಜಾ ಅಬ್ಬಾಸಿಗೆ ಎನ್ಐಎ ವಿಶೇಷ ಕೋರ್ಟ್ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರಶಾಂತ್ ಕುಮಾರ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ಆರೋಪಿಗೆ ಐಪಿಸಿ 121 ಪ್ರಕಾರ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಪೊಲೀಸ್ ಸಿಬಂದಿಗೆ ಹಲ್ಲೆ ಮಾಡಿದ್ದಕ್ಕಾಗಿ ಐಪಿಸಿ 307 ಅಡಿ ಜೀವಾವಧಿ ಶಿಕ್ಷೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಗೋರಖನಾಥ ಮಂದಿರದಲ್ಲಿ ಭದ್ರತೆ ನೋಡಿಕೊಂಡಿದ್ದ ಸಶಸ್ತ್ರ ದಳದ ಸಿಬಂದಿಗೆ ಕಳೆದ ಎಪ್ರಿಲ್ ತಿಂಗಳಲ್ಲಿ ಕೈಯಲ್ಲಿ ಹರಿತ ಆಯುಧ ಇಟ್ಟುಕೊಂಡಿದ್ದ ಮುರ್ತಜಾ ಅಬ್ಬಾಸಿ ದಾಳಿ ನಡೆಸಿದ್ದ. ಆನಂತರ, ಭದ್ರತಾ ಸಿಬಂದಿ ಬೆನ್ನಟ್ಟಿ ಹಿಡಿದಿದ್ದರು. ಮುರ್ತಜಾ ಅಬ್ಬಾಸಿ ಕೆಮಿಕಲ್ ಇಂಜಿನಿಯರ್ ಪದವೀಧರನಾಗಿದ್ದು, ವಿಚಾರಣೆ ವೇಳೆ ಆತನಿಗೆ ಸಿರಿಯಾದ ಐಸಿಸ್ ಸಂಪರ್ಕ ಇರುವುದು ಪತ್ತೆಯಾಗಿತ್ತು. ಐಸಿಸ್ ಪರವಾಗಿ ಹೋರಾಡಲು ಹಣಕಾಸು ನೆರವನ್ನೂ ಪಡೆಯುತ್ತಿದ್ದ ಎನ್ನುವುದು ತಿಳಿದುಬಂದಿತ್ತು.
2015ರಲ್ಲಿ ಮುಂಬೈ ಐಐಟಿಯಲ್ಲಿ ಇಂಜಿನಿಯರಿಂಗ್ ಪೂರೈಸಿದ್ದ ಅಹ್ಮದ್ ಮುರ್ತಜಾ ಎರಡು ಕಂಪನಿಗಳಲ್ಲಿ ಕೆಲಸ ಮಾಡಿದ್ದ. ಆನಂತರ, 2017ರಲ್ಲಿ ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದ್ದ ಮುರ್ತಜಾಗೆ ಹಲವು ಡಾಕ್ಟರ್ ಗಳಿಗೆ ತೋರಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ಆತನ ಕುಟುಂಬಸ್ಥರು ತಿಳಿಸಿದ್ದರು. ಮದುವೆಯಾಗಿದ್ದರೂ, ಮಾನಸಿಕ ಅಸ್ವಸ್ಥನೆಂಬ ಕಾರಣಕ್ಕೆ ಪತ್ನಿ ಬಿಟ್ಟು ಹೋಗಿದ್ದಳು. 2022ರ ಎಪ್ರಿಲ್ ನಲ್ಲಿ ಗೋರಖನಾಥ ಮಂದಿರಕ್ಕೆ ಬಂದಿದ್ದ ಅಲ್ಲಿನ ಅರ್ಚಕನಿಗೆ ಹಲ್ಲೆ ಮಾಡಲೆಂದು ಒಳಗೆ ತೆರಳುತ್ತಿದ್ದಾಗಲೇ ಭದ್ರತಾ ಸಿಬಂದಿ ತಡೆದಿದ್ದು, ತನ್ನಲ್ಲಿದ್ದ ಚೂರಿಯಿಂದ ಅವರ ಮೇಲೆಯೇ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿದ್ದ.
An NIA court on Monday, January 30, sentenced Gorakhnath Temple attack accused Ahmed Murtaza Abbasi to death, after 60 days of continuous hearing. The NIA and Uttar Pradesh Anti-Terrorism Squad (ATS) completed the investigation of the case within 9 months and Abbasi was found guilty under the provisions of the Unlawful Activities (Prevention) Act and convicted for waging a war against the nation on Saturday.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
08-10-26 12:06 pm
HK News Staffer
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
08-10-26 11:08 am
HK News Staffer
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am
ಮೂಡುಶೆಡ್ಡೆ ವ್ಯಾಪ್ತಿಯಲ್ಲಿ 68 ಮತ ಅಳಿಸಿಹಾಕಲು ಅರ್...
07-10-26 04:45 pm
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm