ಬ್ರೇಕಿಂಗ್ ನ್ಯೂಸ್
21-12-22 08:37 pm HK News Desk ದೇಶ - ವಿದೇಶ
ನವದೆಹಲಿ, ಡಿ.21 : ಮಾನವ ರಹಿತ ವೈಮಾನಿಕ ವಾಹನಗಳ ವರ್ಗಕ್ಕೆ ಸೇರುವ ಎಂಕ್ಯೂ -9 ರೀಪರ್ ಡ್ರೋಣ್ ಗಳನ್ನು ಅಮೆರಿಕದಿಂದ ಖರೀದಿಸಲು ಭಾರತವು ಮುಂದಾಗಿದೆ. ಇದಕ್ಕಾಗಿ ಅಮೆರಿಕದೊಂದಿಗೆ ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಮಾಡಿಕೊಳ್ಳಲಿದೆ.
ನಿಖರವಾದ ಗುರಿಗಳನ್ನು ಲೇಸರ್ ಆಧರಿಸಿ ಬೆನ್ನತ್ತಿ ಕ್ಷಿಪಣಿಗಳನ್ನು ಉಡಾಯಿಸುವುದರಿಂದ ಈ ಮಾದರಿಯ ಡ್ರೋಣ್ ಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ ಅಸ್ತ್ರ ಎಂದು ಪರಿಗಣಿಸಲಾಗಿದೆ. ಅಲ್-ಖೈದಾ ಮುಖ್ಯಸ್ಥ ಅಯಮಾನ್ ಅಲ್ ಜವಾಹಿರಿಯನ್ನು ಕೊಲ್ಲಲು ಈ ಡ್ರೋಣ್ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಡಿ.22ರಂದು ನಿಗದಿಯಾಗಿರುವ ರಕ್ಷಣಾ ಉಪಕರಣಗಳ ಖರೀದಿ ಕುರಿತ ಮಂಡಳಿ ಸಭೆಯಲ್ಲಿ ಚರ್ಚೆಗೆ ಪಟ್ಟಿ ಮಾಡಲಾದ ಪ್ರಸ್ತಾವನೆಗಳಲ್ಲಿ ಎಂಕ್ಯು-9 ರೀಪರ್ ಖರೀದಿಯೂ ಒಂದು ಎನ್ನಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆ ಕಾರ್ಯದರ್ಶಿ, ರಕ್ಷಣಾ ಸಚಿವಾಲಯದ ಇತರ ಉನ್ನತ ಅಧಿಕಾರಿಗಳು, ಕಿರಿಯ ಸಚಿವರು ಮತ್ತು ಮೂರು ಸೇನೆಗಳ ಮುಖ್ಯಸ್ಥರು ಮಂಡಳಿಯ ಸದಸ್ಯರು. ಇವರ ಸಭೆಯಲ್ಲಿ ಈ ಕುರಿತು ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.
ಗುಪ್ತಚರ, ಕಣ್ಗಾವಲು, ವಿಚಕ್ಷಣ ಮತ್ತು ನಿಖರ ದಾಳಿಗಳಿಗೆ ಈ ಮಾದರಿಯ ಡ್ರೋಣ್ ಗಳನ್ನು ಬಳಸಲಾಗುತ್ತದೆ. ಇದನ್ನು ಭೂಮಿಯ ಮೇಲಿನ ನಿಲ್ದಾಣ ಮತ್ತು ಹಡಗಿನಿಂದಲೂ ನಿಯಂತ್ರಿಸಬಹುದು. ಮೂಲಗಳ ಪ್ರಕಾರ, ಸರ್ಕಾರವು 30 MQ-9 ವಾಹನಗಳನ್ನು ಮೂರು ಸೇನಾ ಪಡೆಗಳಿಗೆ ತಲಾ 10ರಂತೆ ಖರೀದಿಸಲು ಯೋಜಿಸಿದೆ.
ಭಾರತೀಯ ನೌಕಾಪಡೆಯು 2017 ರಲ್ಲಿ ಎರಡು MQ-9 ಗಳನ್ನು ಎರಡು ವರ್ಷಗಳ ಗುತ್ತಿಗೆಗೆ ಪಡೆದಿತ್ತು. ಹಿಂದೂ ಮಹಾಸಾಗರದಲ್ಲಿ ಕಣ್ಗಾವಲಿಗಾಗಿ ಅವುಗಳನ್ನು ಪಡೆಯಲಾಗಿತ್ತು.
India is likely to enter into a billion-dollar deal with the US to buy MQ-9 Reaper drones, which fall in the category of hunter-killer Unmanned Aerial Vehicles (UAVs). They are considered the world’s most dangerous as they use laser-guided Hellfire missiles for precision strikes. The drone was reportedly used to kill Al-Qaeda chief Ayman al-Zawahiri.Sources said their purchase is one of the proposals listed for discussion in the Defence Acquisition Council (DAC) meet scheduled on Thursday.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
08-10-26 12:06 pm
HK News Staffer
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
08-10-26 11:08 am
HK News Staffer
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am
ಮೂಡುಶೆಡ್ಡೆ ವ್ಯಾಪ್ತಿಯಲ್ಲಿ 68 ಮತ ಅಳಿಸಿಹಾಕಲು ಅರ್...
07-10-26 04:45 pm
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm