ಬ್ರೇಕಿಂಗ್ ನ್ಯೂಸ್
04-12-22 09:43 pm HK News Desk ದೇಶ - ವಿದೇಶ
ಅಹ್ಮದಾಬಾದ್, ಡಿ.4: ಮುಸ್ಲಿಂ ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದು ಇಸ್ಲಾಂ ವಿರೋಧಿ ನಡೆ ಎಂದು ಅಹ್ಮದಾಬಾದಿನ ಜಾಮಿಯಾ ಮಸೀದಿಯ ಶಾಹಿ ಇಮಾಮ್ ಶಬೀರ್ ಅಹ್ಮದ್ ಸಿದ್ದಿಕಿ ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಿ ಆಡಳಿತ ಕೇಂದ್ರಕ್ಕೆ ಬಂದರೆ, ಇಸ್ಲಾಮ್ ಧರ್ಮ ದುರ್ಬಲವಾಗುತ್ತದೆ. ಅದರಿಂದ ಇಸ್ಲಾಮಿನ ಕಟ್ಟುಪಾಡುಗಳನ್ನು ಉಳಿಸಿಕೊಳ್ಳಲು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಕರ್ನಾಟಕದ ಹಿಜಾಬ್ ಕುರಿತ ಪ್ರಶ್ನೆಗೆ, ಮುಸ್ಲಿಮ್ ಮಹಿಳೆಯರು ಶಾಸಕರು, ಸಚಿವ ಸ್ಥಾನಕ್ಕೆ ಬಂದರೆ ಏನಾಗುತ್ತದೆ ಅಂದರೆ, ಹಿಜಾಬ್ ಕುರಿತು ಪ್ರಶ್ನೆಯನ್ನು ಎತ್ತುವುದು ಸಾಧ್ಯವಾಗುವುದಿಲ್ಲ. ಅಂಥ ಪ್ರಶ್ನೆ ನಾವು ಮುಂದಿಟ್ಟಾಗ ನಿಮ್ಮ ಮಹಿಳೆಯರೇ ಇಲ್ಲಿ ಶಾಸಕರಾಗಿದ್ದಾರಲ್ಲಾ ಎಂಬ ಪ್ರಶ್ನೆ ಬರುತ್ತದೆ. ಅದಕ್ಕಾಗಿ ಮುಸ್ಲಿಂ ಮಹಿಳೆ ಆಡಳಿತ ಕೇಂದ್ರಕ್ಕೆ ಬರಬಾರದು ಅನ್ನುವುದು. ಯಾಕೆ, ನಮ್ಮಲ್ಲಿ ಪುರುಷರು ಇಲ್ಲವೇ ಎಂದವರು ಪ್ರಶ್ನೆ ಮಾಡಿದ್ದಾರೆ.
ಮುಸ್ಲಿಮ್ ಮಹಿಳೆಯರಿಗೆ ಟಿಕೆಟ್ ಕೊಡುವುದನ್ನು ವಿರೋಧಿಸಿ ಮನೆ- ಮನೆ ಅಭಿಯಾನ ನಡೆಸುತ್ತೇವೆ. ನಾವು ಎಲ್ಲರಲ್ಲಿಯೂ ನಮ್ಮ ಧರ್ಮದ ಬಗ್ಗೆ ಮನವರಿಕೆ ಮಾಡುತ್ತೇವೆ ಎಂದು ಶಬೀರ್ ಅಹ್ಮದ್ ಹೇಳಿದ್ದಾರೆ. ದೆಹಲಿ ಮಹಾನಗರ ಪಾಲಿಕೆಯಲ್ಲಿ ಮುಸ್ಲಿಂ ಮಹಿಳೆಯರು ಕಾರ್ಪೊರೇಟರ್ ಆಗಿದ್ದಾರಲ್ಲವೇ ಎಂಬ ಪ್ರಶ್ನೆಗೆ, ಇದರಿಂದ ನನಗೆ ಅರ್ಥ ಆಗೋದು ಏನಂದ್ರೆ, ಈಗ ಮಹಿಳೆಯರ ನಿಯಂತ್ರಣ ಬಂದಿದೆಯೆಂದು ರಾಜಕೀಯ ಪಕ್ಷಗಳವರು ಅನ್ಕೊಂಡಿದ್ದಾರೆ. ಹಾಗಾಗಿ ಮಹಿಳೆಯರನ್ನು ಟ್ರಾಪ್ ಮಾಡಿದರೆ, ಇಡೀ ಕುಟುಂಬವನ್ನು ಟ್ರಾಪ್ ಮಾಡಬಹುದೆಂಬ ಹುನ್ನಾರ ಇರಬಹುದು. ಇದರ ಹಿಂದೆ ಬೇರೆ ಯಾವುದೇ ಅಜೆಂಡಾ ಇದ್ದಂತೆ ತೋರುತ್ತಿಲ್ಲ ಎಂದು ಹೇಳಿದ್ದಾರೆ.
ಗುಜರಾತಿನಲ್ಲಿ ಡಿ.5ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಶಾಹಿ ಇಮಾಮ್ ಹೇಳಿಕೆ ಅಲ್ಲಿನ ಮುಸ್ಲಿಮ್ ಮಹಿಳೆಯರ ಮೇಲೆ ಪ್ರಭಾವ ಬೀರುತ್ತಾ ಅನ್ನುವ ಕುತೂಹಲ ಇದೆ.
#WATCH | Those who give election tickets to Muslim women are against Islam, weakening the religion. Are there no men left?: Shabbir Ahmed Siddiqui, Shahi Imam of Jama Masjid in Ahmedabad#Gujarat pic.twitter.com/5RpYLG7gqW
— ANI (@ANI) December 4, 2022
Shabbir Ahmed Siddiqui, the Shahi Imam of the Jama Masjid in Gujarat's Ahmedabad said those who give election tickets to Muslim women are against Islam and are weakening the religion. Talking to news agency ANI, he further asked, "Are there no men that you're bringing women?" Speaking on the idea of weakening Islam, he mentioned the hijab protests in Karnataka and said, "If you make women MLAs, ministers and councillors, then what will happen? We can no longer safeguard hijabs, and we won't be able to raise this issue."
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
08-10-26 12:06 pm
HK News Staffer
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
08-10-26 11:08 am
HK News Staffer
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am
ಮೂಡುಶೆಡ್ಡೆ ವ್ಯಾಪ್ತಿಯಲ್ಲಿ 68 ಮತ ಅಳಿಸಿಹಾಕಲು ಅರ್...
07-10-26 04:45 pm
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm