ಬ್ರೇಕಿಂಗ್ ನ್ಯೂಸ್
25-11-22 07:43 pm HK News Desk ದೇಶ - ವಿದೇಶ
ನವದೆಹಲಿ, ನ.25: ಪ್ರೇಯಸಿಯನ್ನು 35 ಪೀಸ್ ಗಳನ್ನಾಗಿ ತುಂಡರಿಸಿ ಕಾಡಿಗೆಸೆದು ಸಾಕ್ಷ್ಯ ನಾಶ ಮಾಡಿದ್ದ ಹಂತಕ ಅಫ್ತಾಬ್ ಪೂನಾವಾಲನನ್ನು ಪೊಲೀಸರು ಮಂಪರು ಪರೀಕ್ಷೆಗೆ ಒಳಪಡಿಸಿದ್ದಾರೆ. ಗುರುವಾರ ಎಂಟು ಗಂಟೆಗಳ ಕಾಲ ಮಂಪರು ಪರೀಕ್ಷೆ ನಡೆಸಿದ್ದು, 50ಕ್ಕಿಂತಲೂ ಹೆಚ್ಚು ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದಿದ್ದಾರೆ.
ದೆಹಲಿಯ ರೋಹಿಣಿಯಲ್ಲಿರುವ ಫಾರೆನ್ಸಿಕ್ ಸೈನ್ಸ್ ಲ್ಯಾಬ್ ನಲ್ಲಿ ಮಂಪರು ಪರೀಕ್ಷೆ ನಡೆದಿದ್ದು, ಬಾಲ್ಯ, ಆತನ ಕುಟುಂಬಸ್ಥರು, ಶ್ರದ್ಧಾ, ಆಕೆಯ ಕೊಲೆ, ಯಾಕಾಗಿ ಕೊಲೆ ನಡೆಸಿದ್ದು ಇತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅಧಿಕಾರಿಗಳು ಹಿಂದಿಯಲ್ಲಿ ಪ್ರಶ್ನೆ ಕೇಳಿದ್ದು, ಅಫ್ತಾಬ್ ಎಲ್ಲದಕ್ಕೂ ಇಂಗ್ಲಿಷಿನಲ್ಲಿ ಉತ್ತರ ನೀಡಿದ್ದಾನೆ. ಪ್ರಮುಖವಾಗಿ ಶ್ರದ್ಧಾ ಕೊಲೆ ಮಾಡಲು ಏನು ಕಾರಣ, ಆಕೆಯ ದೇಹದ ತುಂಡುಗಳನ್ನು ಯಾವೆಲ್ಲ ಭಾಗದಲ್ಲಿ ಹಾಕಿದ್ದೀಯ ಎಂಬ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅಲ್ಲದೆ, ಆಕೆಯ ಫೋನನ್ನು ಎಲ್ಲಿ ಬಚ್ಚಿಟ್ಟಿದ್ದೀಯಾ ಎಂಬ ಬಗ್ಗೆಯೂ ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಶ್ರದ್ಧಾ ಬಳಸುತ್ತಿದ್ದ ಫೋನ್ ಸಿಗದೇ ಇರುವುದರಿಂದ ಸಾಕ್ಷ್ಯಗಳನ್ನು ಕಲೆಹಾಕುವುದು ಪೊಲೀಸರಿಗೆ ಸವಾಲಾಗಿದೆ. ಬುಧವಾರ ಜ್ವರ, ಶೀತ ಇದ್ದುದರಿಂದ ಮಂಪರು ಪರೀಕ್ಷೆ ನಡೆಸಿರಲಿಲ್ಲ. ಗುರುವಾರ ಬಿಪಿ ಚೆಕ್ ಮಾಡಿ, ಅರೆ ಪ್ರಜ್ಞೆಗೆ ಗುರಿಪಡಿಸಿ ಪರೀಕ್ಷೆಗೆ ಒಡ್ಡಲಾಗಿದೆ. ಶ್ರದ್ಧಾಳ ಶವವನ್ನು ಕತ್ತರಿಸಲು ಬಳಸಿದ ಆಯುಧವೂ ಸಿಕ್ಕಿಲ್ಲ. ಅದರ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದ್ದಾರೆ.
ಇದೇ ವೇಳೆ, ಶ್ರದ್ಧಾ ಮತ್ತು ಅಫ್ತಾಬ್ ಗೆಳೆಯರಿಂದಲೂ ಪೊಲೀಸರು ಹೇಳಿಕೆ ದಾಖಲು ಮಾಡಿದ್ದಾರೆ. ಶ್ರದ್ಧಾಳನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡುತ್ತಿದ್ದ ಬಗ್ಗೆ ಆಕೆಯ ಗೆಳೆತಿಯರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಇದಲ್ಲದೆ, ಶ್ರದ್ಧಾ ಮತ್ತು ಅಫ್ತಾಬ್ ಗೆ ಕಾಮನ್ ಫ್ರೆಂಡ್ ಆಗಿರುವ ಬೆಂಗಳೂರಿನಲ್ಲಿ ನೆಲೆಸಿರುವ ಕೆಲವರ ಹೇಳಿಕೆ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಕೆಲವು ಸ್ನೇಹಿತರು ಅಫ್ತಾಬ್ ಡ್ರಗ್ಸ್ ಸೇವಿಸುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನನ್ನನ್ನು ಕೊಲ್ಲುತ್ತಾನೆಂದು ದೂರು ನೀಡಿದ್ದ ಶ್ರದ್ಧಾ
ಈ ನಡುವೆ, 2020ರಲ್ಲಿ ಶ್ರದ್ಧಾ ವಾಲ್ಕರ್ ತನ್ನ ಪ್ರಿಯಕರ ಅಫ್ತಾಬ್ ವಿರುದ್ಧ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ತುಲಿಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಪತ್ರ ವೈರಲ್ ಆಗಿದೆ. ತನಗೆ ಅಫ್ತಾಬ್ ಹಲ್ಲೆ ನಡೆಸುತ್ತಿದ್ದಾನೆ, ತನ್ನನ್ನು ತುಂಡು ತುಂಡಾಗಿಸಿ ಕತ್ತರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆಂದು ತನ್ನ ಹುಟ್ಟೂರು ಪಾಲ್ಘಾರ್ ಜಿಲ್ಲೆಯ ತುಲಿಂಜ್ ಪೊಲೀಸರಿಗೆ ದೂರು ಅರ್ಜಿ ಬರೆದಿದ್ದ. ದೂರು ಅರ್ಜಿ ಬರೆದಿರುವುದನ್ನು ತುಲಿಂಜ್ ಪೊಲೀಸರು ದೃಢಪಡಿಸಿದ್ದಾರೆ. ಹಳೆಯ ದೂರಿನ ಪ್ರತಿ ಈಗ ವೈರಲ್ ಆಗುತ್ತಿದ್ದು, ಎರಡು ವರ್ಷಗಳ ಹಿಂದೆಯೇ ಶ್ರದ್ಧಾಳನ್ನು ಕೊಲ್ಲಲು ಯೋಜನೆ ಹಾಕಿದ್ದನೇ ಎಂಬ ಬಗ್ಗೆ ಸಂಶಯ ಉಂಟಾಗಿದೆ.
ತನ್ನ ಮೇಲೆ ದಿನವೂ ಹಲ್ಲೆ ನಡೆಸುತ್ತಿದ್ದಾನೆ, ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿದ್ದಾನೆ. ಕಳೆದ ಆರು ತಿಂಗಳಿಂದ ನಾನು ಆತನ ಜೊತೆಗೆ ಒಟ್ಟಿಗಿದ್ದೇನೆ. ಇದು ಆತನ ಕುಟುಂಬಸ್ಥರಿಗೂ ಗೊತ್ತಿದೆ. ಅವರು ವೀಕೆಂಡಲ್ಲಿ ನಮ್ಮ ಮನೆಗೆ ಬರುತ್ತಾರೆ. ನನಗೆ ಹಲ್ಲೆ ನಡೆಸುವ ವಿಚಾರ ಅವರಿಗೂ ಗೊತ್ತಿದೆ. ಆದರೆ ಅವರೇನೂ ಮಾಡುವುದಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ, ಕೊಲ್ಲುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ನನ್ನನ್ನು ಬ್ಲಾಕ್ಮೇಲ್ ಮಾಡುತ್ತಾನೆ, ನಾವು ಮದುವೆಯಾಗಲು ಬಯಸಿದ್ದೆವು. ಆದರೆ ಆತನ ಈ ರೀತಿಯ ವರ್ತನೆಯಿಂದ ಬೇಸತ್ತಿದ್ದೇನೆ. ಆತನಿಂದ ದೂರವಾಗಲು ಬಯಸಿದ್ದೇನೆ ಎಂದು ಪತ್ರದಲ್ಲಿ ಆಕೆ ಬರೆದಿದ್ದು, ಪೊಲೀಸರು ಅರ್ಜಿ ಸ್ವೀಕರಿಸಿದ್ದೂ ಆಗಿತ್ತು. ಆದರೆ ಆ ಬಗ್ಗೆ ಪೊಲೀಸರು ಯಾವುದೇ ಕ್ರಮ ಜರುಗಿಸಿರಲಿಲ್ಲ.
The polygraph test of Aaftab Ameen Poonwala, the prime accused in the Shraddha Walkar murder case, went on for about eight hours on Thursday at the Forensic Science Laboratory (FSL) in Delhi's Rohini. Poonawala was asked how he committed the crime, his relationship with Shraddha, where he hid the evidence and questions about his childhood and family, among other things.
11-10-25 11:03 pm
Bangalore Correspondent
ಮೂವರು ಮಕ್ಕಳ ಮಮ್ಮಿಗೆ ಇನ್ನೊಬ್ಬನ ಜೊತೆ ಲವ್ವಿ ಡವ್ವ...
11-10-25 10:05 am
ಮುಂದಿನ ದಿನಗಳಲ್ಲಿ ಹಾಸನಾಂಬೆ ಸಾನಿಧ್ಯವೇ ಇರುವುದಿಲ್...
10-10-25 07:06 pm
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
11-10-25 12:52 pm
HK News Desk
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
11-10-25 10:24 pm
Mangalore Correspondent
Malayalam actor Jayakrishnan Arrest, Mangalor...
11-10-25 07:18 pm
Karkala Suicide Case, Abishek Death Note: ನನ್...
11-10-25 05:52 pm
Muslim Terrorist, Mangalore, Jayakrishnan Ker...
11-10-25 11:11 am
ಮುಡಾ ಲೇಔಟ್ ; ಕುಂಜತ್ತ್ ಬೈಲಿನಲ್ಲಿ ಅವೈಜ್ಞಾನಿಕ ರೀ...
10-10-25 06:52 pm
10-10-25 09:48 pm
Udupi Correspondent
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm