ಬ್ರೇಕಿಂಗ್ ನ್ಯೂಸ್
12-11-22 06:44 pm HK News Desk ದೇಶ - ವಿದೇಶ
ಬೇಗಂಪೇಟ್, ನ.12 : ವಿರೋಧಿಗಳ ಕಡೆಯಿಂದ ನಾನು ನಿತ್ಯವೂ ಸುಮಾರು 2-3 ಕೆಜಿ ಬೈಗುಳಗಳನ್ನು ತಿನ್ನುತ್ತೇನೆ. ಈ ಬೈಗುಳಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ನನಗೆ ಭಗವಂತ ನೀಡಿದ್ದಾನೆ. ಇದರಿಂದಲೇ ದೇಶಕ್ಕಾಗಿ ಅವಿರತವಾಗಿ ದುಡಿಯುವ ಶಕ್ತಿಯನ್ನು ಗಳಿಸುತ್ತಿದ್ದೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಂಗ್ಯವಾಗಿ ಹೇಳಿದ್ಧಾರೆ.
ತೆಲಂಗಾಣದ ಬೇಗಂಪೇಟ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಆಡಳಿತಾರೂಢ ಟಿಆರ್‌ಎಸ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಹೆಸರನ್ನು ಪ್ರಸ್ತಾಪಿಸದೇ, ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ಆರೋಪವನ್ನು ಪ್ರಧಾನಿ ಮೋದಿ ಹೊರಿಸಿದರು.

ತೆಲಂಗಾಣ ರಾಜ್ಯಕ್ಕೆ "ಜನ ಮೊದಲು, ನಂತರ ಕುಟುಂಬ" ಎಂಬ ನೀತಿಯ ಮೇಲೆ ಕೆಲಸ ಮಾಡುವ ಸರ್ಕಾರದ ಅವಶ್ಯಕತೆಯಿದೆ. ಸದ್ಯ ರಾಜ್ಯದಲ್ಲಿ "ಕುಟುಂಬ ಮೊದಲು, ಜನ ನಂತರ" ಎಂಬ ನೀತಿಯನ್ನು ಹೊಂದಿರುವ ಸರ್ಕಾರವಿದೆ. ತೆಲಂಗಾಣದ ಸರ್ವಾಂಗೀಣ ಅಭಿವೃದ್ಧಿಗೆ ಬದಲಾವಣೆ ಅನಿವಾರ್ಯವಾಗಿದೆ ಎಂದು ಪ್ರಧಾನಿ ಮೋದಿ ಅವರು ಸಿಎಂ ಕೆಸಿಆರ್ ಕುಟುಂಬದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಾನು ವಿರೋಧಿಗಳಿಂದ ನಿತ್ಯವೂ 2-3 ಕೆಜಿ ಬೈಗುಳಗಳನ್ನು ತಿನ್ನುತ್ತೇನೆ. ದಿನ ಬೆಳೆಗಾದರೆ ನನ್ನನ್ನು ಬೈಯುವುದೇ ಇವರ ಕಾಯಕವಾಗಿ ಬಿಟ್ಟಿದೆ. ನನ್ನನ್ನು ಜ್ಞಾಪಿಸಿಕೊಳ್ಳದೇ ಹೋದರೆ, ಇವರ ರಾಜಕೀಯ ವ್ಯಾಪಾರ ನಡೆಯುವುದಿಲ್ಲ. ಹೀಗಾಗಿಯೇ ನಾನು ಕೂಡ ಈ ಬೈಗುಳವನ್ನು ಸಹಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ನನಗೆ ಇವರ ಬೈಗುಳಗಳೇ ಶಕ್ತಿ ಎಂದು ಪ್ರಧಾನಿ ಮೋದಿ ವಿರೋಧಿಗಳ ಕಾಲೆಳೆದರು.

ಮೋದಿಯನ್ನು ನಿಂದಿಸಿ, ಬಿಜೆಪಿಯನ್ನು ನಿಂದಿಸಿ, ಆದರೆ ನೀವು ತೆಲಂಗಾಣ ಜನರನ್ನು ನಿಂದಿಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ. ರಾಜ್ಯದ ಜನತೆ ಬದಲಾವಣೆ ಬಯಸಿದ್ದು, ಈ ಬದಲಾವಣೆಗೆ ಮುಂಬರುವ ಲೋಕಸಭೆ ಚುನಾವಣೆ ದಿಕ್ಸೂಚಿಯಾಗಲಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.
ತಮ್ಮ ವಿರುದ್ಧ ತನಿಖಾ ಸಂಸ್ಥೆಗಳು ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲಿವೆ ಎಂಬ ಭಯದಿಂದಲೇ, ವಿರೋಧ ಪಕ್ಷಗಳು ರಾಷ್ಟ್ರೀಯ ಒಕ್ಕೂಟವನ್ನು ರಚಿಸಲು ಪ್ರಯತ್ನಿಸುತ್ತಿವೆ. ಲೋಕಸಭೆ ಚುನಾವಣೆ ಹೊತ್ತಿಗೆ ಯಾವೆಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಮೋದಿ ವಿರುದ್ಧ ತಿರುಗಿ ಬೀಳುತ್ತವೆ ಎಂಬುದನ್ನು ನೀವೇ ನೋಡಿ ಎಂದು ಪ್ರಧಾನಿ ಲೇವಡಿ ಮಾಡಿದರು.
ಎಲ್ಲರ ಸಹಕಾರ, ಎಲ್ಲರ ಅಭಿವೃದ್ಧಿ, ಎಲ್ಲರ ವಿಶ್ವಾಸ ಇದು ಬಿಜೆಪಿಯ ಮೂಲಮಂತ್ರವಾಗಿದ್ದು, ದೇಶದ ಜನ ಬಿಜೆಪಿಯ ಈ ನೀತಿಯೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ವಿರೋಧ ಪಕ್ಷಗಳು ಮೋದಿಯನ್ನಲ್ಲ, ಈ ದೇಶವನ್ನು ಸೋಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ದೇಶದ ಜನ ಹೀಗಾಗಲು ಬಿಡುವುದಿಲ್ಲ ಎಂಬ ಪೂರ್ಣ ವಿಶ್ವಾಸ ನನ್ನಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
Prime Minister Narendra Modi, in an afternoon speech to Bharatiya Janata Party workers at Begumpet airport in Telangana, said he consumes up to “three kilograms” of verbal abuses every day, which he claimed in jest, converts into nutrition. The comment led Telangana Rashtra Samithi leader Y. Sathish Reddy to wryly note on Twitter that while the prime minister has “found a source” of nutrition, crores in India are undernourished
11-03-26 12:57 pm
HK News Staffer
ಶಿಕ್ಷಕರಿಗೆ ಬೀದಿ ನಾಯಿ ನಿಯಂತ್ರಣ ಜವಾಬ್ದಾರಿ ಕೊಟ್ಟ...
11-03-26 11:48 am
LPG ಸಿಲಿಂಡರ್ ಪೂರೈಕೆ ಸ್ಥಗಿತ ; ಬೆಂಗಳೂರಿನಲ್ಲಿ ಹಲ...
10-03-26 01:47 pm
ಗುರುಗ್ರಾಮ್ನಲ್ಲಿ ನಿರ್ಮಾಣ ಹಂತದ ಗೋಡೆ ಕುಸಿತ ; 7...
10-03-26 11:04 am
ಸ್ತ್ರೀ–ಪುರುಷರ ನಗ್ನ ಫೋಟೋಗಳು, ಕೊಳೆತ ಟೊಮೆಟೋ ; ಬೆ...
10-03-26 10:49 am
10-03-26 09:46 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
11-03-26 03:25 pm
HK News Staffer
ಕಂಬಳಕ್ಕೆ ಪ್ರದೇಶದ ಗಡಿ ಇಲ್ಲ ; ಕರಾವಳಿ ಸಂಸ್ಕೃತಿ ಬ...
11-03-26 11:54 am
ಬಂಟ್ವಾಳದ ಬಸ್ಸಿನಲ್ಲಿದ್ದಾಗ ಬ್ಯಾಗಿನಿಂದ 180 ಗ್ರಾಂ...
10-03-26 05:00 pm
ಬಿಸಿಲಿಗೆ ತತ್ತರಿಸಿದ ಅಳಿಲಿನ ದಣಿವು ನೀಗಿಸಿದ ಟ್ರಾಫ...
09-03-26 09:52 pm
ಗಲ್ಫ್ ಯುದ್ಧ ; ಮಂಗಳೂರಿನಿಂದ ದುಬೈ, ಜೆದ್ದಾ ಸೇರಿ ಹ...
09-03-26 07:29 pm
11-03-26 10:58 am
HK News Staffer
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm
Vexon fraud Company, FIR: ಬ್ಲೇಡ್ ಕಂಪನಿ ವೆಕ್ಸನ...
28-02-26 11:12 am