ಬ್ರೇಕಿಂಗ್ ನ್ಯೂಸ್
04-10-22 05:55 pm HK News Desk ದೇಶ - ವಿದೇಶ
ನವದೆಹಲಿ, ಅ.4: ಉತ್ತರಾಖಂಡದಲ್ಲಿ ದಿಢೀರ್ ಹಿಮಾಪಾತ ಉಂಟಾಗಿದ್ದು ಹತ್ತು ಮಂದಿ ಪರ್ವತಾರೋಹಿಗಳು ಸಾವು ಕಂಡಿದ್ದಾರೆ. ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ದ್ರೌಪದಿ ಕಾ ದಂಡ್ ಎನ್ನುವ ಶಿಖರದಲ್ಲಿ ಘಟನೆ ಸಂಭವಿಸಿದೆ.
ಪರ್ವತಾರೋಹಣದ ಬಗ್ಗೆ ತರಬೇತಿ ನೀಡುವ ಉತ್ತರಾಖಂಡದ ನೆಹರು ಇನ್ ಸ್ಟಿಟ್ಯೂಟ್ ಕೇಂದ್ರಕ್ಕೆ ಸೇರಿದ 34 ಮಂದಿ ಶಿಬರಾರ್ಥಿಗಳು ಮತ್ತು ಏಳು ಮಂದಿ ಶಿಕ್ಷಕರು ಸೇರಿ ತರಬೇತಿಗಾಗಿ ತೆರಳಿದ್ದರು. ಸೋಮವಾರ ಬೆಳಗ್ಗೆ ದಿಢೀರ್ ಹಿಮಪಾತ ಉಂಟಾಗಿದ್ದು, ಹತ್ತಕ್ಕೂ ಹೆಚ್ಚು ಮಂದಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ನಾಲ್ಕು ಮಂದಿಯ ಶವ ಸಿಕ್ಕಿದೆ ಎಂದು ನೆಹರು ಇನ್ ಸ್ಟಿಟ್ಯೂಟ್ ಕೇಂದ್ರದ ಪ್ರಿನ್ಸಿಪಾಲ್ ಕರ್ನಲ್ ಅಮಿತ್ ಬಿಷ್ತ್ ತಿಳಿಸಿದ್ದಾರೆ.

ಕರ್ನಾಟಕದ ನಿವಾಸಿಗಳು ಸೇರಿದಂತೆ ವಿವಿಧ ರಾಜ್ಯಗಳ ಯುವ ಪರ್ವತಾರೋಹಿಗಳು ಚಾರಣದಲ್ಲಿದ್ದರು. 29 ಮಂದಿ ಹಿಮದ ನಡುವೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗುತ್ತಿದೆ. ಮೃತಪಟ್ಟವರು ಯಾರು, ಎಲ್ಲಿಯವರು ಅನ್ನೋದು ತಿಳಿದುಬಂದಿಲ್ಲ. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. 13 ಸಾವಿರ ಅಡಿ ಎತ್ತರದಲ್ಲಿ ಘಟನೆ ಸಂಭವಿಸಿದ್ದು, ಗಾಯಾಳು ಮತ್ತು ಮೃತರನ್ನು ಹೆಲಿಕಾಪ್ಟರ್ ಮೂಲಕ ಮೈಥಿಲಿ ಹೆಲಿಪ್ಯಾಡ್ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆಗೆ ಮಾತನಾಡಿದ್ದು ಸೇನೆಯ ನೆರವು ಕೇಳಿದ್ದಾರೆ. ಇಂಡೋ ಟಿಬೆಟ್ ಫೋರ್ಸ್ ಮತ್ತು ಎನ್ ಡಿಆರ್ ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಧಾಮಿ ತಿಳಿಸಿದ್ದಾರೆ.
Bodies of four mountaineers were found in an avalanche at Mount Draupadi Ka Danda – II peak in Uttarakhand’s Uttarkashi district on Tuesday, NIM Principal Colonel Amit Bisht said. A team of 34 trainee mountaineers and seven instructors from the Nehru Institute of Mountaineering (NIM) was caught in an avalanche while returning, NIM Principal
16-01-26 09:38 pm
Bangalore Correspondent
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
16-01-26 06:33 pm
HK News Desk
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
16-01-26 10:28 pm
Mangalore Correspondent
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
ಡಿಮಾರ್ಟ್ ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಜಾಹಿರ...
16-01-26 12:31 pm
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm