ಬ್ರೇಕಿಂಗ್ ನ್ಯೂಸ್
12-09-22 07:08 pm HK News Desk ದೇಶ - ವಿದೇಶ
ನವದೆಹಲಿ, ಸೆ.12: ಕಾಲೇಜು ತರಗತಿಯಲ್ಲಿ ಹಿಜಾಬ್ ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 23 ಮೇಲ್ಮನವಿ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ, ಅರ್ಜಿದಾರರ ಪರ ವಕೀಲರು ಸಿಕ್ಖರ ಪೇಟಕ್ಕೆ ಅವಕಾಶ ಇರುವಾಗ ಮುಸ್ಲಿಮರ ಹಿಜಾಬ್ ಗೆ ಯಾಕೆ ಅವಕಾಶ ಕೊಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಯೂಸುಫ್ ಮಚ್ಲಾ, ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಮಾಡಿರುವುದು ಮುಸ್ಲಿಂ ಹೆಣ್ಮಕ್ಕಳ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಂಡಂತಾಗಿದೆ. ಯಾರೇ ಆಗಲಿ, ತಮ್ಮ ಧರ್ಮದ ಆಶಯದಂತೆ ಜೀವಿಸಲು ಹಕ್ಕು ಹೊಂದಿರುತ್ತಾರೆ. ಕರ್ನಾಟಕ ಸರಕಾರದ ಆದೇಶ ಈ ಹಕ್ಕುಗಳಿಗೆ ಚ್ಯುತಿ ತಂದಿದೆ. ಸರಕಾರದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಧರ್ಮದ ಕುರಿತ ಮುಸ್ಲಿಮರ ಭಾವನೆಯನ್ನು, ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತೆ ಮಾಡಿದೆ. ಧಾರ್ಮಿಕ ಆಚರಣೆಯ ಹಕ್ಕನ್ನು ಮೊಟಕುಗೊಳಿಸಿದಂತಾಗಿದೆ ಎಂದು ಹೇಳಿದರು.
ತಲೆಗೆ ಒಂದು ತುಂಡು ಬಟ್ಟೆ ಹಾಕಿಕೊಂಡ ಮಾತ್ರಕ್ಕೆ ನಿರ್ದಿಷ್ಟ ಸಮುದಾಯದ ಶೈಕ್ಷಣಿಕ ಹಕ್ಕುಗಳನ್ನು ಕಿತ್ತುಕೊಳ್ಳಲಾಗದು. ಸಿಕ್ಖರು ಪೇಟ ಹಾಕುವುದನ್ನು ನಾವು ಆಕ್ಷೇಪಿಸುವುದಿಲ್ಲ. ರಾಜಸ್ಥಾನದಲ್ಲಿ ಮಹಿಳೆಯರು ಸೀರೆ ಸೆರಗಿನಲ್ಲಿ ಮುಖ ಮುಚ್ಚಿಕೊಳ್ಳುವ ಫೂಂಗಟ್ ಪದ್ಧತಿಯನ್ನು ನಾವು ಸಂಸ್ಕೃತಿ ಅನ್ನುತ್ತೇನೆ. ಅಮೃತಸರದಲ್ಲಿ ನಾವು ದೇವಾಲಯ ಪ್ರವೇಶಿಸುವಾಗ ತಲೆಗೆ ಬಟ್ಟೆ ಹಾಕ್ಕೊಂಡು ಒಳಗೆ ಹೋಗುತ್ತೇವೆ. ದೇಶದಲ್ಲಿ ಇವೆಲ್ಲ ವೈವಿಧ್ಯಗಳನ್ನು ಒಪ್ಪಿಕೊಂಡಿರುವಾಗ ಹಿಜಾಬನ್ನು ಒಪ್ಪಿಕೊಳ್ಳಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದರು. ಇದೇ ವೇಳೆ, 2017ರಲ್ಲಿ ನ್ಯಾಯಮೂರ್ತಿ ಪುಟ್ಟಸ್ವಾಮಿ ನೀಡಿದ್ದ ಖಾಸಗಿತನ ವೈಯಕ್ತಿಕ ಹಕ್ಕು ಎಂಬ ಆದೇಶವನ್ನು ವಕೀಲರು ಕೋರ್ಟಿನಲ್ಲಿ ಓದಿ ಹೇಳಿದ್ದಾರೆ. ಈಮೂಲಕ ಎಲ್ಲರೂ ಸಮಾನ ಸಮವಸ್ತ್ರ ಧರಿಸಬೇಕೆಂಬ ನಿಮಯದಡಿ ಖಾಸಗಿತನ ಮತ್ತು ವ್ಯಕ್ತಿಯ ಶಿಕ್ಷಣದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದರು.
ನ್ಯಾ.ಹೇಮಂತ್ ಗುಪ್ತಾ ಮತ್ತು ಸುಧಾಂಶು ಅಧಿಕಾರಿ ಅವರುಳ್ಳ ದ್ವಿಸದಸ್ಯ ಪೀಠವು ಈ ಕುರಿತು ಸಲ್ಲಿಸಲಾಗಿರುವ 23 ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಇದೇ ವೇಳೆ, ಅರ್ಜಿದಾರರ ಪರವಾಗಿ ಎರಡು ದಿನ ಮತ್ತು ಕರ್ನಾಟಕ ಸರಕಾರದ ಪರವಾಗಿ ಎರಡು ದಿನವನ್ನು ವಾದ ಮಂಡನೆಗೆ ನೀಡಲಾಗಿದ್ದು ಆಮೂಲಕ ಶೀಘ್ರದಲ್ಲೇ ತೀರ್ಪು ನೀಡುವ ಸುಳಿವನ್ನು ನ್ಯಾಯಾಧೀಶರು ನೀಡಿದ್ದಾರೆ. ಸೋಮವಾರ ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಸೆ.14ಕ್ಕೆ ಮುಂದೂಡಿದ್ದಾರೆ.
The Supreme court adjourned the hearing on the batch of petitions challenging the Karnataka High Court’s verdict upholding the decision of the state government’s order on the ban on Hijab in educational institutions of the state for the fourth day. The matter will be taken up by the top court on September 14 i.e. Wednesday at 11.30 am.The apex court, while hearing the matter on September 7, had adjourned the case till September 12.
12-10-25 08:59 pm
Bangalore Correspondent
D.K. Shivakumar, MLA Munirathna, RSS: ಮುನಿರತ್...
12-10-25 08:05 pm
ಯಾವ ಸಂಪುಟ ವಿಸ್ತರಣೆಯೂ ಇಲ್ಲ, ಎಲ್ಲ ಗಾಳಿ ಸುದ್ದಿ ಅ...
11-10-25 11:03 pm
ಮೂವರು ಮಕ್ಕಳ ಮಮ್ಮಿಗೆ ಇನ್ನೊಬ್ಬನ ಜೊತೆ ಲವ್ವಿ ಡವ್ವ...
11-10-25 10:05 am
ಮುಂದಿನ ದಿನಗಳಲ್ಲಿ ಹಾಸನಾಂಬೆ ಸಾನಿಧ್ಯವೇ ಇರುವುದಿಲ್...
10-10-25 07:06 pm
12-10-25 10:19 pm
HK News Desk
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
12-10-25 09:53 pm
Mangalore Correspondent
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
ಅಫ್ಘಾನ್ ಸಚಿವನಿಂದ ಭಾರತದಲ್ಲಿ ಮಹಿಳೆಯರಿಗೆ ಅವಮಾನ ;...
12-10-25 05:02 pm
Girish Mattannavar Mocks Dr. Mahabala Shetty:...
11-10-25 10:24 pm
12-10-25 03:52 pm
Mangalore Correspondent
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm